ಮುಖೇಶ್ ಅಂಬಾನಿ (ಮುಕೇಶ್ ಅಂಬಾನಿ) ವಿಶ್ವದ ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಒಬ್ಬರು. ಅವರ ಒಡೆತನದ ರಿಲಯನ್ಸ್ ಮತ್ತು ಜಿಯೋ ದೇಶ ಮತ್ತು ವಿದೇಶಗಳಲ್ಲಿ ಹಲವಾರು ರೀತಿಯ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್ ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್ ವರ್ಕ್ ಮನರಂಜನೆಗೆ ಸಂಬಂಧಿಸಿದ ಹಲವು ಉದ್ಯಮಗಳಿವೆ. ಇವುಗಳ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಣವನ್ನು ಖರೀದಿಸಿ ಸ್ವಾಧೀನಕ್ಕೆ ಸಂಸ್ಥೆಯನ್ನು ಹೊಂದಿದೆ.
ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್ಟೈನ್ ನಿರ್ಮಾಣ ಸಂಸ್ಥೆಯನ್ನು ರಿಯಾಲನ್ಸ್ ಜಿಯೋ ಸ್ಟುಡಿಯೋ ಖರೀದಿಸಿದೆ. ಸಿಖ್ಯ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಹೊಂದಿದೆ, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕತ್ವವನ್ನು ಹೊಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರ ಭಾರತದಲ್ಲಿ ನಡೆದಿದೆ ಎಂದು ರಿಯಾಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.
ಗುಣೀತ್ ಮೋಂಗಾ ಕಪೂರ್ ಮತ್ತು ಅಚಿನ್ ಜೈನ್ ಆರಂಭಿಸಿದ ಸಿಖ್ಯಾ ವೇದಿಕೆ ಎಂಟರ್ಟೈನ್ಮೆಂಟ್, ಕಳೆದ ಇತ್ತೀಚೆಗೆ, ವಿಶ್ವದಲ್ಲಿ ಭಾರತೀಯ ಕಥೆಗಳನ್ನು ಹೇಗೆ ಹೇಳಬಹುದು ಮತ್ತು ಅದರ ಮೂಲಕ ಏನನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿದೆ. ಸಿಖ್ಯಾ ನಿರ್ಮಾಣ ಸಂಸ್ಥೆಯು ಆಸ್ಕರ್ ಪ್ರಶಸ್ತಿ ಗೆದ್ದಿರುವ ಜೊತೆಗೆ ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯಾಗಿದೆ.
ಇದನ್ನೂ ಓದಿ:ಈಗ ಹೇಗಿದ್ದಾರೆ ನೋಡಿ ‘ಮಿಲನ’ ಸಿನಿಮಾ ನಟಿ ಪಾರ್ವತಿ; ಹೊಸ ಫೋಟೋಸ್ ವೈರಲ್
ಸಿಖ್ಯ ಎಂಟರ್ನ್ಮೆಂಟ್ ಸಂಸ್ಥೆಯು ಎರಡು ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯಾಗಿದೆ. 2018 ರಲ್ಲಿ ಸಿಖ್ಯ ನಿರ್ಮಿಸಿದ್ದ ‘ಪಿರಿಯಡ್: ಎಂಡ್ ಆಫ್ ಸೆಂಟೆನ್ಸ್’ ಹೆಸರಿನ ಡಾಕ್ಯುಮೆಂಟರಿ ಶಾರ್ಟ್ಗೆ ಆಸ್ಕರ್ ಬಂದಿತ್ತು. ಬಳಿಕ 2022 ರಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಬಂದಿತ್ತು. ಈ ಎರಡೂ ಡಾಕ್ಯುಮೆಂಟರಿಗಳನ್ನು ಸಿಖ್ಯ ಎಂಟರ್ಟೈನ್ ಮೆಂಟ್ ನಿರ್ಮಾಣ ಮಾಡಿದೆ.
ಡಾಕ್ಯುಮೆಂಟರಿ ಮಾತ್ರವೇ ಅಲ್ಲದೆ ಸಿಖ್ಯ ಹಲವು ಅತ್ಯುತ್ತಮ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದೆ. ಅದರಲ್ಲೂ ದೊಡ್ಡ ಸ್ಟಾರ್ ನಟರಲ್ಲದೆ, ಹೊಸಬರನ್ನು ಹಾಕಿಕೊಂಡು ಕತೆಗೆ ಮಾತ್ರ ಪ್ರಾಧಾನ್ಯತೆ ನೀಡುತ್ತಾ ಸಿನಿಮಾ ನಿರ್ಮಾಣ ಮಾಡುವುದು ಸಿಖ್ಯ ಶೈಲಿ. ‘ದಿ ಲಂಚ್ಬಾಕ್ಸ್’, ‘ಗರ್ಲ್ ಇನ್ ಯೆಲ್ಲೋ ಬೂಟ್ಸ್’, ‘ಮಸಾನ್’, ‘ಸೂರರೈ ಪೋಟ್ರು’, ‘ಕಥಲ್’ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ