Bed Broke In Kannada Serial: ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕೆಲವು ದೃಶ್ಯಗಳು ನೈಜತೆಯಿಂದ ಕಾಣಿಸಿದರೂ ಕೂಡ, ಅದರ ಹಿಂದೆ ತಂತ್ರವಿರುತ್ತದೆ, ಸಾಮಾನ್ಯ ಜನರಿಗೆ ಇದು ಹೇಗೆ ಎಂಬ ಡೌಟ್ ಬರುವುದು. ಫಸ್ಟ್ ನೈಟ್ ಸಮಯದಲ್ಲೋ, ಇನ್ಯಾವುದೋ ಸಮಯದಲ್ಲಿ ಮಂಚ ಮುರಿಯುವ ಹಾಗೆ ತೋರಿಸುತ್ತಾರೆ. ಇದು ಹೇಗೆ?

ಇತ್ತೀಚಿನ ದಿನಗಳಲ್ಲಿ ಇಂಟಿಮಸಿ ಕೋಆರ್ಡಿನೇಟರ್ ಪಾತ್ರ ಬಹಳ ಮುಖ್ಯವಾಗಿದೆ. ಫಸ್ಟ್ ನೈಟ್ ದೃಶ್ಯ ಇದ್ದಾಗ ಅಥವಾ ಇನ್ಯಾವುದೋ ದೃಶ್ಯವಿದ್ದಾರೆ ನಟ-ನಟಿಯರಿಗೆ ಆ ಸನ್ನಿವೇಶ ಹೇಗೆ ಇದೆ ಎಂದು ವಿವರಿಸುವುದು ಸುಲಭ ಇಲ್ಲ. ಕಲಾವಿದರಿಗೆ ಮುಜುಗರ ಆಗದಂತೆ ನೋಡಿಕೊಳ್ಳಬೇಕು. ಶೂಟಿಂಗ್ ವೇಳೆ ಕಲಾವಿದರಿಗೆ ಸಂಪೂರ್ಣ ಸುರಕ್ಷತೆ, ಸೌಕರ್ಯ ಕೊಡಬೇಕು.

ಫಸ್ಟ್‌ನೈಟ್ ದೃಶ್ಯಗಳನ್ನು ಶೂಟಿಂಗ್ ಮಾಡುವಾಗ, ಅಲ್ಲಿ ಅನಗತ್ಯ ಜನರಿಗೆ ಪ್ರವೇಶ ಇರೋದಿಲ್ಲ. ಕೇವಲ ನಿರ್ದೇಶಕರು, ಕ್ಯಾಮೆರಾಮನ್, ಅಗತ್ಯ ತಾಂತ್ರಿಕ ವರ್ಗದವರು ಅಲ್ಲಿರುತ್ತಾರೆ. ಇದರಿಂದ ಕಲಾವಿದರಿಗೆ ಮುಕ್ತವಾಗಿ ನಟಿಸಲು ಸಾಧ್ಯ ಆಗುವುದು.

ತೆರೆಯ ಮೇಲೆ ಕಲಾವಿದರು ತುಂಬಾ ಹತ್ತಿರ ಇದ್ದಾರೆ ಎಂದು ಕಾಣಿಸಿದರೂ ಕೂಡ ವಾಸ್ತವದಲ್ಲಿ, ಅಂತರ ಕಾಯ್ದುಕೊಂಡಿರುತ್ತಾರೆ. ಕ್ಯಾಮೆರಾವನ್ನು ಒಂದು ನಿರ್ದಿಷ್ಟ ಕೋನದಲ್ಲಿ ಇಡ್ತಾರೆ. ಆಗ ಅವರು ಪರಸ್ಪರ ಸ್ಪರ್ಶಿಸುತ್ತಿದ್ದಾರೆ ಎಂಬ ಭ್ರಮೆ ಮೂಡಿಸಲಾಗುವುದು. ಇದನ್ನು ‘ಸಿಮ್ಯುಲೇಟೆಡ್ ಆಕ್ಟಿಂಗ್’ ಎಂದು ಕರೆಯುತ್ತಾರೆ.

ಕೆಲವೊಮ್ಮೆ ಕಲಾವಿದರಿಗೆ ಫಸ್ಟ್‌ನೈಟ್ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದಿದ್ದರೆ ಅಥವಾ ಹೆಚ್ಚು ಅಶ್ಲೀಲತೆ ಬೇಡ ಎಂದರೆ, ಅವರ ಬದಲಿಗೆ ಅವರನ್ನೇ ಹೋಲುವ ಕಿರಿಯ ಕಲಾವಿದರನ್ನು ಬಳಸಲಾಗುತ್ತದೆ. ದೇಹದ ಭಾಗಗಳನ್ನು ಮುಚ್ಚಲು ಚರ್ಮವನ್ನೇ ಹೋಲುವ ಬಣ್ಣದ ಬಟ್ಟೆಗಳನ್ನು ಬಳಸಲಾಗುತ್ತದೆ.

ಕಲಾವಿದರ ನಡುವೆ ದೈಹಿಕ ತಪ್ಪಿಸಲು ದಿಂಬುಗಳು ಅಥವಾ ತೆಳುವಾದ ಸಿಲಿಕಾನ್ ಪದರಗಳನ್ನು ಬಳಸಲಾಗುವುದು. ಇದು ಕ್ಯಾಮೆರಾ ಕಣ್ಣಿಗೆ ಕಾಣಿಸಲ್ಲ.

ಕಲಾವಿದರು ಬಹುತೇಕರು ಮಂಚದ ಮೇಲೆ ಮಲಗಿರೋದಿಲ್ಲ, ಬದಲಾಗಿ ಒಂದಿಷ್ಟು ಶೀಟ್ ಹಾಕಿ, ಅದಕ್ಕೆ ಹಗ್ಗ ಕಟ್ಟಿರುತ್ತಾರೆ. ಆಮೇಲೆ ಅದರ ಮೇಲೆ ದಪ್ಪನೆಯ ಬೆಡ್ ಹಾಕಿರುತ್ತಾರೆ. ಆ ದಾರ ಎಳೆದಾಗ ಮಂಚ ಮುರಿಯುವ ಹಾಗೆ ಕಾಣುವುದು, ಅಸಲಿಗೆ ಮಂಚ ಮುರಿಯೋದಿಲ್ಲ. ರಿಯಲ್ ಆಗಿ ಮನೆಗಳಲ್ಲಿ ಮಂಚ ಮುರಿಯೋದನ್ನು ನೋಡಿದ್ದೀರಾ?

Source link
ಧಾರಾವಾಹಿಗಳಲ್ಲಿ ಮಂಚ ಮುರಿಯೋ ಸೀನ್ ಹೇಗೆ ಶೂಟ್ ಆಗತ್ತೆ? ನೀವು ಅಂದುಕೊಂಡತೆ ಏನೂ ಆಗಲ್ಲ! BTS Video