ವಿಜಯಪುರ ಜಿಲ್ಲೆಯ ಕೊಂಡಗುಳಿ ಗ್ರಾಮದಲ್ಲಿ ಎರಡು ದಿನಗಳಿಂದ ಮನೆಯೊಂದರ ಬಳಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ್ದ ಬೃಹತ್ ನಾಗರಹಾವನ್ನು ಉರಗ ರಕ್ಷಕ ಸ್ನೇಕ್ ಜಾವೇದ್ ಅವರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಿದ ಹಾವನ್ನು ನಂತರ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.
ವಿಜಯಪುರ ಜಿಲ್ಲೆಯ ಕೊಂಡಗುಳಿ ಗ್ರಾಮದಲ್ಲಿ ಜನರ ಭಯ ಮೂಡಿಸಿದ್ದ ದೊಡ್ಡ ಹೆಡೆ ನಾಗರ ಹಾವನ್ನ ಉರಗ ರಕ್ಷಕ ಸ್ನೇಕ್ ಜಾವೇದ್ ರಕ್ಷಣೆ ಮಾಡಿದ್ದಾರೆ. ಎರಡು ದಿನಗಳಿಂದ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದ ಸಂತೋಷ್ ಮಲ್ಲಾಡ್ ಎಂಬುವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು.

ಬೃಹತ್ ನಾಗರಹಾವು ನೋಡಿದ್ದ ಜನರು ಆತಂಕಗೊಂಡಿದ್ದರು. ಸಂತೋಷ್ ಮಲ್ಲಾಡ್ ಅವರ ಅಕ್ಕಪಕ್ಕದ ಮನೆಗಳ ಬಳಿಯೂ ನಾಗರ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು.

ಎರಡು ದಿನಗಳಿಂದ ನಾಗರಹಾವು ಕಾಣಿಸಿಕೊಳ್ಳುತ್ತಿದ್ದರಿಂದ ಗ್ರಾಮಸ್ಥರು ಸ್ಥಳೀಯ ಉರಗ ರಕ್ಷಕರಾದ ಜಾವೇದ್ ಅವರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಾವೇದ್, ಉರಗಕ್ಕೆ ಯಾವುದೇ ಹಾನಿಯಾಗದಂತೆ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಆಂಬುಲೆನ್ಸ್ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್ ಅಂದರ್

ಉರಗ ರಕ್ಷಣೆ ಸಮಯದಲ್ಲಿ ಇಡೀ ಗ್ರಾಮದ ಜನರೆಲ್ಲಾ ಸಂತೋಷ್ ಮಲ್ಲಾಡ್ ಮನೆ ಬಳಿ ಸೇರಿದ್ದರು. ರಕ್ಷಣೆ ಮಾಡಿರುವ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಹಾವು ರಕ್ಷಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಹಾವಿಗೆ ಭಾವನೆಗಳಿದ್ಯಾ? ಬಾವಿಗೆಸೆದ ಮಗುವ ಹೊಟ್ಟೆಗೆ ಸುತ್ಕೊಂಡು ಕಾಪಾಡಿತ್ತು ನಾಗರಹಾವು!

Source link
Snake Video: ಕೊಂಡಗುಳಿಯಲ್ಲಿ ಭೀತಿ ಮೂಡಿಸಿದ್ದ ದೊಡ್ಡ ಹೆಡೆಯ ನಾಗರಹಾವು ರಕ್ಷಣೆ