
4. ತನ್ನ ಜಾಲಕ್ಕೆ ಬಿದ್ದ ಹುಡುಗಿಯರ ಮೂಲಕವೇ ಮತ್ತಷ್ಟು ಹುಡುಗಿಯರನ್ನು ಈ ದಂಧೆಗೆ ಎಳೆಯುತ್ತಿದ್ದ.
5. ಅಪಾರ ಸಂಪತ್ತು ಮತ್ತು ಪ್ರಭಾವಿ ಗ್ರಾಹಕರ ಬಲದಿಂದ ಅವನು ಹೇಳಿದ್ದೇ ಆಟವಾಗಿತ್ತು. ಆದರೆ, 2019ರಲ್ಲಿ ಎಪ್‌ಸ್ಟೀನ್ ಬಂಧನಕ್ಕೊಳಗಾದ. ನಂತರ ಜೈಲಿನಲ್ಲಿಯೇ ಸಾವನ್ನಪ್ಪಿದ. ಇದು ಆತ್ಮಹತ್ಯೆ ಎಂದು ಕೆಲವರು ಹೇಳಿದರೆ, ತಮ್ಮ ರಹಸ್ಯ ಬಯಲಾಗುತ್ತದೆ ಎಂದು ಅವನ ಶ್ರೀಮಂತ ಗ್ರಾಹಕರೇ ಕೊಲ್ಲಿಸಿದ್ದಾರೆಂದು ಇನ್ನು ಕೆಲವರು ಹೇಳುತ್ತಾರೆ.
ಇತ್ತೀಚೆಗೆ, ಯುಎಸ್ ನ್ಯಾಯಾಂಗ ಇಲಾಖೆಯು ‘ಎಪ್‌ಸ್ಟೀನ್ ಫೈಲ್ಸ್’ ಹೆಸರಿನಲ್ಲಿ 30 ಲಕ್ಷ ಪುಟಗಳ ದಾಖಲೆ, 2000 ವಿಡಿಯೊ ಮತ್ತು 1.80 ಲಕ್ಷ ಫೋಟೋಗಳನ್ನು ಬಿಡುಗಡೆ ಮಾಡಿದೆ. ಆದರೆ ಇಷ್ಟು ದೊಡ್ಡ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ.