Madikeri: ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!

Madikeri: ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!


ಮಡಿಕೇರಿ, ಫೆಬ್ರವರಿ 03: ಕೊಡಗು ಜಿಲ್ಲೆಯಲ್ಲಿ ಮರಗಳ ಮಾರಣಹೋಮ ಮುಂದುವರಿದಿದ್ದು, ರೆಸಾರ್ಟ್‌ಗಾಗಿ 2 ಬೇಡಿಕೆಯಿದ್ದ ಮರಗಳನ್ನು ವೈದ್ಯರು ಕಡಿಸಿರುವ ಆರೋಪ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ಕೇಳಿಬಂದಿದೆ. ವೈದ್ಯ ಶ್ಯಾಮ್ ಅಪ್ಪಣ್ಣ ಎಂಬವರು ತಾವು ಖರೀದಿಸಿದ್ದ ಎರಡು ಭೂಮಿಯಲ್ಲಿದ್ದ ಮರಗಳನ್ನು ಅರಣ್ಯ, ಇಲಾಖೆಯ ಅನುಮತಿ ಪಡೆದು ಕಟಾವು ಮಾಡಿದ್ದಾರೆ. ಘಟನೆ ಸಂಬಂಧ ವೈದ್ಯ ಶ್ಯಾಮ್ ಅಪ್ಪಣ್ಣ, ಸಹಕರಿಸಿದ ವಿನಯ್, ಸಂದೀಪ್ ಪುಣೆ ಎಂಬವರ ಮೇಲೂ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಆದರೆ ಎಫ್‌ಐಆರ್‌ನಲ್ಲಿ 14 ಮರಗಳು ಮಾತ್ರ ನಾಶವಾಗಿವೆ ಎಂದು ನಮೂದಿಸಲಾಗಿದೆ, ಎರಡು ಸ್ಥಳದಲ್ಲಿ 50ಕ್ಕೂ ಅಧಿಕ ಮರಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *