ರಾಜ್ಯ ಮಟ್ಟದ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಪರಿಮಳ, ಹೆಂಡ್ತಿ ಸಾಧನೆ ಕೊಂಡಾಡಿದ ಜಗ್ಗೇಶ್‌! | Parimala Jaggesh Wins Silver Medal State Level Shooting Championship News San

ರಾಜ್ಯ ಮಟ್ಟದ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಪರಿಮಳ, ಹೆಂಡ್ತಿ ಸಾಧನೆ ಕೊಂಡಾಡಿದ ಜಗ್ಗೇಶ್‌! | Parimala Jaggesh Wins Silver Medal State Level Shooting Championship News San



ರಾಜ್ಯ ಮಟ್ಟದ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಪರಿಮಳ, ಹೆಂಡ್ತಿ ಸಾಧನೆ ಕೊಂಡಾಡಿದ ಜಗ್ಗೇಶ್‌! | Parimala Jaggesh Wins Silver Medal State Level Shooting Championship News San

57ನೇ ವಯಸ್ಸಿನಲ್ಲಿ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಸಾಧನೆ ಮಾಡಿದ್ದಾರೆ. ಸಂಸಾರದ ಜವಾಬ್ದಾರಿಯ ನಡುವೆಯೂ ಶಿಕ್ಷಣ ಹಾಗೂ ಹೊಸ ಕೌಶಲ್ಯಗಳನ್ನು ಕಲಿಯುವ ಅವರ ಛಲಕ್ಕೆ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಫೆ.2): ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಕೇವಲ ಸ್ಯಾಂಡಲ್‌ವುಡ್‌ನ ತಾರಾ ಪತ್ನಿಯಾಗಿ ಉಳಿದಿಲ್ಲ. 10ನೇ ತರಗತಿಯಲ್ಲಿರುವಾಗಲೇ ಹಸೆಮಣೆ ಏರಿದ ಅವರು, ಸಂಸಾರದ ಜವಾಬ್ದಾರಿಯ ನಡುವೆಯೇ ಶಿಕ್ಷಣದ ಶಿಖರ ಏರಿದವರು. ಇತ್ತೀಚೆಗೆ 57ನೇ ವಯಸ್ಸಿನಲ್ಲಿ ಅವರು ಪಿಸ್ತೂಲ್ ಶೂಟಿಂಗ್ ಕಲಿಯುವ ಮೂಲಕ “ವಯಸ್ಸು ಕೇವಲ ಒಂದು ಸಂಖ್ಯೆ” ಎಂಬುದನ್ನು ಸಾಬೀತು ಮಾಡಿದ್ದರು. ಈಗ ಇದೇ ರಾಜ್ಯ ಮಟ್ಟದ ಶೂಟಿಂಗ್‌ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಇದು ನಟ ಜಗ್ಗೇಶ್‌ ಅವರ ಸಂಭ್ರಮಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ‘ಪರಿಮಳ ನಾನು ಬದುಕಲ್ಲಿ ಆಯ್ಕೆಮಾಡಿಕೊಂಡ ಶ್ರೇಷ್ಠ ವ್ಯೆಕ್ತಿತ್ವದ ಛಲಗಾತಿ’ ಎಂದು ಅವರು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗ್ಗೇಶ್‌, ‘ಆಕೆ ಚಿಂತನೆ ಸದಾ ಆಶಾದಾಯಕ.SSLC ಓದುವಾಗ ನಮ್ಮ ಮದುವೆಯಾಯಿತು. ಆಗ ನಾನು ತಂದೆಯಿಂದ ದೂರವಾಗಿ ಸಾಮಾನ್ಯರಲ್ಲಿ ಸಾಮಾನ್ಯ ಜೀವಿ. ಒಂದುದಿನದ ಸಣ್ಣ ಪಾತ್ರಕ್ಕೆ ಅಲೆಯುತ್ತಿದ್ದ ದಿನಗಳು.

ಆಗ ಅವಳ ಬೇಡಿಕೆ ದಯವಿಟ್ಟು ನನ್ನ ಓದಿಸು ಎಂದು,ಅದಕ್ಕೆ ನಾನು ಒಪ್ಪಿ EASTWEST COLLEGE ಗೆ ಸೇರಿಸಿದೆ PUCಯಲ್ಲಿ RANK ನಂತರ BMSನಲ್ಲಿ BE ARC ನಂತರ computer diploma ನಂತರ medical transcription ನಂತರ diet company,modiji ರವರ ಉತ್ತೇಜನ ಪ್ರಯುಕ್ತ ಶ್ರೀ ಅನ್ನ ಆಹಾರ ಪದ್ಧತಿಯ ಬಗ್ಗೆ ಪುಸ್ತಕ ಬರವಣಿಗೆ,ಇತ್ತೀಚೆಗಿನ 57ನೆ ವಯಸ್ಸಿನಲ್ಲಿ ಹೊಸ ಪ್ರಯತ್ನ shooting academy ಸೇರ್ಪಡೆ ಇಂದು state shooting ನಲ್ಲಿ Silver medal…

ಇದನ್ನ ಉಲ್ಲೇಕಿಸಲು ಕಾರಣ ಮನುಷ್ಯರಾಗಿ ನಾವು ಹುಟ್ಟಿದ್ದೆ ಜಗತ್ತು ಗೆಲ್ಲಲು ವಿನಹ ಏನು ಆಗದು ನನ್ನಿಂದ ಎಂದು ಕಾರಣ ಹೇಳಿ ಆಯುಷ್ಯ ಮುಗಿಸಿ ಹೋಗಲು ಅಲ್ಲಾ ..!!

ಪರಿಮಳನ ಪ್ರತಿಭೆ ಪ್ರಯತ್ನದಂತೆ ನನ್ನ ಎಲ್ಲಾ ನಲ್ಮೆಯ ಹೆಣ್ಣುಕುಲ ಯತ್ನಿಸಿ,ನೀವು ಹೆಣ್ಣಾಗಿ ಹುಟ್ಟಿದರೆ ಅದು ನಿಮ್ಮ ಅದೃಷ್ಟ ಹಾಗು ದೇವರ ಕೃಪೆಯಿಂದ ಎಂದು ಸಂತೋಷಪಡಿ.. ಗಂಡ ಮಕ್ಕಳು ಸಂಸಾರ ಸರಿಯಾಗಿ ತೂಗಿಸಿ ಜೊತೆಜೊತೆಗೆ ಸಾಧಕರಾಗಿ ಎಂಬು ನನ್ನ ಹಾರೈಕೆ ಆಶಯ. ಗಂಡನಾಗಿ ಮಡದಿ ಪರಿಮಳನಿಗೆ ಹೃದಯಪೂರ್ವಕ ಶುಭಕಾಮನೆಗಳು’ ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ.

50ನೇ ವರ್ಷದವರೆಗೂ ಕಲಿಕೆಯಲ್ಲಿದ್ದ ಪರಿಮಳ

ತಮ್ಮ 50ನೇ ವಯಸ್ಸಿನವರೆಗೂ ಕಲಿಕೆಯಲ್ಲಿ ತೊಡಗಿದ್ದ ಪರಿಮಳ, ಈಗ 57ರಲ್ಲಿ ಶೂಟಿಂಗ್ ಸ್ಪರ್ಧೆಗೆ ಇಳಿದಿದ್ದರು. ಕಳೆದ ಅಕ್ಟೋಬರ್‌ನಿಂದ ತರಬೇತಿ ಆರಂಭಿಸಿರುವ ಅವರು ತಮ್ಮ ಅನುಭವವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. “ನಾನು 1994ರಿಂದಲೂ ಮಧುಮೇಹಿ. ಕುಟುಂಬದ ಜವಾಬ್ದಾರಿ, ಕಂಪನಿ ನಿರ್ವಹಣೆ ನಡುವೆ ತರಬೇತಿಗೆ ಸಮಯ ಸಿಗುವುದು ಕಷ್ಟವಿತ್ತು. ಆದರೆ ನಾನು ನನ್ನ ಮನಸ್ಥಿತಿ ಬದಲಿಸಿಕೊಂಡೆ. ಈಗ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಪ್ರಾಕ್ಟೀಸ್ ಮಾಡುತ್ತೇನೆ. ಇದು ಪದಕಗಳಿಗಾಗಿ ಅಲ್ಲ, ಬದಲಾಗಿ ಶಿಸ್ತು, ಏಕಾಗ್ರತೆ ಮತ್ತು ಒತ್ತಡದ ನಡುವೆ ಶಾಂತವಾಗಿರುವುದನ್ನು ಕಲಿಯಲು’ ಎಂದು ಹೇಳಿದ್ದರು.



Source link

Leave a Reply

Your email address will not be published. Required fields are marked *