ಕಳೆದ ಒಂದು ವರ್ಷದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (ಚಿನ್ನ ಮತ್ತು ಬೆಳ್ಳಿ ಬೆಲೆಗಳು) ಸಿಕ್ಕಾಪಟ್ಟೆ ಏರಿದ ವೇಗದಲ್ಲಿ ಕೆಲವು ದಿನಗಳಿಂದ ಕುಸಿತ ಕಾಣುತ್ತಿದೆ. ಈ ಅಮೂಲ್ಯ ಲೋಹಗಳ ಬೆಲೆಯನ್ನು ಕಟ್ಟಿಹಾಕುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿರುವ ಹೊತ್ತಲ್ಲೇ ಭರ್ಜರಿ ಕುಸಿತವಾಗಿದೆ. ಹೂಡಿಕೆದಾರರು ಲಾಭಕ್ಕೆ ಮಾರಿಕೊಳ್ಳಬಹುದು ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ, ಕಾಮೆಕ್ಸ್ ಉತ್ಪನ್ನ ಪ್ಯಾನಿಕ್ ಸೆಲ್ಲಾಫ್ (ಪ್ಯಾನಿಕ್ ಸೆಲ್-ಆಫ್) ಆಗಿರುವುದು ಕಂಡು ಬಂದಿದೆ. ಪ್ಯಾನಿಕ್ ಸೆಲ್ಲಾಫ್ ಎಂದರೆ ಹೂಡಿಕೆದಾರರು ಯಾವುದೋ ಆತಂಕದಿಂದ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಿದೆ.
ಗೋಲ್ಡ್, ಸಿಲ್ವರ್ ಫ್ಯೂಚರ್ಸ್ ನಲ್ಲಿ ಶುರುವಾದ ನಡುಕ
ಕಮಾಡಿಟಿ ಎಕ್ಸ್‌ಚೇಂಜ್ ಅಥವಾ ಕಾಮೆಕ್ಸ್‌ನಲ್ಲಿ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಸಖತ್ ಕುಸಿತ ಕಂಡಿವೆ. ಸೋಮವಾರ ಒಂದೇ ದಿನ ಈ ಡಿರೈವೇಟಿವ್ಸ್ ಟ್ರೇಡಿಂಗ್ ನಲ್ಲಿ ಬೆಲೆ ಶೇ. 2ರಿಂದ 5ರಷ್ಟು ಇಳಿಕೆಯಾಗಿದೆ.
ಇಲ್ಲಿಂದ ಶುರುವಾದ ನಡುಕವು ಐಟಿಎಫ್ ಹೂಡಿಕೆದಾರರಿಗೆ ಭಯಭೀತಗೊಳಿಸಿದೆ. ಸಿಲ್ವರ್ ಐಟಿಎಫ್ ಮತ್ತು ಗೋಲ್ಡ್ ಐಟಿಎಫ್‌ಗಳಿಂದ ಲೆಕ್ಕವಿಲ್ಲದಷ್ಟು ಹೂಡಿಕೆಗಳು ಹೊರ ಹೋಗಿವೆ. ಹೀಗಾಗಿ, ಈ ಎರಡು ಲೋಹಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಮಾರುಕಟ್ಟೆ ಕೃಷಿ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಲು ಕಾರಣವಾಗಿವೆ ಈ ಐಟಿಎಫ್. ಈಗ ಇದೆ ಐಟಿಎಫ್‌ಗಳು ಇವೆರೆಡು ಲೋಹಗಳ ಬೆಲೆ ಕುಸಿತಕ್ಕೆ ಎಡೆ ಮಾಡಿಕೊಟ್ಟಿವೆ.
ಗೋಲ್ಡ್ ಫ್ಯೂಚರ್ಸ್, ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಕಾರಣವೇನು?
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ನ ಚೇರ್ಮನ್ ಸ್ಥಾನ ಬದಲಾವಣೆ ಆಗಿದ್ದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಟ್ರಂಪ್ ಮಾತು ಕೇಳುವ ಕೆವಿನ್ ವಾರ್ಷ್ ಎಂಬುವವರು ಹೊಸ ಛೇರ್ಮನ್ ಆಗಲಿದ್ದಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಬೆಲೆ ವ್ಯತ್ಯಯಕ್ಕೆ ಕಾರಣವಾಯಿತು.
ಇದನ್ನೂ ಓದಿ: ಏಷ್ಯನ್ ದೇಶಗಳ ಮೇಲೆ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…
ಸಿಎಂಇ ಗ್ರೂಪ್ ಮಾರ್ಜಿನ್ ದರ ಏರಿಕೆಯಾಗಿತ್ತು ಪ್ಯಾನಿಕ್ ಸೆಲ್ಲಾಫ್ ಗೆ ಕಾರಣ?
ವಿಶ್ವದ ಕೆಲವು ಪ್ರಮುಖ ಡಿರೈವೇಟಿವ್ ಮಾರುಕಟ್ಟೆಗಳನ್ನು ನಿರ್ವಹಿಸುವ ಸಿಎಂಇ ಗ್ರೂಪ್ ಮೂರು ದಿನದಲ್ಲಿ ಎರಡು ಬಾರಿ ಮೈಂಟೆನೆನ್ಸ್ ಮಾರ್ಜಿನ್ ಅನ್ನು ಹೆಚ್ಚಿಸಿತು. ಟ್ರೇಡರ್ಗಳು ಎಫ್ ಅಂಡ್ ಓ ಟ್ರೇ ಡಿಂಗ್ ಮಾಡಲು ಠೇವಣಿ ಹಣ ಬೇಕಾದಷ್ಟು ಹೆಚ್ಚಾಯಿತು. ಇದರಿಂದ ಟ್ರೇಡರ್ಗಳು ಫ್ಯೂಚರ್ಸ್ನಿಂದ ನಿರ್ಗಮಿಸಲಾರಂಭಿಸಿದರು. ಇದು ಗೋಲ್ಡ್ ಫ್ಯೂಚರ್ಸ್ ಮತ್ತು ಸಿಲ್ವರ್ ಫ್ಯೂಚರ್ಸ್ ಕುಸಿತಕ್ಕೆ ಕಾರಣವಾಯಿತು. ತತ್ಪರಿಣಾಮವಾಗಿ ಐಟಿಎಫ್‌ನಲ್ಲಿ ಪ್ಯಾನಿಕ್ ಸೆಲ್ಲಾಫ್ ನಡೆದಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ