ದೊಡ್ಡಬಳ್ಳಾಪುರ, ಫೆಬ್ರವರಿ 02): ದೇವಸ್ಥಾನದ (ದೇವಾಲಯ) ಸುಪ್ರಭಾತ ಹಾಡಿನ ವಿಚಾರಕ್ಕೆ ಹಿಂದೂ ಹಾಗೂ ಮುಸ್ಲಿಂ (ಹಿಂದೂ ಮತ್ತು ಮುಸ್ಲಿಂ) ಯುವಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಶಾಂತಿ ಜಿಲ್ಲೆ ನಡೆದಿದೆ. ದೊಡ್ಡಬಳ್ಳಾಪುರ ನಗರದ ಶಾಂತಿ ನಗರದ ಶನಿಮಹಾತ್ಮ ದೇವಸ್ಥಾನದಲ್ಲಿ ಇಂದು (ಫೆಬ್ರವರಿ 02) ಬೆಳಗ್ಗೆ ಸುಪ್ರಭಾತ ಹಾಡು ಹಾಕಿದ್ದು, ಇದಕ್ಕೆ ಮುಸ್ಲಿಂ ಯುವಕನೋರ್ವ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ತಾಯಿ ಮಲಗಿದ್ದಾಳೆ ಸೌಂಡ್ ಕಡಿಮೆ ಮಾಡು ಎಂದಿದ್ದಾನೆ. ಇದಕ್ಕೆ ಆಕ್ರೋಶಗೊಂಡು ಹಿಂದೂ ಮಸೀದಿಗಳಲ್ಲಿ ಅಜಾನ್ ಕೂಗಿದರೆ ನಾವು ಹೀಗೆ ಕೇಳುತ್ತೀವಾ ಎಂದು ಪ್ರಶ್ನಿಸಿದರು. ಹೀಗೆ ಎರಡು ಗುಂಪಿನ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ದೇವಸ್ಥಾನದ ಪೂಜಾರಿ ನೀಡಿದ ದೂರಿನನ್ವಯ ದೊಡ್ಡಬಳ್ಳಾಪುರ ನಗರ ಪೊಲೀಸರಿಂದ ಎನ್‌ಸಿಆರ್ ದಾಖಲಾಗಿದ್ದು, ಎರಡು ಕಡೆಯವರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.