ನವದೆಹಲಿ, ಫೆಬ್ರುವರಿ 3: ಪ್ರಧಾನಿ ನರೇಂದ್ರ ಮತ್ತು ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡು ದೇಶಗಳ ನಡುವೆ ವ್ಯಾಪಾರ ಒಪ್ಪಂದವನ್ನು ಖಚಿತಪಡಿಸಿದ್ದಾರೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇ. 25 ಪ್ರತಿಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆ. ತೈಲ ಖರೀದಿಗೆ ಪ್ರತಿಯಾಗಿ ಭಾರತಕ್ಕೆ ದಂಡವಾಗಿ ವಿಧಿಸಿದ್ದ ಶೇ. 25 ಸುಂಕವನ್ನೂ ಕೈಬಿಡುತ್ತ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಭಾರತದ ಸರಕುಗಳ ಮೇಲೆ ಅಮೆರಿಕದ ಟ್ಯಾರಿಫ್ ಶೇ. 50 ರಿಂದ ಶೇ. 18ಕ್ಕೆ ಇಳಿಯಲಿದೆ.
ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಪೂರ್ಣಗೊಳ್ಳುವ ಸ್ಥಿತಿಯಲ್ಲಿದೆ. ಈ ಡೀಲ್‌ಗೆ ಸಹಿ ಬಿದ್ದ ಬಳಿಕ ಹೊಸ ಟ್ಯಾರಿಫ್ ದರ ಬರುತ್ತದೆ. ಆದರೆ, ಬೆಲೆಯ ತೈಲ ಖರೀದಿಯನ್ನು ಭಾರತ ಕಡಿಮೆ ಮಾಡಿದೆ ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಭಾರತದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ರಷ್ಯಾ ಮತ್ತು ಇರಾನ್ ಬದಲಿಗೆ ಅಮೆರಿಕ ಮತ್ತು ವೆನೆಜುವೆಲಾದಿಂದ ಭಾರತ ತೈಲವನ್ನು ಖರೀದಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಬಗ್ಗೆಯೂ ಭಾರತದಿಂದ ಸ್ಪಷ್ಟನೆ ಇನ್ನೂ ಬಂದಿಲ್ಲ. ಅದೇನೇ ಇದ್ದರೂ ಅಮೆರಿಕವು ಭಾರತದ ಸರಕುಗಳ ಮೇಲಿನ ಟ್ಯಾರಿಫ್ ಅನ್ನು ಶೇ. 18ಕ್ಕೆ ಇಳಿಸುತ್ತೇನೆಂದಿರುವುದು ಹೌದು. ವಿಶ್ವದ ಹೆಚ್ಚಿನ ದೇಶಗಳಿಗೆ ಭಾರತಕ್ಕೆ ಕಡಿಮೆ ಟ್ಯಾರಿಫ್ ವಿಧಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ ಅಂಕಕ್ಕೆ ಭರಪೂರ ಕೊಡುಗೆ: ಬಜೆಟ್‌ನಲ್ಲಿ ಏನೂ ಸಿಕ್ಕಿಲ್ಲ ಎಂದವರಿಗೆಅಂಶ ಸಮೇತ ಅಶ್ವಿನಿ ವೈಷ್ಣವ್ ತಿರುಗೇಟು
ಅಮೆರಿಕದಿಂದ ಹೆಚ್ಚಿನ ಟ್ಯಾರಿಫ್ ಎದುರಿಸುತ್ತಿರುವ ದೇಶಗಳು
- ಭಾರತ: ಶೇ. 18
- ಥಾಯ್ಲೆಂಡ್: ಶೇ. 19
- ಕಾಂಬೋಡಿಯಾ: ಶೇ. 19
- ಮಲೇಷ್ಯಾ: ಶೇ. 19
- ಪಾಕಿಸ್ತಾನ: ಶೇ. 19
- ಬಾಂಗ್ಲಾದೇಶ: ಶೇ. 20
- ವಿಯೆಟ್ನಾಂ: ಶೇ. 20
- ಸೌತ್ ಆಫ್ರಿಕಾ: ಶೇ. 30
- ಚೀನಾ: ಶೇ. 37
- ಲಾವೋಸ್: ಶೇ. 40
- ಮಾಯನ್ಮಾರ್: ಶೇ. 40
- ಬ್ರೆಜಿಲ್: ಶೇ 50
ಅಮೆರಿಕದಿಂದ ಅತಿಕಡಿಮೆ ಟ್ಯಾರಿಫ್ ಎದುರಿಸುತ್ತಿರುವ ದೇಶಗಳು
- ಬ್ರಿಟನ್: ಶೇ. 10
- ಯೂರೋಪಿಯನ್ ಒಕ್ಕೂಟ: ಶೇ. 15
- ಸ್ವಿಟ್ಜರ್ಲ್ಯಾಂಡ್: ಶೇ. 15
- ಜಪಾನ್: ಶೇ. 15
- ಸೌತ್ ಕೊರಿಯಾ: ಶೇ. 15
ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ನಲ್ಲಿ ನೀಡಿರುವ ಹೇಳಿಕೆ ಪ್ರಕಾರ, ಅಮೆರಿಕದ ಸರಕುಗಳ ಮೇಲೆ ಟ್ಯಾರಿಫ್ ಅನ್ನು ಭಾರತ ಸೊನ್ನೆಗೆ ಇಳಿಸಲಿದೆ. ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆ ಪ್ರವೇಶ ನೀಡಲಿದೆ. ಆದರೆ, ಈ ಬಗ್ಗೆಯೂ ಭಾರತದ ಬಗ್ಗೆ ಹೇಳಿಕೆ ಬಂದಿಲ್ಲ.
ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ
ಭಾರತ ಮತ್ತು ಅಮೆರಿಕದ ನಡುವೆ ಟ್ರೇಡ್ ಡೀಲ್ ಕುದುರಿದೆ ಎಂಬ ಸುದ್ದಿಯು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ನಿಫ್ಟಿ, ಸೆನ್ಸೆಕ್ಸ್ ನ ಎಲ್ಲಾ ಸೂಚ್ಯಂಕಗಳೂ ಹಸಿರು ಬಣ್ಣಕ್ಕೆ ತಿರುಗಿವೆ. ಉದ್ದದ ಅನೇಕಮೆಗಳು ಉತ್ಸಾಹದಿಂದ ಗರಿಗೆದರಿವೆ ಭಾರತ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ