ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ

ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ


ಕಸದಿಂದ ಕಾಣುತ್ತಿಲ್ಲ ಬಸ್ ನಿಲ್ದಾಣ ಚಿತ್ರ ಕ್ರೆಡಿಟ್ ಮೂಲ: Tv9 ಕನ್ನಡ

ಬೆಂಗಳೂರು, ಫೆ.3: ಬೆಂಗಳೂರು, ಭಾರತದ ‘ಸಿಲಿಕಾನ್ ವ್ಯಾಲಿ’ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿದೆ. 14,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 44 ಕ್ಕೂ ಹೆಚ್ಚು ಯುನಿಕಾರ್ನ್ ಕಂಪನಿಗಳು ಐಟಿಐ, ಎಐ (ಎಐ), ಡೀಪ್‌ಟೆಕ್ ಮತ್ತು ನಾವೀನ್ಯತೆಯ ಪ್ರಮುಖ ಜಾಗತಿಕ ಕೇಂದ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲ ಕೀರ್ತಿಗೂ ವಿರುದ್ಧವಾಗಿದೆ. ಒಂದು ಕಡೆ ರಾಜ್ಯ ಸರ್ಕಾರದ ಬೆಂಗಳೂರನ್ನು ಬ್ರಾಂಡ್ ಸಿಟಿ ನಡೆಯಲಿದೆ ಎಂದು ಹೇಳುತ್ತಿದೆ. ಆದರೆ ಬೆಂಗಳೂರಿನ ಕಸ ರಾಶಿಯನ್ನು ನೋಡಿದ್ರೆ, ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು ಎಂದು ಜನ ಹೇಳುತ್ತಿದ್ದಾರೆ. ಇದೆನು ಬಸ್ ನಿಲ್ದಾಣವೋ ಅಥವಾ ಜಿಬಿಎ ಡಂಪಿಂಗ್ ಸ್ಥಳವೋ ಎಂಬುದು ಗೊತ್ತಾಗುತ್ತಿಲ್ಲ. ಸಿ ವಿ ರಾಮನ್ ನಗರದ NGEF ವೃತ್ತದ ಬಳಿ ಇರುವ ಬಸ್ ನಿಲ್ದಾಣ ಅವಸ್ಥೆ ಇದು.

ಸಿ.ಐ.ರಾಮ ನಗರದ ಎನ್.ಜಿ.ಇ.ಎಫ್ ವೃತ್ತದ ಬಳಿಯ ಬಸ್ ನಿಲ್ದಾಣದ ಸುಮಾರು ದಿನಗಳಿಂದ ಅವಸ್ಥೆಯಲ್ಲಿದೆ, ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಿಲ್ಲ, ಗಮನಿಸಿದ್ರು ಸರಿ ಮಾಡುವ ಯೋಚನೆ ಮಾಡಿಲ್ಲ. ನಾವು ಬೆಂಗಳೂರನ್ನು ಬದಲಾಯಿಸುತ್ತೇವೆ. “ಹಾಗೆ ಮಾಡಲಾಗುತ್ತದೆ, ಹೀಗೆ ಮಾಡಲಾಗುತ್ತದೆ” ಎಂದು ಕೊಚ್ಚಿಕೊಳ್ಳುತ್ತಿರುವ ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಈ ಕಡೆ ತಲೆ ಕೂಡ ಹಾಕಿಲ್ಲ. ಬಸ್ ಸ್ಟಾಪ್ ಮುಂದೆ ರಾಶಿ ರಾಶಿ ಕಸದ ಮಧ್ಯೆ ಬಸ್ ಗಾಗಿ ಪ್ರಯಾಣಿಕರ ಪರದಾಡುತ್ತಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿರುವ ಈ ಬಸ್ ನಿಲ್ದಾಣದಲ್ಲಿ ದಿನವಿಡೀ ಕಸದ ರಾಶಿ ಬಿದ್ದಿದೆ. ಅಲ್ಲಿಯ ದುರ್ವಾಸನೆಯಿಂದಾಗಿ ಪ್ರಯಾಣಿಕರು ನಿಲ್ದಾಣದ ಒಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ಸ್ಥಳೀಯ ಕಟ್ಟಡ ರಾತ್ರೋರಾತ್ರಿ ಬಂದು ಕಟ್ಟಡದ ತ್ಯಾಜ್ಯವನ್ನು (ನಿರ್ಮಾಣ ಅವಶೇಷಗಳು) ರಸ್ತೆಯ ಮೇಲೆ ಮತ್ತು ಬಸ್ ನಿಲ್ದಾಣದ ಮುಂದೆ ಸುರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರವಾಗುತ್ತಿದೆ.ಲ್ದಾನದ ಮುಂದೆ ಕಸ ಮತ್ತು ತ್ಯಾಜ್ಯ ವಸ್ತು ಚಾಲಕರು ಬಸ್ ನಿಲ್ಲಿಸದೆ ಹೋಗುತ್ತಿದೆ. ಈ ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯ ಮಧ್ಯೆ ನಿಂತು ಜೀವದ ಹಂಗು ತೊರೆದು ಪರದಾಡಬೇಕಾಗಿದೆ. ಹಲವು ತಿಂಗಳಿನಿಂದ ಈ ಅವಸ್ಥೆ ಯಾರಿಗಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಬಿಬಿಎಂಪಿ ಸಿಬ್ಬಂದಿ ಕಣ್ಣೆತ್ತಿ ಕೂಡ ನೋಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರಾ? ಹೀಗೆ ಮಾಡಿದ್ರೆ ಸಾಕು

“ಇಲ್ಲಿ ಬಸ್ಸಿಲ್ಲ, ನಿಂತರೂ ಕಸದ ವಾಸನೆಗೆ ನಾವು ನಿಲ್ಲೋಕೆ ಆಗಲ್ಲ. ರಾತ್ರಿ ಹೊತ್ತು ದೊಡ್ಡ ಲಾರಿಗಳಲ್ಲಿ ತಂದು ಕಸ ಹಾಕ್ತಾರೆ, ಕೇಳೋರೇ ಇಲ್ಲ. ಎಂದು ರಘು ಎಂಬುವವರು ಹೇಳಿದ್ದಾರೆ. ಬೈಕ್‌ನಲ್ಲಿ ಹೋಗುವಾಗ ಈ ರಸ್ತೆಯಲ್ಲಿ ಬಿದ್ದಿರೋ ಕಟ್ಟಡ ತ್ಯಾಜ್ಯದಿಂದಾಗಿ ಎಷ್ಟೋ ಜನ ಬಿದ್ದಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಕಸ ವಿಲೇವಾರಿ ಮಾಡಬೇಕು. ಎಂದು ವಾಹನ ಸವಾರ ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:59 pm, ಮಂಗಳವಾರ, 3 ಫೆಬ್ರವರಿ 26



Source link

Leave a Reply

Your email address will not be published. Required fields are marked *