ನವದೆಹಲಿ, ಫೆಬ್ರುವರಿ 3: ಭಾರತ ಮತ್ತು ಅಮೆರಿಕ ನಡುವೆ ಟ್ರೇಡ್ ಡೀಲ್ (ಭಾರತ US ವ್ಯಾಪಾರ ಒಪ್ಪಂದ) ಏರ್ಪಡುವುದು ನಿಶ್ಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಡೀಲ್ ಕುದುರಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಭಾರತಕ್ಕೆ ಟ್ಯಾರಿಫ್ ಅನ್ನು ಶೇ. 18ಕ್ಕೆ ಇಳಿಸದಿದ್ದರೆ. ಭಾರತವು ಟ್ಯಾರಿಫ್ ಅನ್ನು ಶೂನ್ಯಕ್ಕೆ ಇಳಿಸುತ್ತದೆ. ಕೃಷಿ ಕ್ಷೇತ್ರದ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ಸಿಗುತ್ತದೆ ಎಂಬರ್ಥದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದು ಭಾರತೀಯ ಕೃಷಿ ವಲಯದಲ್ಲಿ ಆತಂಕದ ವಾತಾವರಣ ಸೃಷ್ಟಿಗೆ ಕಾರಣವಾಗಿರುವುದು. ಆದರೆ, ಕೃಷಿ ವಿಚಾರದ ಬಗ್ಗೆ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ವರದಿಯಾಗಿದೆ.
‘ಯಾವುದೇ ವ್ಯಾಪಾರ ಒಪ್ಪಂದದಲ್ಲೂ ಭಾರತದ ಸೂಕ್ಷ್ಮ ವಿಭಾಗಗಳಾದ ಕೃಷಿ ಮತ್ತು ಡೈರಿಯನ್ನು ರಕ್ಷಿಸುವುದು ಭಾರತದ ನಿಲುವು. ಇದು ಬದಲಾಗುವುದಿಲ್ಲ. ಬ್ರಿಟನ್, ನ್ಯೂಜಿಲ್ಯಾಂಡ್ ಮತ್ತು ಯೂರೋಪಿಯನ್ ಯೂನಿಯನ್ ಜೊತೆಗಿನ ಒಪ್ಪಂದದಲ್ಲೂ ಈ ಕ್ಷೇತ್ರವನ್ನು ರಕ್ಷಿಸಲಾಗಿದೆ. ಅಮೆರಿಕದ ಒಪ್ಪಂದದಲ್ಲಿಯೂ ಇದೇ ಆಗುವುದು’ ಎಂದು ಮೂಲಗಳು ಹೇಳಿವೆ ಎಂದು ಮನಿಕಂಟ್ರೋಲ್ ವೆಬ್‌ಸೈಟ್ ವರದಿಯಲ್ಲಿದೆ.
ಇದನ್ನೂ ಓದಿ: ಏಷ್ಯನ್ ದೇಶಗಳ ಮೇಲೆ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…
ಈಗಿರುವ ಬೆಳವಣಿಗೆಯಲ್ಲಿ, ಅಮೆರಿಕವು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಲಿದೆ. ರಷ್ಯಾದ ತೈಲ ಖರೀದಿಗೆ ದಂಡವಾಗಿ ವಿಧಿಸಿದ್ದ ಶೇ. 25 ಟ್ಯಾರಿಫ್ ಅನ್ನು ಕೈಬಿಡುತ್ತಿದೆ. ಒಟ್ಟಾರೆ ಟ್ಯಾರಿಫ್ ಶೇ. 50 ರಿಂದ ಶೇ. 18ಕ್ಕೆ ಇಳಿಯುತ್ತದೆ. ಕೆಲವು ದೇಶಗಳಿಗೆ ಮಾತ್ರ ಅಮೆರಿಕ ಇದಕ್ಕಿಂತ ಕಡಿಮೆ ಟ್ಯಾರಿಫ್ ವಿಧಿಸುತ್ತಿದೆ.
ಅಮೆರಿಕದ ಟ್ಯಾರಿಫ್ ಇಳಿಕೆಗೆ ಪ್ರತಿಯಾಗಿ ಭಾರತವೂ ಸುಂಕ ಕಡಿಮೆ ಮಾಡಬಹುದು. ಭಾರತದ ಟ್ಯಾರಿಫ್ ಶೂನ್ಯವಾಗಿರುತ್ತದೆ ಎಂದು ಅಮೆರಿಕ ಹೇಳಿದೆ. ಆದರೆ, ಈ ಬಗ್ಗೆ ಭಾರತದಿಂದ ಸ್ಪಷ್ಟನೆ ಬಂದಿಲ್ಲ. ಯಾವ ದೇಶಕ್ಕೂ ಅಮೆರಿಕ ಟ್ಯಾರಿಫ್ ವಿನಾಯಿತಿ ಕೊಟ್ಟಿಲ್ಲವಾದ್ದರಿಂದ ಭಾರತ ರಫ್ತು ಸ್ಪರ್ಧಾತ್ಮಕತೆಗೆ ಧಕ್ಕೆ ಆಗುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ಭಾರತದ ಕಾನೂನನ್ನು ಅನುಸರಿಸಲು ಆಗದಿದ್ದರೂ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ
ಟ್ಯಾರಿಫ್ ಹೇಗೆ ಕೆಲಸ ಮಾಡುತ್ತಿದ್ದಾರೆ?
ಅಮೆರಿಕವು ಭಾರತದ ಮೇಲೆ ಟ್ಯಾರಿಫ್ ಹಾಕುತ್ತಿದೆ ಎಂದರೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳಿಗೆ ಈ ಟ್ಯಾರಿಫ್ ಆಯ್ಕೆ ಎಂದರ್ಥ. ಈ ಟ್ಯಾರಿಫ್ ಅನ್ನು ಭಾರತೀಯ ರಫ್ತುದಾರರು ಪಡೆಯುವುದಿಲ್ಲ. ಬದಲಾಗಿ, ಸರಕುಗಳನ್ನು ಆಮದು ಮಾಡಿಕೊಳ್ಳುವ ಅಮೆರಿಕನ್ ಸಂಸ್ಥೆಗಳು ಟ್ಯಾರಿಫ್ ಪಡೆದಿವೆ. ಹೀಗಾಗಿ, ಆಮದಿತ ಸರಕುಗಳ ಬೆಲೆ ಅಮೆರಿಕದಲ್ಲಿ ಸಹಜವಾಗಿ ಏರಿಕೆಯಾಗುತ್ತದೆ. ಅಮೆರಿಕದಲ್ಲಿ ಉತ್ಪಾದನಾ ಕ್ಷೇತ್ರವನ್ನು ಬೆಳೆಸಲು ಮತ್ತು ದೇಶೀಯ ಉತ್ಪನ್ನಗಳಿಗೆ ಆದ್ಯತೆ ಕೊಡಲು ಅಮೆರಿಕವು ಟ್ಯಾರಿಫ್ ಹಾಕುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ