ಶೇಕುಂ ಮತ್ತು ಉಮರ್ ಫಾರೂಕ್ ಜೊತೆ ಜುಮೈಲಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಮಂಗಳೂರು, ಫೆಬ್ರವರಿ 03: ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ. ಜುಮೈಲ(18) ಮತ್ತು ಶೇಕುಂ(55) ಮೃತ ದುರ್ದೈವಿಗಳಾಗಿದ್ದು, ಆರೋಪಿ ಉಮರ್ ಫಾರೂಕ್ ಮಂಜೇಶ್ವರನನ್ನು ಬಂಧಿಸಿದ್ದಾರೆ. ಜಗಳ ಬಿಡಿಸಲು ಹೋದ ಜುಮೈಲ ಮೊದಲು ಮೃತ ಪಟ್ಟಿದ್ದರೆ, ಗಂಭೀರ ತೊಂದರೆಯಿದ್ದ ಶೇಕುಂ ಕೂಡ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿದ್ದಾರೆ.
ಫಾರೂಕ್ ಹಾಗೂ ಪತ್ನಿ ತಾಹಿರ ನಡುವೆ ಕೌಟುಂಬಿಕ ಕಲಹ ಇತ್ತು, ಫಾರೂಕ್ ನಾದಿನಿ ಮನೆಯಲ್ಲಿ ಪತ್ನಿ ತಾಹಿತ ಮತ್ತು ಪುತ್ರಿ ಜುಮೈಲ ವಾಸವಿದ್ದರು. ಕೌಟುಂಬಿಕ ಕಲಹ ತಾರಕಕ್ಕೇರಿ ವಿಚ್ಛೇದನದ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ತನ್ನ ಹೆಸರಿಗೆ ಆಸ್ತಿ ಮಾಡಿಕೊಡುವಂತೆ ಫಾರೂಕ್ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ನಿನ್ನೆ ಉಮ್ಮರ್ ಮತ್ತು ಆತನ ಬಾವ ಶೇಕುಂ ನಡುವೆ ಜಗಳ ಆರಂಭಿದ್ದು, ಅದು ವಿಕೋಪಕ್ಕೆ ಹೋದಾಗ ಜಗಳ ಬಿಡಿಸಲು ಹೋದ ಜುಮೈಲಾಗೆ ಕತ್ತಿ ತಗುಲಿದೆ. ವಯಸ್ಸಾಗಿದೆ.
ಇದನ್ನೂ ಓದಿ: ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ; ಪುತ್ರಿಯಿಂದಲೇ ಮ್ಯಾಟರ್ ರಿವೀಲ್
ಇನ್ನು ಆರೋಪಿ ಉಮ್ಮರ್ ಫಾರೂಖ್ ಕೆಲ ಹಿಂದ ತಿಂಗಳಷ್ಟೇ ವಿದೇಶದಿಂದ ಬಂದಿರುವ ಮಾಹಿತಿ ಇದ್ದು, ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ವಸ್ತು ವ್ಯಸನಿ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಮಂಜೇಶ್ವರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಉಮ್ಮರ್ ಫಾರೂಖ್‌ಗೆ ತಕ್ಕ ಶಿಕ್ಷೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.
ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಹಲ್ಲೆ
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನ ಹಳ್ಳಿಖೇಡದಲ್ಲಿ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬೆನ್ ಚಿಂಚೋಳ್ಳಿ ನಿವಾಸಿಯಾಗಿರುವ 26 ವರ್ಷದ ಅನಿಲ್ ಕುಮಾರ್ ಗಾಯಾಳುವಾಗಿದ್ದು, ಹಂದಿ ಸಾಕಾಣಿಕೆ ವಿಚಾರವಾಗಿ ನಡೆದ ಜಗಳ ಸಂಬಂಧ ಠಾಣೆಗೆ ದೂರು ಕೊಡಲು ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹಲ್ಲೆಗೊಳಗಾದ ಅನಿಲ್ ಕುಮಾರ್ ಅವರಿಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.