ಸುಚಿತ್ರಾ ಜೊತೆಗೆ ಕಮಲಾಕರ್ ಭಟ್ ಗುರೂಜಿಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಕಾರವಾರ, ಫೆಬ್ರವರಿ 03: ಸುಚಿತ್ರಾ ಎಂಬ ವಿವಾಹಿತ ಮಹಿಳೆಯ ಜೊತೆಗೆ ಕಮಲಾಕರ ಭಟ್ ಗುರೂಜಿಯ ಅಕ್ರಮ ಸಂಬಂಧ ಆರೋಪದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಆಯೋಜಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಅಷ್ಟ ಇಬ್ಬರ ನಡುವಿನ ಸಂಬಂಧ ಬಯಲು ಮಾಡಿದ್ದು, ಒಂದೇ ಒಂದು ಮೆಸೇಜ್. 20 ವರ್ಷಗಳ ಹಿಂದೆ ಮಹೇಶ್ ಜೊತೆ ಪ್ರೀತಿಸಿ ವಿವಾಹವಾಗಿದ್ದರು ಸುಚಿತ್ರಾ ಕಳೆದ 6 ತಿಂಗಳ ಹಿಂದೆ ಗಂಡನಿಗೆ ಗೊತ್ತಿಲ್ಲದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನೂ ಕರೆದೊಯ್ದು ಶಿವಮೊಗ್ಗದ ಕಮಲಾಕರ ಭಟ್ ಗೂರೂಜಿ ಜೊತೆ ವಾಸವಿದ್ದಳು. ಈ ಬಗ್ಗೆ ಮಕ್ಕಳ ತಂದೆಗೆ ವಿಷಯ ತಿಳಿಸಿದರೆ ಗುರೂಜಿ ಮತ್ತು ಸುಚಿತ್ರಾ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದೆ.
ತಂದೆಗೆ ಮಗಳು ಮಾಡಿದ್ದ ಮೇಸೇಜ್ ಏನು?
ನಾನು ಮತ್ತೆ ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ತಾಯಿ ಮತ್ತು ಗುರೂಜಿ ಬೇರೆ ರೂಂನಲ್ಲಿ ಮಲಗುತ್ತಿದ್ದಾರೆ ಎಂಬ ಮಾಹಿತಿ ಸುಚಿತ್ರಾ ಮಗಳು ತಂದೆ ಮಹೇಶ್ ಅವರಿಗೆ ತಿಳಿಸಿದ್ದರು. ಜೊತೆಗೆ ತಾಯಿ ತನಗೆ ಹಿಂಸೆ ನೀಡುತ್ತಿದ್ದಳು, ಪ್ಲೀಸ್ ಅಪ್ಪ ನನ್ನನ್ನು ಕರೆದುಕೊಂಡು ಹೋಗು ಎಂದು ಮೆಸೇಜ್ ಮಾಡಿದ್ದಳು. ತಾನು ಇಲ್ಲದಿದ್ದರೆ ಸಾಯುವುದಾಗಿ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಶಿವಮೊಗ್ಗದಿಂದ ಸಿದ್ದಾಪುರಕ್ಕೆ ಬರುವಂತೆ ತಂದೆ ಮಹೇಶ್ ತಿಳಿಸಿದ್ದರು. ಅದರಂತೆ ಮಗಳು ತಂದೆಯ ಬಳಿ ಬಂದಿದ್ದು, ಆಕೆಯನ್ನು ಸಿದ್ದಾಪುರ ಠಾಣೆಗೆ ಕರೆದುಕೊಂಡು ಹೋಗಿದ್ದ ಮಹೇಶ್ ಪತ್ನಿಯ ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದೆಯೂ ಮಕ್ಕಳನ್ನು ಹಾಜರುಪಡಿಸಿದ್ದರು.
ಇದನ್ನೂ ಓದಿ: ಕಮಲಾಕರ ಭಟ್ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹಲ್ಲೆ, ಸಾವು
ಈ ನಡುವೆ ರಾತ್ರಿ 9.45ರ ಸುಮಾರಿಗೆ ಸುಚಿತ್ರಾ ಮತ್ತು ಆಕೆಯ ತಂದೆ ಸೇರಿ ಇತರ ನಾಲ್ವರು ಚಾಕು ಹಿಡಿದು ಏಕಾಏಕಿ ಮನೆಗೆ ನುಗ್ಗಿದ್ದು, ಅವರನ್ನು ತಡೆದ ಮಹೇಶ್, ಅವರ ವಸಂತ್ ನಾಯ್ಕ ಮತ್ತು ನೆರೆಮನೆಯ ಕುಮಾರ್ ಅವರು ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಚಿತ್ರಾ ಜೊತೆಗಿನ ಗುರೂಜಿ ಫೋಟೋ ಲಭ್ಯ
ಕಮಲಾಕರ ಭಟ್ ಗುರುಜಿ ಜೊತೆಗಿನ ಸುಚಿತ್ರ ಫೋಟೋ Tv9ಗೆ ಲಭ್ಯವಾಗಿದೆ. ನನ್ನ ಕುಟುಂಬ ಎಂದು ಗುರೂಜಿ ಹಾಕಿರುವ ಈ ಫೋಟೋ ಇಬ್ಬರು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಸುಚಿತ್ರಾಳ ಹೆಗಲ ಮೇಲೆ ಕೈ ಹಾಕಿ ಗುರೂಜಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಮಗಳ ಆರೋಪಕ್ಕೆ ಪುಷ್ಟಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:29 pm, ಮಂಗಳವಾರ, 3 ಫೆಬ್ರವರಿ 26