Headlines

Gold Rate Today: ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ; ಇಲ್ಲಿದೆ ದರಪಟ್ಟಿ

Gold Rate Today: ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ; ಇಲ್ಲಿದೆ ದರಪಟ್ಟಿ


ಬೆಂಗಳೂರು, ಫೆಬ್ರುವರಿ 3: ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿದೆ. ನಿನ್ನೆ ಸೋಮವಾರ ಸುಮಾರು 700-800 ರೂ ಇದ್ದ ಚಿನ್ನದ ಬೆಲೆ (ಚಿನ್ನದ ದರಗಳು) ಇವತ್ತು ಮಂಗಳವಾರ 100-150 ರೂ ಕಡಿಮೆಯಾಗಿದೆ. ಅಪರಂಜಿ ಚಿನ್ನದ ಬೆಲೆ 15,175-15,200 ರೂ ಶ್ರೇಣಿಯಲ್ಲಿದೆ. ಆಭರಣ ಬೆಲೆ 13,900 ರೂನಿಂದ 13,925 ರೂ ಚಿನ್ನದ ಶ್ರೇಣಿಯಲ್ಲಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಸಖತ್ ಕುಸಿತವಾಗಿದೆ. ಬೆಳ್ಳಿ ಬೆಲೆಯ ಭರ್ಜರಿ ಕುಸಿತವೂ ಮುಂದುವರಿದಿದೆ. ಮಂಗಳವಾರ ಗ್ರಾಮಕ್ಕೆ 20 ರೂ ಕಡಿಮೆ ಆಗಿದೆ. ಕೆಲವು ದಿನಗಳ ಹಿಂದಷ್ಟೇ 425 ರೂ ಇದ್ದ ಬೆಳ್ಳಿ ಬೆಲೆ ಈಗ 280 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,39,100 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,51,750 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 28,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,39,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 28,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 3ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,175 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,910 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,381 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,175 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,910 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 13,910 ರೂ
  • ಬೆಲೆ: 14,030 ರೂ
  • ಮುಂಬೈ: 13,910 ರೂ
  • ದೆಹಲಿ: 13,925 ರೂ
  • ಕೋಲ್ಕತಾ: 13,910 ರೂ
  • ಕೇರಳ: 13,910 ರೂ
  • ಅಹ್ಮದಾಬಾದ್: 13,915 ರೂ
  • ಜೈಪುರ: 13,925 ರೂ
  • ಲಕ್ನೋ: 13,925 ರೂ
  • ಭುವನೇಶ್ವರ್: 13,915 ರೂ

ಇದನ್ನೂ ಓದಿ: ಏಷ್ಯನ್ ದೇಶಗಳ ಮೇಲೆ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 590 ರಿಂಗಿಟ್ (13,540 ರೂಪಾಯಿ)
  • ದುಬೈ: 522.50 ಡಿರಾಮ್ (12,857 ರೂಪಾಯಿ)
  • ಅಮೆರಿಕ: 145.50 ಡಾಲರ್ (13,151 ರೂಪಾಯಿ)
  • ಸಿಂಗಾಪುರ: 192.30 ಸಿಂಗಾಪುರ ಡಾಲರ್ (13,686 ರೂಪಾಯಿ)
  • ಕತಾರ್: 522 ಕತಾರಿ ರಿಯಾಲ್ (12,944 ರೂ)
  • ಸೌದಿ ಅರೇಬಿಯಾ: 533 ಸೌದಿ ರಿಯಾಲ್ (12,846 ರುಪಾಯಿ)
  • ಓಮನ್: 55.30 ಒಮಾನಿ ರಿಯಾಲ್ (12,991 ರೂಪಾಯಿ)
  • ಕುವೇತ್: 42.47 ಕುವೇತಿ ದಿನಾರ್ (12,574 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 280 ರೂ
  • ಬೆಲೆ: 280 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 280 ರೂ
  • ಜೈಪುರ: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 280 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *