Headlines

Whatsapp ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್? | Comply Or Exit Supreme Court Stern Warning To Meta Over Whatsapp Privacy Breach

Whatsapp ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್? | Comply Or Exit Supreme Court Stern Warning To Meta Over Whatsapp Privacy Breach



Whatsapp ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್? | Comply Or Exit Supreme Court Stern Warning To Meta Over Whatsapp Privacy Breach

ಆಗಲ್ಲ ಅಂದ್ರೆ ಬಂದ್ ಮಾಡಿ ಹೊರಡಿ, ಮೆಟಾಗೆ ಸುಪ್ರೀಂ ಕೋರ್ಟ್ ವಾರ್ನಿಂಗ್, ಜಸ್ಟೀಸ್ ಸೂರ್ಯಕಾಂತ್ ನೀಡಿದ ಖಡಕ್ ವಾರ್ನಿಂಗ್ ಬೆನ್ನಲ್ಲೇ ಭಾರತದಲ್ಲೇ ವ್ಯಾಟ್ಸಾಪ್ ಸ್ಥಗಿತಗೊಳ್ಳುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿದೆ. 

ನವದೆಹಲಿ (ಫೆ.03) ಮೆಟಾ ಮಾಲೀಕತ್ವದ ವ್ಯಾಟ್ಸಾಪ್‌ಗೆ ಪ್ಲಾಟ್‌ಫಾರ್ಮ್‌ಗೆ ಸುಪ್ರೀಂ ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ. ನಿಮಗೆ ಆಗಲ್ಲ ಅಂದರೆ ಬಾಗಿಲು ಬಂದ್ ಮಾಡಿ ಹೊರಡಿ. ಭಾರತದಲ್ಲಿ ಇರಬೇಕಾದರೆ ಇಲ್ಲಿನ ನಿಯಮ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದೆ. ನಮ್ಮ ದೇಶದ ಪ್ರೈವೈಸಿ ಜೊತೆ ಆಟವಾಡಲು ಸಾಧ್ಯವಿಲ್ಲ. ಇದಕ್ಕೆ ಭಾರತ ಅವಕಾಶ ನೀಡುವುದಿಲ್ಲ. ನಿಮ್ಮ ಪಾಲಿಸಿ ಪ್ರಕಾರ ಭಾರತದ ಪ್ರವೈಸಿ ಪಾಲಿಸಿಗಳ ಪಾಲಿಸಲು ಸಾಧ್ಯವಾಗದದ್ದರೆ, ನೀವು ಭಾರತ ಬಿಟ್ಟು ಹೊರಡಬಹುದು ಎಂದು ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.

ಸಿಂಗಲ್ ಡಿಜಿಟ್ ಡೇಟಾ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ

ಡೇಟಾ ಶೇರಿಂಗ್ ಹಾಗೂ ಪ್ರೈವೈಸಿ ಕುರಿತು ಸುಪ್ರೀಂಕೋರ್ಟ್ ಮೆಟಾ ಮಾಲೀಕತ್ವದ ವ್ಯಾಟ್ಸಾಪ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗೆ ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ಇದೇ ವೇಳೆ ಯಾವುದೇ ಕಾರಣಕ್ಕೂ ವ್ಯಾಟ್ಸಾಪ್ ಬಳಕೆದಾರರ ಡೇಟಾವನ್ನು ಕಮರ್ಷಿಯಲ್ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶವೂ ಇಲ್ಲ, ಬಳಸಿಕೊಳ್ಳಲು ಬಿಡಿವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಪ್ಲಾಟ್‌ಫಾರ್ಮ್ ಭಾರತದ ಪ್ರೈವೈಸಿ ಪಾಲಿಸಿಯಲ್ಲಿ ಒಂದಿಂಚು ಸಿಡಿಸಲು ಸಾಧ್ಯವಿಲ್ಲ. ಒಬ್ಬರಿಗೆ ಒಂದು ನೀತಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಂಗಲ್ ಡಿಜಿಟ್ ಡೇಟಾ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.

ಏನಿದು ಪ್ರಕರಣ?

ಡೇಟಾ ಶೇರಿಂಗ್ ಹಾಗೂ ಪ್ರೈವೈಸಿ ಪಾಲಿಸಿಗಳ ಕುರಿತು ಎನ್‌ಸಿಎಲ್‌ಎಟಿ (NCLAT) ಮಹತ್ವದ ಆದೇಶ ಹೊರಡಿಸಿತ್ತು. ಭಾರತದ ಪಾಲಿಸಿ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಿತ್ತು. ಗ್ರಾಹಕರ ಡೇಟಾವನ್ನು ಇತರ ಪ್ಲಾಟ್‌ಫಾರ್ಮ್ ಜೊತೆ ಹಂಚಿಕೊಳ್ಳುವಂತಿಲ್ಲ. ಇದು ನಿಯಮ ಉಲ್ಲಂಘನೆ ಎಂದು ಎಚ್ಚರಿಸಿ ಆದೇಶ ನೀಡಿತ್ತು. ಆದರೆ ಜನವರಿ 2025ರಲಲಿ ಡೇಟಾ ಹಂಚಿಕೆ ಹಾಗೂ ಮಾರುಕಟ್ಟೆ ಪ್ರಾಬಲ್ಯ ಕುರಿತು ಆದೇಶವನ್ನು ಪ್ರಶ್ನಿಸಿ ಮೆಟಾ ಹಾಗೂ ಸಿಸಿಐ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈ ಕುರಿತು ವೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಇದೀಗ ವ್ಯಾಟ್ಸಾಪ್ ಪ್ಲಾಟ್‌ಫಾರ್ಮ್‌ನ್ನು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.

ಡೇಟಾ ಹಂಚಿಕೆ ಪೇರೆಂಟ್ ಕಂಪನಿಗೆ ಮಾತ್ರ

ವ್ಯಾಟ್ಸಾಪ್ ಬಳಕೆದಾರರ ಡೇಟಾವನ್ನು ಮಾತೃ ಸಂಸ್ಥೆಯಾಗಿರುವ ಮೆಟಾ ಜೊತೆ ಮಾತ್ರ ಹಂಚಿಕೊಳ್ಳಲಾಗಿದೆ ಎಂದು ಮೆಟಾ ವಾದಿಸಿತ್ತು. ಇದು ಅಂತಾರಾಷ್ಟ್ರೀಯ ಪ್ರೈವೈಸಿ ಪಾಲಿಸಿಗೆ ಅನುಗುಣವಾಗಿದೆ ಎಂದಿತ್ತು. ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಡೇಟಾ ಹಂಚಿಕ ಮಾಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಕೆ ಮಾಡಿ. ಇಲ್ಲಾ ಎಂದಾದರೆ ನಿಮ್ಮ ಅರ್ಜಿ ವಜಾಗೊಳಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಖಾಸಗಿತನಕ್ಕೆ ಧಕ್ಕೆ

ಗ್ರಾಹಕರು ಮಾಡಿದ ಚಾಟ್, ಟ್ರೆಂಡ್‌ಗೆ ಅನುಗುಣವಾಗಿ ಜಾಹೀರಾತುಗಳನ್ನು ನೀಡುವುದು ಗೌಪ್ಯತೆಯ ಪ್ರಶ್ನೆ ಏಳುವಂತೆ ಮಾಡಿದೆ. ಗ್ರಾಹಕರ ಡೇಟಾವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಬಳಕೆದಾರರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ವೈದ್ಯರ ಜೊತೆ ಬಳಕೆದಾರರು ಖಾಸಗಿಯಾಗಿ ಚಾಟ್ ಮಾಡಿದ ಬಳಿಕ ಬಳಕೆದಾರರಿಗೆ ಔಷಧಿಗಳ ಜಾಹೀರಾತುಗಳು ಪ್ರದರ್ಶನವಾಗಿರುವ ಘಟನೆಗಳನ್ನು, ಈ ಕುರಿತು ದಾಖಲೆಗಳನ್ನು ಸುಪ್ರೀಂ ಕೋರ್ಟ್ ಪರಿಶೀಲನೆ ಮಾಡಿದೆ.

ಸ್ಥಗಿತಗೊಳ್ಳುತ್ತಾ ವ್ಯಾಟ್ಸಾಪ್?

ಸುಪ್ರೀಂ ಕೋರ್ಟ್ ಯಾವುದೇ ಮುಲಾಜಿಲ್ಲದೆ ಖಡಕ್ ವಾರ್ನಿಂಗ್ ನೀಡಿದೆ. ಭಾರತದ ಪ್ರೈವೈಸಿ ಪಾಲಿಸಿಯನ್ನು ಪಾಲಿಸಲು ಸಾಧ್ಯವಾಗದಿದ್ದರೆ, ಭಾರತದಿಂದ ಹೊರನಡೆಯಬಹುದು ಎಂದು ವ್ಯಾಟ್ಸಾಪ್ ಮಾತೃ ಸಂಸ್ಥೆ ಮೆಟಾಗಾ ವಾರ್ನಿಂಗ್ ನೀಡಿದೆ. ಹೀಗಾಗಿ ವ್ಯಾಟ್ಸಾಪ್ ಭಾರತದ ನಿಯಮ ಪಾಲನೆ ಮಾಡಿದಿದ್ದರೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.



Source link

Leave a Reply

Your email address will not be published. Required fields are marked *