ಸಿನಿಮಾಗಳ (ಸಿನಿಮಾ) ಆಡಿಯೋ ಹಕ್ಕುಗಳು ಕೋಟ್ಯಂತರ ರೂಪಾಯಿಗೆ ಮಾರಾಟ ಆಗುತ್ತವೆ. ಮುಂಚೆಯೆಲ್ಲ ಜನ ಸಿನಿಮಾಗಳ ಸಿಡಿ, ಕ್ಯಾಸೆಟ್ ಖರೀದಿಸಿ ಹಾಡು ಕೇಳಲು. ಆದರೆ ಈಗ ಯೂಟ್ಯೂಬ್, ಸ್ಪೋಟಿಫೈ, ಅಮೆಜಾನ್ ಮ್ಯೂಸಿಕ್, ಜಿಯೋ ಸಾವನ್ ರೀತಿಯ ಅಪ್ಲಿಕೇಶನ್‌ಗಳಲ್ಲಿ ಹಾಡುಗಳನ್ನು ಕೇಳುತ್ತಾರೆ. ಯೂಟ್ಯೂಬ್‌ಗಳೆಲ್ಲ ಹಾಡುಗಳನ್ನು ಜನ ಉಚಿತವಾಗಿ ನೋಡುತ್ತಾರೆ. ಆದರೆ ಇದರಿಂದ ಆಡಿಯೋ ಸಂಸ್ಥೆಗಳಿಗೆ ಭಾರಿ ಮೊತ್ತದ ಹಣ ಬರುತ್ತದೆ. ಈ ಬಗ್ಗೆ ಇದೀಗ ಹಿಂದಿಯ ಸಂಗೀತ ನಿರ್ದೇಶಕ ಮಾತನಾಡಿದ್ದಾರೆ.
ಅಮಲ್ ಮಲ್ಲಿಕ್, ಬಾಲಿವುಡ್ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಸಹ. ಹಲವಾರು ಅತ್ಯುತ್ತಮ ಸಿನಿಮಾ ಹಾಡುಗಳು. ಆದರೆ ಕೆಲವು ವಿವಾದಗಳಿಗೆ ವಿಶೇಷವಾಗಿ ಸಂಗೀತ ಸಂಸ್ಥೆಗಳ ವಿರೋಧವನ್ನು ಕಟ್ಟಿಕೊಂಡು ಅವಕಾಶ ವಂಚಿತವಾಗಿದೆ. ಈ ಬಗ್ಗೆ ಇದೀಗ ಅಮಲ್ ಮಲ್ಲಿಕ್ ಅವರು ಮಾತನಾಡಿದ್ದು, ಸಂಗೀತ ಸಂಸ್ಥೆಗಳು ಸಂಗೀತಗಾರರಿಗೆ ಮಾಡಿದ ಅನ್ಯಾಯವನ್ನು ವಿವರಿಸಿದ್ದಾರೆ. ತಮ್ಮ ಒಂದೇ ಒಂದು ಹಾಡಿನಿಂದ ಸಂಗೀತ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಹಣ ಬಂತು.
ರಣಬೀರ್ ಕಪೂರ್, ಅರ್ಜುನ್ ರಾಮ್ ಪಾಲ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ‘ರಾಯ್’ ಸಿನಿಮಾಕ್ಕೆ ಅಮಾಲ್ ಮಲ್ಲಿಕ್ ಸಂಗೀತ ನೀಡಿದ್ದರು. ಆ ಸಿನಿಮಾದ ‘ಸೂರಜ್ ದೂಬಾ ಹೈ’ ಹಾಡು ಸಖತ್ ಹಿಟ್ ಆಗುತ್ತಿದೆ. ಟಿ ಸೀರೀಸ್‌ನವರು ಆಡಿಯೋ ಹಕ್ಕು ಖರೀದಿಸಿದ್ದರು. ಅಮಲ್ ಮಲ್ಲಿಕ್ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಆ ಒಂದು ಹಾಡಿನಿಂದ ಟಿ ಸೀರೀಸ್ ಗೆ ಈವರೆಗೆ 70 ಕೋಟಿಗೂ ಹೆಚ್ಚು ಮೊತ್ತ ಸಿಕ್ಕಿದೆಯಂತೆ.
ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ?
ಮ್ಯೂಸಿಕ್ ಕಂಪನಿಗೆ 60-70 ಕೋಟಿ ಮಾತ್ರ ಆ ಒಂದು ಹಾಡಿನಿಂದ ಬಂತು ಆದರೆ ನನಗೆ ಸಿಕ್ಕಿದ್ದು ಬಹಳ ಅತ್ಯಲ್ಪ. ನನಗೆ ಈ ತನಕ ಒಂದು ಕೋಟಿ ರೂಪಾಯಿ ಸಿಕ್ಕಿರಬಹುದು ಅಷ್ಟೆ. ಈ ಹಕ್ಕಿಗಾಗಿ ಹೋರಾಟ ಎಂಬುದು ಕೇವಲ ನನ್ನ ವೈಯಕ್ತಿಕ ಸಂಪತ್ತಿಗಾಗಿ ಅಲ್ಲ. ನಾನು ಜನರಿಗೆ ಸಹಾಯ ಮಾಡಲು ಆ ರೀತಿಯ ಹಣವನ್ನು ಗಳಿಸಲು ಬಯಸುತ್ತೇನೆ. ನಾನು ಜನ ಸೇವೆಯನ್ನು ನನ್ನದೇ ಆದ ರೀತಿಯಲ್ಲಿ ಮಾಡುತ್ತೇನೆ, ನಾನು ಮಾಡುವ ಹೋರಾಟದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ಜನರಿಗೆ ಸಹಾಯ ಮಾಡಲು ನನಗೆ ಹಣ ಬೇಕು. ನನಗೆ ಹಕ್ಕುಗಳು ಅಥವಾ ಸಮಾನ ಹಕ್ಕುಗಳು ಅಥವಾ ಕೆಲವು ರೀತಿಯ ಹಕ್ಕುಗಳು ಇದ್ದಾಗ ಮಾತ್ರ ಅದು ಸಾಧ್ಯ’ ಅಮಾಲ್.
ದಕ್ಷಿಣದ ಸಂಗೀತ ನಿರ್ದೇಶಕರುಗಳ ಬಗ್ಗೆ ಮಾತನಾಡಿರುವ ಅಮಲ್ ಮಲ್ಲಿಕ್, ‘ದಕ್ಷಿಣದ ಸಂಗೀತ ನಿರ್ದೇಶಕರು ದೊಡ್ಡ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಎಆರ್ ರೆಹಮಾನ್ ಹಾಗೂ ಇನ್ನೂ ಕೆಲವರು ತಮ್ಮ ನಿರ್ಣಯಕ್ಕೆ ಗಟ್ಟಿಯಾಗಿ ನಿಂತು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ’ ಎಂದು ಮಲ್ಲಿಕ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ