ಬೆಳಗಾವಿ, (ಫೆಬ್ರವರಿ 03): ತಾಯಿಯೊಂದಿಗೆ ಅನೈತಿಕ ಸಂಬಂಧ (ಅಕ್ರಮ ಸಂಬಂಧ) ಹೊಂದಿದ್ದನೆಂಬ 10 ವರ್ಷಗಳ ಹಳೆಯ ದ್ವೇಷಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಬೆಳಗಾವಿ ಘಟನೆ ಜಿಲ್ಲೆಯ ಸವದತ್ತಿಯಲ್ಲಿ (ಸವದತಿ) ನಡೆದಿದೆ. ಈರಯ್ಯ ಮಠಪತಿ ಎಂಬಾತ ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಎಂಬಾತನನ್ನು ಕೊಚ್ಚಿ ಕೊಂದಿದ್ದಾನೆ. ಬಳಿಕ ಹಂತಕ ಈರಯ್ಯ ಮಠಪತಿ, ಶವದ ಮೇಲೆ ನಿಂತು ವಿಕೃತಿ ಮೆರೆದಿದ್ದು, ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿ ಶರಣಾಗಿದ್ದಾನೆ.
ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತಿದ್ದ. ಹಂತಕ ಈರಯ್ಯನ ತಾಯಿಗೆ ಬಸಪ್ಪ ಅನೈತಿಕ ಸಂಬಂಧ ಹೊಂದಿದ್ದು, 10 ವರ್ಷದ ಹಿಂದೆ ಇಬ್ಬರು ಮನೆಬಿಟ್ಟು ಓಡಿಹೋಗಿದ್ದರು. ಇದರಿಂದ ಕೆರಳಿದ್ದ ಈರಯ್ಯ, ಹತ್ತು ವರ್ಷದ ಬಳಿಕ ಮತ್ತೆ ಗ್ರಾಮಕ್ಕೆ ಬಂದಿದ್ದ ಬಸಪ್ಪನನ್ನು ಮಚ್ಚಿನಿಂದ ಮನಸೋ ಇಚ್ಛೆ ದಾಳಿ ಮಾಡಿದ್ದಾನೆ. ಇನ್ನು ಕೊಲೆಯಾದ ಬಸ್ಸಪ್ಪನ ಪುತ್ರ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದು, ಈ ಘಟನೆಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.