Headlines

Blood Sugar Level: ನೀವು ತಿನ್ನುವ ಈ ಆಹಾರಗಳಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತೆ ಹುಷಾರು | Common Foods That Spikes Your Blood Sugar More Than Sugar Itself

Blood Sugar Level: ನೀವು ತಿನ್ನುವ ಈ ಆಹಾರಗಳಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತೆ ಹುಷಾರು | Common Foods That Spikes Your Blood Sugar More Than Sugar Itself



Blood Sugar Level: ನೀವು ತಿನ್ನುವ ಈ ಆಹಾರಗಳಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತೆ ಹುಷಾರು | Common Foods That Spikes Your Blood Sugar More Than Sugar Itself

Blood Sugar Level: ಕೆಲವು ಆಹಾರಗಳಲ್ಲಿ ಸಕ್ಕರೆ ಅಂಶ ಇರೋದಿಲ್ಲ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ, ಅದರಲ್ಲಿರುವ ಅಂಶಗಳು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ಅಂತಹ ಆಹಾರಗಳು ಯಾವುವು ಅನ್ನೋದನ್ನು ನೋಡೋಣ. 

ರಕ್ತದಲ್ಲಿ ಸಕ್ಕರೆ ಮಟ್ಟ

ಸಕ್ಕರೆ ಕಾಯಿಲೆ (diabetes) ಇರುವವರು ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯವಾಗಿದೆ. ಆದರೆ ನೀವು ಇದನ್ನು ತಿಂದ್ರೆ ಏನೂ ಆಗಲ್ಲ ಎಂದು ಅಂದುಕೊಂಡಿರುವ ಹಲವು ಸಾಮಾನ್ಯ ಆಹಾರಗಳಿಂದ ಸಹ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಅಂತಹ ಆಹಾರಗಳು ಯಾವುವು ನೋಡೋಣ.

ಬಿಳಿ ಅನ್ನ

ನೀವು ಪ್ರತಿದಿನ ಸೇವಿಸುವ ಬಿಳಿ ಅನ್ನದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಬಿಳಿ ಅಕ್ಕಿ ಒಂದು ರೀತಿಯ ಪಾಲಿಶ್ ಮಾಡಿದ ಅಕ್ಕಿಯಾಗಿದ್ದು, ಸಂಸ್ಕರಣೆಯ ಸಮಯದಲ್ಲಿ ಅದರ ಫೈಬರ್ ಅನ್ನು ತೆಗೆದುಹಾಕಲಾಗುತ್ತದೆ.ಫೈಬರ್ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು ಅದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ರಕ್ತದಲ್ಲಿನ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ

ಮೈದಾದಿಂದ ತಯಾರಿಸಿದ ನಾನ್ ಮತ್ತು ಪೂರಿಗಳು

ನಾನ್ ಮತ್ತು ಪೂರಿಗಳು ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ಆಹಾರವಾಗಿದೆ, ಆದರೆ ಅವುಗಳ ಹೆಚ್ಚಿನ GI ಬಗ್ಗೆ ಎಚ್ಚರದಿಂದಿರಿ. ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾದ ಆಹಾರಗಳಲ್ಲಿ ಫೈಬರ್ ಕಡಿಮೆ ಮತ್ತು ಎಣ್ಣೆ ಮತ್ತು ಬೆಣ್ಣೆಯಿಂದ ತುಂಬಿರುತ್ತವೆ, ಇದರಿಂದಾಗಿ ದೇಹವು ಅವುಗಳನ್ನು ಬೇಗನೆ ಸಕ್ಕರೆಯಾಗಿ ಪರಿವರ್ತಿಸುತ್ತದೆ.

ಬೆಲ್ಲ

ಉತ್ತಮ ಆರೋಗ್ಯಕ್ಕಾಗಿ ಸಕ್ಕರೆ ಬದಲು ಬೆಲ್ಲವನ್ನು ಬಳಸುತ್ತೇವೆ. ಆದರೆ ಬೆಲ್ಲದಲ್ಲೂ ಹೆಚ್ಚಿನ GI ಇರುತ್ತದೆ., ಬೆಲ್ಲವು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ ಮತ್ತು ಕಬ್ಬಿಣದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಮಧುಮೇಹ ಇರುವವರು ಇದನ್ನು ಮಿತವಾಗಿ ಸೇವಿಸಬೇಕು.

ಆಲೂಗಡ್ಡೆ/ಆಲೂಗಡ್ಡೆ ಫ್ರೈಸ್

ಆಲೂಗಡ್ಡೆಯನ್ನು ಫ್ರೈಸ್, ಆಲೂಗಡ್ಡೆ ಪರಾಠಾ , ಆಲೂ ಮಸಾಲ ಇವುಗಳಿಂದ ಏನು ಅಗುವುದಿಲ್ಲ ಎಂದುಕೊಳ್ಳಬೇಡಿ. ಇವುಗಳಿಂದಲೂ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. .

ಕೆಲವು ಹಣ್ಣುಗಳು

ಮಾವು, ದ್ರಾಕ್ಷಿ ಮತ್ತು ಸಪೋಟಾದಂತಹ ಅಧಿಕ ಸಕ್ಕರೆ ಅಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ಸಾಕಷ್ಟು ನೈಸರ್ಗಿಕ ಸಿಹಿ ಸಿಗುತ್ತದೆ. ಅವುಗಳನ್ನು ಜ್ಯೂಸ್ ರೂಪದಲ್ಲಿ ಸೇವಿಸುವುದರಿಂದ ಅವುಗಳ ಹೆಚ್ಚಿನ ಸಕ್ಕರೆ ಅಂಶ ಮತ್ತು ನಾರಿನ ಕೊರತೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು.

ಪ್ಯಾಕ್ಡ್ ಫ್ರುಟ್ ಜ್ಯೂಸ್

ಹಣ್ಣಿನ ಜ್ಯೂಸ್, ವಿಶೇಷವಾಗಿ ಬಾಟಲ್ ಮಾಡಿದ ಜ್ಯೂಸ್ ಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟ (blood sugar level) ಹೆಚ್ಚಾಗುತ್ತದೆ. ಈ ಜ್ಯೂಸ್ ಗಳು ಹಣ್ಣಿನಲ್ಲಿರುವ ಅಗತ್ಯ ನಾರಿನಂಶವನ್ನು ಕಸಿದುಕೊಂಡು ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಏರಿಕೆಗೆ ಕಾರಣವಾಗುತ್ತವೆ.

ಸಮೋಸಾ ಮತ್ತು ಪಕೋಡಾಗಳಂತಹ ಹುರಿದ ತಿಂಡಿಗಳು

ಊಟದ ಸಮಯದಲ್ಲಿ ಮತ್ತು ಚಹಾ ಸಮಯದಲ್ಲಿ ತಿಂಡಿಗಳಾಗಿ ನೀಡಲಾಗುವ ಗರಿಗರಿಯಾದ ಮತ್ತು ಉಪ್ಪುಸಹಿತ ತಿಂಡಿಗಳಾದ ಸಮೋಸಾ ಮತ್ತು ಪಕೋಡಾಗಳು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ.



Source link

Leave a Reply

Your email address will not be published. Required fields are marked *