
ಆದರೆ, ನೀವೇನಾದರೂ ಒಂದು ವರ್ಷಕ್ಕೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಕ್ಯಾಷ್ ಅನ್ನು ಬ್ಯಾಂಕ್ನಿಂದ ಡ್ರಾ ಮಾಡಿದ್ದೇ ಆದಲ್ಲಿ, ನೀವು ಎಚ್ಚರಿಕೆಯಿಂದ ಇರುವುದು ಅಗತ್ಯ. ಹಾಗೆಂದು ಹೆದರುವ ಅಗತ್ಯವಿಲ್ಲ. ಮನೆ ಕಟ್ಟಲು, ಮಕ್ಕಳ ಮದುವೆ ಮಾಡಿಸಲು, ಶಿಕ್ಷಣಕ್ಕೆ… ಹೀಗೆ ಯಾವ್ಯಾವುದೋ ಕಾರಣಕ್ಕೆ ಕ್ಯಾಷ್ ಡ್ರಾ ಮಾಡಿರುತ್ತೀರಿ ಎಂದುಕೊಳ್ಳಿ. ಆ ಸಮಯದಲ್ಲಿ ಅದು 10 ಲಕ್ಷ ಮೀರಿ ಹೋದ್ರೆ ಬ್ಯಾಂಕ್ನವರು ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತಾರೆ. ಆ ಸಮಯದಲ್ಲಿ ಅಧಿಕಾರಿಗಳಿಗೆ ಅಕ್ರಮದ ವಾಸನೆ ಬಂದರೆ ನಿಮ್ಮನ್ನು ಪರೀಕ್ಷೆ ಮಾಡುತ್ತಾರೆ, ಪ್ರಶ್ನೆ ಕೇಳುತ್ತಾರೆ. ನೀವು ದುಡಿದ ದುಡ್ಡೇ ಅದಾಗಿದ್ದರೆ ಅಥವಾ ಯಾರಾದರೂ ಒಳ್ಳೆಯ ಮಾರ್ಗದಿಂದ ನಿಮಗೆ ಕೊಟ್ಟಿರೋ ದುಡ್ಡು ಆಗಿದ್ದರೆ, ಭಯ ಪಡುವ ಅಗತ್ಯವೇ ಇಲ್ಲ ಬಿಡಿ.