ಮತ್ತೆ ನಿಫಾ ಟೆನ್ಷನ್​: ಕರ್ನಾಟಕದಲ್ಲಿ ಹೈ ಅಲರ್ಟ್​, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್​

ಮತ್ತೆ ನಿಫಾ ಟೆನ್ಷನ್​: ಕರ್ನಾಟಕದಲ್ಲಿ ಹೈ ಅಲರ್ಟ್​, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್​


ಬೆಂಗಳೂರು, ಫೆಬ್ರವರಿ 02: ದೇಶದ ವಿವಿಧ ರಾಜ್ಯಗಳಲ್ಲಿ ನಿಫಾ ವೈರಸ್ಮತ್ತೆ ಸದ್ದು ಮಾಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಈ ವೈರಸ್ ಸೋಂಕಿತ ಬಾವಲಿಗಳು ತಿಂಡಿ ಹಣ್ಣುಗಳನ್ನು ತಿಂದರೆ ಅಥವಾ ಹಂದಿಗಳ ಮಾಂಸವನ್ನು ಸೇವಿಸುವುದರಿಂದ ಹೆಚ್ಚಾಗಿ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೂ ಕೆಲವೊಮ್ಮೆ ಇದು ವರ್ಗಾವಣೆ ಆಗಬಹುದು. ಅತ್ಯಂತ ಅಂಶವೆಂದರೆ ನಿಫಾ ವೈರಸ್ ಸೋಂಕಿತರ ಮರಣ ಪ್ರಮಾಣ ಶೇ. 60-75 ರಷ್ಟಿರುವ ಕಾರಣ, ಈ ವೈರಸ್ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ನಿಫಾ ಸೋಂಕಿನ ಲಕ್ಷಣಗಳೇನು?

  • ಜ್ವರ
  • ಮೈ ಕೈ ನೋವು
  • ಸುಸ್ತು
  • ತಲೆನೋವು
  • ಶೀತ
  • ಗಂಟಲು ಕೆರೆತ ಅಥವಾ ಗಂಟಲಿನಲ್ಲಿ ನೋವು
  • ತಲೆನೋವು
  • ಕುತ್ತಿಗೆಯ ಹಿಂದಿನ ಭಾಗದಲ್ಲಿ ಸೆಳೆತ

ಇದನ್ನೂ ಓದಿ: ನಿಫಾ ವೈರಸ್ ಸೋಂಕಿತ ಮರಣದಲ್ಲಿ ಪ್ರಮಾಣ ಕೋವಿಡ್ ಹೆಚ್ಚು; ಆತಂಕಕಾರಿ ಮಾಹಿತಿ ನೀಡಿದ ಐಸಿಎಂಆರ್

ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ನಿಫಾ ವೈರಸ್ ಆತಂಕ ಮನೆ ಮಾಡಿರುವ ಹಿನ್ನೆಲೆ ಸೋಂಕಿನ ಗುಣ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ, ಮರಗಳಿಂದ ತಯಾರಿಸುವ ನೀರಾಗಳ ಸೇವನೆಯಿಂದ ಸದ್ಯಕ್ಕೆ ದೂರವಿರಿ. ಜೊತೆಗೆ ಬಾವಲಿಗಳು ತಿಂದ ಹಣ್ಣುಗಳನ್ನ ಸೇವಿಸದಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಏನು ಮಾಡಬೇಕು?

  • ಹಣ್ಣುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು
  • ಕುದಿಸಿ ಆರಿಸಿದ ನೀರನ್ನ ಕುಡಿಯಬೇಕು
  • ಸಾಕು ಪ್ರಾಣಿಗಳ ಆಹಾರವು ಬಾವಲಿಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು
  • ಪ್ರಾಣಿಗಳನ್ನು ಸಂಪರ್ಕಿಸುವಾಗ ರಕ್ಷಣಾತ್ಮಕ ಉಡುಪುಗಳನ್ನು ಧರಿಸಬೇಕು
  • ಮರಗಳಿಂದ ತೆಗೆಯುವ ಹಣ್ಣಿನ ರಸದ ಸಂಪರ್ಕಕ್ಕೆ ಬಾವಲಿಗಳು ಬಾರದಂತೆ ನೋಡಿಕೊಳ್ಳಬೇಕು
  • ಸೋಂಕಿತ ವ್ಯಕ್ತಿಗಳನ್ನು ಸಂಪರ್ಕಿಸುವಾಗ ರಕ್ಷಣಾ ಕ್ರಮ ವಹಿಸಬೇಕು

ಏನು ಮಾಡಬಾರದು?

  • ಮರದಿಂದ ಬಿದ್ದ ಹಾಗೂ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನ ತಿನ್ನಬಾರದು
  • ಪಾತ್ರೆಗಳಲ್ಲಿ ಇಟ್ಟ ಪಾನೀಯಗಳನ್ನು ಸೇವಿಸಬಾರದು
  • ನಿಫಾ ಬಂದಿರುವ ವ್ಯಕ್ತಿಯ ಸಂಪರ್ಕ ಮಾಡಬಾರದು
  • ಖಾಯಿಲೆ ಬಂದ ಅಥ್ವಾ ಸತ್ತ ಪ್ರಾಣಿಗಳ ಹತ್ತಿರ ಹೋಗಬಾರದು
  • ಬಾವಲಿಗಳ ಸಂಪರ್ಕದಿಂದ ದೂರ ಇರಬೇಕು

ಇನ್ನು ನಿಫಾ ವೈರಸ್ ನ ರೋಗ ಲಕ್ಷಣಗಳು ತಕ್ಷಣಕ್ಕೆ ಗೋಚರಿಸುವುದಿಲ್ಲ. ಸಾಮಾನ್ಯವಾಗಿ 4 ರಿಂದ 14 ದಿನಗಳಲ್ಲಿ ಇವು ಗಮನಕ್ಕೆ ಬರಲಿವೆ, ಆರೋಗ್ಯ ಇಲಾಖೆಯ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಅಂತವರ ಚಿಕಿತ್ಸೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *