ಟೀಂ ಇಂಡಿಯಾ ವಿರುದ್ಧ ಟಿ20 ಪಂದ್ಯವನ್ನಾಡುವುದಿಲ್ಲ ಎಂದಿರುವ ಪಾಕಿಸ್ತಾನಕ್ಕೆ ಮುಂದೆ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡುತ್ತದೆ. ಏಕೆಂದರೆ ನೂರಾರು ಸಮಸ್ಯೆಗಳಿಂದ ಬಳಲುತ್ತಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಐಸಿಸಿ ವೆಂಟ್ ನಿಂದ ಬರುತ್ತಿದ್ದ ನೂರಾರು ಕೋಟಿ ರೂಗಳ ಆದಾಯವನ್ನು ಕಳೆದುಕೊಂಡಿದೆ. ಇದರ ಜೊತೆಗೆ ಐಸಿಸಿಯ ಕೋಪಕ್ಕೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಕ್ಕೊಳಗಾಗುವುದು ಖಚಿತ. ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ನಾಯಕ ಮತ್ತು ಮಾಜಿ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಹೇಗೆ ಹಾಳಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಮೀಜ್ ರಾಜಾ, ‘ಪಾಕಿಸ್ತಾನ ಮಂಡಳಿಯು ಐಸಿಸಿಯಿಂದ 50% ಹಣವನ್ನು ಪಡೆಯುತ್ತದೆ. ಐಸಿಸಿ ಪಂದ್ಯಾವಳಿಗಳನ್ನು ನಡೆಸುತ್ತದೆ ಮತ್ತು ಅದರಿಂದ ಬರುವ ಲಾಭವನ್ನು ಸದಸ್ಯ ರಾಷ್ಟ್ರಗಳಿಗೆ ಹಂಚುತ್ತದೆ. ಆದರೆ ಬರುವ ಆದಾಯದಲ್ಲಿ ಶೇ. 90ರಷ್ಟು ಹಣ ಭಾರತೀಯ ಕ್ರಿಕೆಟ್ ಮಾರುಕಟ್ಟೆಯಿಂದ ಬರುತ್ತದೆ. ಒಂದು ರೀತಿಯಲ್ಲಿ, ಭಾರತೀಯ ಸಂಸ್ಥೆಗಳು ಪಾಕಿಸ್ತಾನ ಕ್ರಿಕೆಟ್ ಅನ್ನು ನಡೆಸುತ್ತಿವೆ. ನಾಳೆ ಭಾರತದ ಪಾಕಿಸ್ತಾನಕ್ಕೆ ನಾವು ಹಣಕಾಸು ನೀಡುವುದಿಲ್ಲ ಎಂದು ನಿರ್ಧರಿಸಿದರೆ, ನಮ್ಮ ಕ್ರಿಕೆಟ್ ಮಂಡಳಿ ದಿವಾಳಿಯಾಗುತ್ತದೆ. ಹೀಗಾಗಿ ನಾವು ಬೇರೆಯವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುತ್ತೇವೆ. ಬಿಸಿ ಅಧ್ಯಯನ ಮೇಲಿನ ಅವಲಂಬನೆಯನ್ನು ಪ್ರತಿ ವರ್ಷ ಶೇ. 10ರಷ್ಟು ಕಡಿಮೆ ಮಾಡಬೇಕು’