
ಇದಾಗಲೇ ಹೊಟ್ಟೆಯನ್ನಷ್ಟೇ ತೋರಿಸಿಕೊಂಡು ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ಪುತ್ರಿ, ಸೋನಂ ಕಪೂರ್ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಳಿಯ ಉಡುಪಿನಲ್ಲಿ, ಹೊಟ್ಟೆಯನ್ನು ಬಿಟ್ಟುಕೊಂಡು ತಿರುಗುತ್ತಿರುವ ವಿಡಿಯೋ ವೈರಲ್ ಆಗುತ್ತಲೇ, ಹೊಟ್ಟೆ ಮಾತ್ರ ಕಾಣಿಸ್ತಿರೋ ನಟಿಗೆ ಸಲಾಂ ಹೇಳಿದ್ದಾರೆ. ಸದ್ಯ ಇಷ್ಟಕ್ಕೆ ಮುಗಿಸು ತಾಯೀ, ಮತ್ತಿನ್ನೇನೂ ತೋರಿಸಬೇಡ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಹಲವು ನಟಿಯರು ಇದೀಗ ಬಾಡಿಗೆ ತಾಯ್ತನದ ಮೂಲಕವೋ, ಇನ್ನಾವುದೋ ಮೂಲಕವೋ ಮಗುವನ್ನು ಮಾಡಿಕೊಳ್ತಿರೋ ಕಾರಣದಿಂದ ತಮ್ಮ ಮಗು ತಮ್ಮದೇ ಹೊಟ್ಟೆಯಲ್ಲಿ ಹುಟ್ಟಿದೆ ಎಂದು ತೋರಿಸಲು ಹೀಗೆ ಹೊಟ್ಟೆ ಬಿಟ್ಟುಕೊಂಡು ತಿರುಗುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು.