ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಈತ ಸಾಮಾನ್ಯ ಕೋಳಿ ಅಲ್ಲ, ಕೆಟ್ಟ ಚಾಳಿ ಇರುವ ಕೋಳಿ ಎಂದು ಮಾಡೆಲ್ ಹೇಳಿದ್ದಾರೆ. ಈ ಕಾಂಗ್ರೆಸ್ ನಾಯಕ ಮಾಡಿದ್ದ ಮೆಸೇಜ್‌ಗಳನ್ನು ಬಹಿರಂಗಪಡಿಸಿದ್ದಾರೆ.

ಯುವತಿಯರ ಮದುವೆಯಾಗುವುದಾಗಿ ಭರವಸೆ ನೀಡಿ ಬಳಸಿಕೊಂಡ ಆರೋಪಡಿ ಅರೆಸ್ಟ್ ಆಗಿರುವ ಕಾಂಗ್ರೆಸ್ ಮಾಜಿ ಶಾಸಕ, ಕೇರಳದ ಯುವ ನಾಯಕ ರಾಹುಲ್ ಮಾಂಕುಟತ್ತಿಲ್‌ಗೆ ಸಂಕಷ್ಟು ಹೆಚ್ಚಾಗಿದೆ. ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸೋಶಿಯಲ್ ಮೀಡಯಾ ಇನ್‌ಫ್ಲುಯೆನ್ಸರ್ ಜಸ್ಲಾ ಮಡಾಶೆರಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

2017ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಮಾಂಕುಟತ್ತಿಲ್ ಮೆಸೇಜ್ ಮೇಲೆ ಮೆಸೇಜ್ ಮಾಡಿ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದಾನೆ. ಬಣ್ಣ ಬಣ್ಣದ ಮಾತುಗಳನ್ನಾಡಿ ಬೆಲೆಗೆ ಬೀಳಿಸುವ ಪ್ರಯತ್ನ ಮಾಡಿದ್ದಾನೆ ಎಂದು ಜೆಸ್ಲಾಾ ಆರೋಪಿಸಿದ್ದಾಳೆ. ಈ ಕುರಿತು ನಾಯಕ ಮಾಡಿದ ಕೆಲ ಚಾಟ್‌ಗಳನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ಬಹಿರಂಗಪಡಿಸಿದ್ದಾರೆ.

ರಾಹುಲ್ ಮಾಂಕುಟತ್ತಿಲ್ ಸಾಮಾನ್ಯ ಕೋಳಿ ( ಹುಡುಗಿಯರ ಹಿಂದೆ ಬೆನ್ನುಬೀಳುವವನಿಗೆ ಕರೆಯುವ ಅಡ್ಡಪದ) ಅಲ್ಲ. ಈತ ಕೆಟ್ಟ ಚಾಳಿ ಇರುವ ಕೋಳಿ ಎಂದು ಜೆಸ್ಲಾ ಹೇಳಿಕೊಂಡಿದ್ದಾರೆ. 2017ರಲ್ಲಿ ರಾಹುಲ್ ತಮಗೆ ಪದೇ ಪದೇ ಕಳಿಸಿದ್ದ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಜಸ್ಲಾ ಹಂಚಿಕೊಂಡು ನಾಯಕನ ಮುಖವಾಡ ಕಳಚಿದ್ದಾರೆ.

ಒಬ್ಬ ವ್ಯಕ್ತಿಯ ನಡವಳಿಕೆ ನೋಡಿದ್ರೆ, ಆತ ಎಲ್ಲಿಯವರೆಗೆ ಹೋಗುತ್ತಾನೆ ಎಂದು ಗುರುತಿಸುವ ಶಕ್ತಿ ನನಗಿದೆ. ಇಂತಹ ‘ಕೋಳಿ’ಗಳನ್ನು ಕಿಲೋಮೀಟರ್ ದೂರದಿಂದಲೇ ಪತ್ತೆಹಚ್ಚಬಲ್ಲೆ ಎಂದು ಜಸ್ಲಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಮಹಿಳಾ ಪೀಡಕರನ್ನೇ ಕಾಂಗ್ರೆಸ್ ತನ್ನ ಯುವ ನಾಯಕರನ್ನಾಗಿ ಚುನಾವಣೆಯಲ್ಲಿ ನಿಲ್ಲಿಸಿದರೆ, ಅದು ಕೇರಳದ ಮಹಿಳೆಯರ ಸ್ವಾಭಿಮಾನದ ಮೇಲೆ ಮಾಡಿದ ದಾಳಿಯಾಗುತ್ತದೆ ಎಂದೂ ಜಸ್ಲಾ ಕಿಡಿಕಾರಿದ್ದಾರೆ.

ಪ್ರಕರಣವೊಂದರಲ್ಲಿ ಜಾಮೀನು ಪಡೆದು ಹೊರಬಂದ ನಂತರ, ಶಾಸಕ ರಾಹುಲ್ ಮಾಂಕುಟ್ಟತ್ತಿಲ್ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಕಾಂಗ್ರೆಸ್ ಮಹಿಳಾ ನಾಯಕಿ ಎಂ.ಎ. ಶಹನಾಸ್ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೋಯಿಕ್ಕೋಡ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಹನಾಸ್, ತನಗೂ ರಾಹುಲ್‌ಗೂ ಯಾವುದೇ ಸ್ನೇಹವಿಲ್ಲ, ಇಬ್ಬರೂ ಒಟ್ಟಿಗೆ ಒಂದು ಸೆಲ್ಫಿ ಕೂಡ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ಸಾಹಿತ್ಯೋತ್ಸವಕ್ಕೆ ತಾನೇ ಆತನನ್ನು ಆಹ್ವಾನಿಸಿದ್ದೆ ಎಂಬ ರಾಹುಲ್ ಹೇಳಿಕೆ ಶುದ್ಧ ಸುಳ್ಳು ಎಂದು ಅವರು ಹೇಳಿದ್ದಾರೆ.

"ರಾಹುಲ್ ಮಾಂಕುಟ್ಟತ್ತಿಲ್ ಒಬ್ಬ ‘ಕೋಳಿ’ ಎನ್ನುವುದನ್ನು ಯಾವುದೇ ಮಹಿಳೆ ಸುಲಭವಾಗಿ ಗುರುತಿಸಬಹುದು. ನನ್ನನ್ನು ಭೇಟಿಯಾಗಬೇಕೆಂದು ಹೇಳಿ, ಸಾಹಿತ್ಯೋತ್ಸವ ಆಯೋಜಿಸುವಂತೆ ಅವನೇ ನನ್ನನ್ನು ಪದೇ ಪದೇ ಕೇಳುತ್ತಿದ್ದ," ಎಂದು ಶಹನಾಸ್ ಹರಿಹಾಯ್ದಿದ್ದಾರೆ. "ರಾಹುಲ್ ಒಬ್ಬ ‘ಕೋಳಿ’ ಎಂಬುದು ನನಗೆ ಹಿಂದಿನಿಂದಲೂ ತಿಳಿದಿತ್ತು. ಆತ ಆರೋಪಿಸಿದ ವಿಷಯಗಳಲ್ಲಿ ನನ್ನ ಗೌರವಕ್ಕೆ ಚ್ಯುತಿ ತರುವಂತಹದ್ದು ಏನೂ ಇಲ್ಲ. ರಾಹುಲ್ ಮುಖ ನೋಡಿ ಮಾತನಾಡಲು ನನಗೆ ಧೈರ್ಯವಿದೆ, ಬಹಿರಂಗ ಚರ್ಚೆಗೆ ನಾನು ಸವಾಲು ಹಾಕುತ್ತೇನೆ. ನನ್ನ ಮುಂದೆ ಕೂರಲು ರಾಹುಲ್‌ಗೆ ಧೈರ್ಯವಿದೆಯೇ? ನಾನು ಆತನ ಮನೆಗೆ ಬಂದು ಮಾತನಾಡಲು ಸಿದ್ಧ," ಎಂದು ಎಂ.ಎ. ಶಹನಾಸ್ ಪತ್ರಿಕಾಗೋಷ್ಠಿಯಲ್ಲಿ ಸವಾಲೆಸೆದರು.

Source link
ಯುವತಿಯರ ಬಳಸಿಕೊಂಡ ಕೇಸ್, ಕಾಂಗ್ರೆಸ್ ನಾಯಕನ ಚಾಟ್ ಬಹಿರಂಗಪಡಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ