ಹುಬ್ಬಳ್ಳಿ, ಫೆಬ್ರವರಿ 02: ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಸಾಂಬಾರಿನಲ್ಲಿ ನುಸಿ ಹುಳ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ತಾರಿಹಾಳ ಸೇರಿ ವಿವಿಧ ಶಾಲೆಗೆ ಮಧ್ಯಾಹ್ನ ಬಿಸಿ ಊಟ ಮತ್ತು ಸಾಂಬಾರು ಪೂರೈಕೆ ಮಾಡಲಾಯಿತು. ಶಾಲೆಗೆ ಪೂರೈಕೆ ಮಾಡಿದ್ದ ಸಾಂಬಾರನಲ್ಲಿ ನುಸಿ ಹುಳ ಪತ್ತೆ ಆಗಿದೆ. ಸಾಂಬಾರಿ ನುಸಿ ನೋಡಿದ ವಿದ್ಯಾರ್ಥಿಗಳಲ್ಲಿ ಊಟ ಬಿಟ್ಟು ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಊಟ ಪೂರೈಸುವ ಸಂಸ್ಥೆ ವಿರುದ್ಧ ಕೋಪ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.