ಶ್ರುತಿ ನಾಯ್ಡು ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ಸೀರಿಯಲ್ ಮಾಡೋದ್ಯಾಕೆ? 4 ವರ್ಷ ಆಗಿದ್ದೇನು? | Kannada Small Screen Prouducer Shruti Naidu Interview Work With Zee Channel Mrq

ಶ್ರುತಿ ನಾಯ್ಡು ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ಸೀರಿಯಲ್ ಮಾಡೋದ್ಯಾಕೆ? 4 ವರ್ಷ ಆಗಿದ್ದೇನು? | Kannada Small Screen Prouducer Shruti Naidu Interview Work With Zee Channel Mrq


Shruti Naidu Interview: ಯಶಸ್ವಿ ನಿರ್ಮಾಪಕಿ ಶ್ರುತಿ ನಾಯ್ಡು, 13 ವರ್ಷಗಳ ಕಾಲ ಜೀ ಕನ್ನಡದಲ್ಲಿ ಕೆಲಸ ಮಾಡಿದ ನಂತರ ಬೇರೆ ವಾಹಿನಿಗಳಿಗೆ ಹೋದಾಗ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. 

ಬೆಂಗಳೂರು: ಕಿರುತೆರೆ ಲೋಕದ ಜನಪ್ರಿಯ ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಹಿಂದಿರುವ ಯಶಸ್ಸಿನ ಹಿಂದೆಯೂ ಶ್ರುತಿ ನಾಯ್ಡು ಇದ್ದಾರೆ. ನಮ್ಮಮ್ಮ ಶಾರದೆ, ಚಿ ಸೌ ಸಾವಿತ್ರಿ, ಪುನರ್‌ ವಿವಾಹ, ಶ್ರೀರಸ್ತು ಶುಭಮಸ್ತು, ಬ್ರಹ್ಮಗಂಟು, ಮಹಾನದಿ ಸೇರಿದಂತೆ ಹಲವು ಹಿಟ್ ಸೀರಿಯಲ್‌ಗಳನ್ನು ನೀಡಿದ್ದಾರೆ. ಯಶಸ್ವಿ ನಿರ್ಮಾಪಕಿಯಾಗಿರುವ ಶ್ರುತಿ ನಾಯ್ಡು ಏಷ್ಯಾನೆಟ್‌ ಸುವರ್ಣ ನ್ಯೂಸ್ ವಿಶೇಷ ಸಂದರ್ಶನ ನೀಡಿದ್ದು, ಕಿರುತೆರೆ ಲೋಕದ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ನಿರಂತರವಾಗಿ 13 ವರ್ಷ ಜೀ ವಾಹಿನಿಯಲ್ಲಿಯೇ ಕೆಲಸ

ನನ್ನ ಕೆರಿಯರ್‌ನಲ್ಲಿ ತುಂಬಾ ಡೌನ್‌ಫಾಲ್ ಆಗಿದೆ. ಕೆಲವು ಸಂದರ್ಭಗಳಲ್ಲಿ ನಾನು ಮಾಡಿದೆಲ್ಲಾ ವರ್ಕ್ ಆಗುತ್ತೆ ಅನ್ನೋ ಅತಿಯಾದ ಆತ್ಮವಿಶ್ವಾಸ ಬಂದಾಗ ಸೋಲುಗಳು ನಮ್ಮನ್ನು ಆವರಿಸುತ್ತವೆ. ಸುಮಾರು 13 ವರ್ಷ ಜೀ ಕನ್ನಡ ವಾಹಿನಿಯಲ್ಲಿಯೇ ನಾನು ನಿರಂತರವಾಗಿ ಸೀರಿಯಲ್‌ಗಳನ್ನು ಮಾಡಿಕೊಂಡೆ ಬಂದೆ. ನನಗೆ ಜೀ ಕನ್ನಡ ವಾಹಿನಿ ಜೊತೆಗಿನ ಕೆಲಸ ಸೆಟ್ ಆಗಿತ್ತು. 13 ವರ್ಷದ ನಂತರ ಬೇರೆ ಬೇರೆ ಚಾನೆಲ್‌ಗಳ ಜೊತೆ ಕೆಲಸ ಮಾಡಲಾರಂಭಿಸಿದೆ.

ಜೀ ಕನ್ನಡ ಬಿಟ್ಟು ಬೇರೆ ಕಡೆ ಕೆಲಸ ಮಾಡಿದಾಗ ಆಗಿದ್ದೇನು?

ಬೇರೆ ವಾಹಿನಿಗಳಲ್ಲಿ ಕೆಲಸ ಮಾಡುವಾಗ ಅಲ್ಲಿಯ ವಾತಾವರಣ ನನಗೆ ಸೆಟ್ ಆಗಲಿಲ್ಲ. ಅಲ್ಲಿ ನಾನು ಏನು ಕೆಲಸ ಮಾಡ್ತಿದ್ದೀನಿ ಅನ್ನೋದು ಸಹ ನನಗೆ ಗೊತ್ತಾಗಲಿಲ್ಲ. ವಾಹಿನಿಗೆ ನಮ್ಮಿಂದ ಏನು ಬೇಕು? ನಾವು ಯಾವುದರಲ್ಲಿ ಉತ್ತಮ ಎಂಬಿತ್ಯಾದಿ ಪ್ರಶ್ನೆಗಳು ಉಂಟಾದವು. ಆ ವಾಹಿನಿಗಳಲ್ಲಿಯೂ ನಾನು ಅಷ್ಟೇ ಶ್ರಮ ಹಾಕಿ ಕೆಲಸ ಮಾಡಿದೆ. ಆದರೆ ಏನಾಗ್ತಿದೆ ಅನ್ನೋದು ತಿಳಿಯದೇ ಆ ಸಮಯದಲ್ಲಿ ನಾನು ಬ್ಲಾಂಕ್ ಆಗಿ ಅಲ್ಲಿ ಕನೆಕ್ಟ್ ಆಗಲು ಆಗಲಿಲ್ಲ ಎಂದು ಹೇಳಿದರು.

ಜೀ ಕನ್ನಡ ಬಿಟ್ಟು ಬೇರೆ ವಾಹಿನಿಗೆ ಹೋದಾಗ ಕೆಲವೊಂದು ತಪ್ಪು ಕಲ್ಪನೆಗಳು ಉಂಟಾಗಿರಬಹುದು. ಸುಮಾರು 13 ವರ್ಷ ಜೀ ಕನ್ನಡದಲ್ಲಿದ್ದವರು ಇಲ್ಲಿಗೆ ಬಂದು ಹೇಗಿರ್ತಾರೆ? ಅಲ್ಲೆಲ್ಲಾ ನಂಬರ್ ಒನ್ ಇದ್ದವರು, ಇಲ್ಲಿಯೇ ಅಷ್ಟೇ ಶ್ರಮ ಮತ್ತು ಪ್ರೀತಿಯಿಂದ ಕೆಲಸ ಮಾಡ್ತಾರಾ ಎಂಬ ತಪ್ಪಾದ ಕಲ್ಪನೆಗಳು (misconception) ಉಂಟಾಗಿರಬಹುದು. ನಾನು ಅಲ್ಲಿಗೆ ಹೋದಾಗ ಅವರಲ್ಲಿಯೇ ಒಂದು ಅಭದ್ರತೆಯ ಭಯ ಉಂಟಾಗಿತ್ತು. ನನಗೆ ಪ್ರೀತಿಯ ಸ್ವಾಗತ ಸಿಗಲಿಲ್ಲ. ಎಲ್ಲವನ್ನು ಮುಕ್ತವನ್ನು ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ವಾಹಿನಿಯಲ್ಲಿ ನನಗೆ ಹೊಂದಾಣಿಕೆ ಆಗಲಿಲ್ಲ ಎಂದು ಶ್ರುತಿ ನಾಯ್ಡು ಹೇಳುತ್ತಾರೆ.

ಇದನ್ನೂ ಓದಿ: BBK 12: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ: 15 ದಿನಗಳ ನಂತ್ರ ರಕ್ಷಿತಾ ಶೆಟ್ಟಿ ಪೋಸ್ಟ್

ಮತ್ತೆ ಜೀ ಕನ್ನಡಕ್ಕೆ ಬಂದ್ರು ಶ್ರುತಿ ನಾಯ್ಡು!

ಆ ನಾಲ್ಕು ವರ್ಷ ನಾನು ತುಂಬಾ ಒತ್ತಡದಲ್ಲಿದ್ದೆ. ನನಗೆ ಕೆಲಸ ಮಾಡಲು ಬರೋದೇ ಇಲ್ಲವಾ ಎಂಬ ಭಾವನೆ ಬರಲು ಶುರುವಾಯ್ತು. 13 ವರ್ಷ ಒಂದೇ ಕಡೆ ಒಂದಿಷ್ಟು ಜನರೊಂದಿಗೆ ಕೆಲಸ ಮಾಡಿದ್ದರಿಂದ ಈ ರೀತಿಯಾಗಿರಬಹುದು. ನಂತರ ಮತ್ತೆ ಜೀ ಕನ್ನಡಕ್ಕೆ ಬಂದಾಗ ಅದೇ ಪ್ರೀತಿ ಮತ್ತು ಶ್ರಮದಿಂದ ಕೆಲಸ ಮಾಡಿ ಬೌನ್ಸ್ ಬ್ಯಾಕ್ ಆದೆ. ಒಳ್ಳೆಯ ಪ್ರೊಜೆಕ್ಟ್ ಸಿಕ್ತು, ಜೀಯಲ್ಲಿಯೇ ವೆಬ್ ಸಿರೀಸ್ ಮಾಡಿದೆ ಎಂದು ಶ್ರುತಿ ನಾಯ್ಡು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ಣ ಕೊಟ್ಟ ಟಕ್ಕರ್‌ಗೆ ದುಷ್ಟ ರಮೇಶ್ ವಿಲವಿಲ; ಇತ್ತ ಸೀರಿಯಲ್‌ಗೆ ಹೊಸ ಚೆಲುವೆಯ ಆಗಮನ

YouTube video player



Source link

Leave a Reply

Your email address will not be published. Required fields are marked *