ನವದೆಹಲಿ, ಫೆಬ್ರುವರಿ 3: ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದವನ್ನು (ಭಾರತ US ವ್ಯಾಪಾರ ಒಪ್ಪಂದ) ವಾಣಿಜ್ಯ ಸಚಿವ ಪೀಯೂಶ್ ಗೋಯಲ್ (ಪಿಯೂಷ್ ಗೋಯಲ್) ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಇದು ಹೆಮ್ಮೆ ಪಡಬಹುದಾದ ಒಪ್ಪಂದವಾಗಿದೆ. ಯಾವುದೇ ನೆರೆಹೊರೆಯವರೊಂದಿಗೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದಗಳಲ್ಲೇ ಭಾರತದ ಅತ್ಯುತ್ತಮ ಡೀಲ್ ಎಂದು ಪೀಯೂಶ್ ಗೋಯಲ್ ಬಣ್ಣಿಸಿದ್ದಾರೆ. ಇಂದು ಮಂಗಳವಾರ ಇದೇ ವಿಚಾರವಾಗಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾಣಿಜ್ಯ ಸಚಿವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯದ ವೈಯಕ್ತಿಕ ಸ್ನೇಹದಿಂದ ಈ ಡೀಲ್ ಕುದುರೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಅಮೆರಿಕದೊಂದಿಗೆ ಬಹಳ ಪ್ರಬಲ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಕ್ಕೆ ಇವತ್ತು ದೇಶದ ಪ್ರಧಾನಿ ಕೂಡ ಮೋದಿಗೆ ಧನ್ಯವಾದ ಹೇಳುತ್ತಿದ್ದಾರೆ. ರಾಷ್ಟ್ರ ಮತ್ತು ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಲು, ಭಾರತದ ಭವಿಷ್ಯವನ್ನು ಸುಭದ್ರ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ’ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ಏಷ್ಯನ್ ದೇಶಗಳ ಮೇಲೆ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…
ಏನಿದು ಭಾರತ-ಅಮೆರಿಕ ಒಪ್ಪಂದ?
ಇತ್ತೀಚೆಗೆ 27 ರಾಷ್ಟ್ರಗಳ ಗುಂಪಿನ ಐರೋಪ್ಯ ಒಕ್ಕೂಟದೊಂದಿಗೆ ಭಾರತ ಟ್ರೆಡ್ ಡೀಲ್ ಮಾಡಿಕೊಂಡಿದೆ. ಅದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಬಣ್ಣಿಸಲಾಗುತ್ತಿದೆ. ಈಗ ಅಮೆರಿಕದೊಂದಿಗೆ ಭಾರತ ಮಾಡಿಕೊಳ್ಳಲಿರುವ ಒಪ್ಪಂದವು ಅದು ಬೃಹತ್ತಾಗಿರುವ ನಿರೀಕ್ಷೆಯಿದೆ. ಒಪ್ಪಂದ ಏರ್ಪಟ್ಟಿ ಟ್ರಂಪ್ ಮತ್ತು ಮೋದಿ ಘೋಷಿಸಿದ್ದರೂ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಮಾತುಕತೆ ಮುಗಿದ ಬಳಿಕ ಒಪ್ಪಂದಕ್ಕೆ ಸಹಿ ಆದ ನಂತರ ಅದು ಚಾಲನೆಗೆ ಬರುತ್ತದೆ.
ಈ ಒಪ್ಪಂದದಲ್ಲಿ ಮಾಡಲಾದ ತೀರ್ಮಾನದ ಪ್ರಕಾರ ಭಾರತದ ಸರಕುಗಳಿಗೆ ಅಮೆರಿಕ ವಿಧಿಸುವ ಟ್ಯಾರಿಫ್ ಶೇ. 50 ರಿಂದ ಶೇ. 18ಕ್ಕೆ ಇಳಿಕೆಯಾಗಿದೆ. ಅದೇ ವೇಳೆ, ಅಮೆರಿಕ ಸರಕುಗಳಿಗೆ ಭಾರತದ ಮಾರುಕಟ್ಟೆಗೆ ಮುಕ್ತ ಪ್ರವೇಶ ಸಿಗುತ್ತದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಮಾರುಕಟ್ಟೆ ಕೃಷಿ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?
ದಾರಿತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರು ಟೀಕೆ
ಈ ವ್ಯಾಪಾರ ಒಪ್ಪಂದ ಮಾಡಿಕೊಂಡು ಅಮೆರಿಕಕ್ಕೆ ಭಾರತವನ್ನು ಮಾರಲಾಗುತ್ತಿದೆ ಎಂಬರ್ಥದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಅವರ ಹೇಳಿಕೆಯನ್ನು ಪಿಯೂಶ್ ಗೋಯಲ್ ಬಲವಾಗಿ ಖಂಡಿಸಿದ್ದಾರೆ.
ಇಷ್ಟು ದಿನ ರಾಹುಲ್ ಗಾಂಧಿ ಅಮೆರಿಕದೊಂದಿಗೆ ಒಪ್ಪಂದ ಆಗಿಲ್ಲ ಎಂದು ಪ್ರಶ್ನಿಸಿದರು. ಈಗ ಒಪ್ಪಂದ ಆದಾಗ ಅದನ್ನು ಟೀಕಿಸುತ್ತಿದ್ದಾರೆ. ಇದು ರಾಹುಲ್ ಗಾಂಧಿ ಅವರ ಆಷಾಢಭೂತಿತನದ ಸತ್ಯ. ಅವರು ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಣಿಜ್ಯ ಸಚಿವರು ಸಿಡಿಗುಟ್ಟಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ