ಪಾಕಿಸ್ತಾನಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ?

ಪಾಕಿಸ್ತಾನಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ?


ಪಾಕಿಸ್ತಾನ್ ತಂಡಕ್ಕೆ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಇಂತಹದೊಂದು ಪ್ರಶ್ನೆ ಹುಟ್ಟಲು ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಇತ್ತೀಚಿನ ನಿರ್ಧಾರ. ಮುಂಬರುವ ಟಿ20 ರಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ಪಿಸಿಬಿ. ಇದರ ಬೆನ್ನಲ್ಲೇ ಹೀಗೆ ಒಂದು ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ… ಇದೆ.

ಏಕೆಂದರೆ ಐಸಿಸಿ ಔಟ್ ನಲ್ಲಿ 4 ಪಂದ್ಯಗಳು ಹೀಗೆ ಕಾರಣಾಂತರಗಳಿಂದ ರದ್ದಾಗಿವೆ. ಹೀಗೆ ರದ್ದಾಗಲು ಮುಖ್ಯ ಕಾರಣ ಪಂದ್ಯವನ್ನು ಬಹಿಷ್ಕರಿಸುವುದು. ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಈ ಹಿಂದೆ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಪಂದ್ಯವಾಡಲು ನಿರಾಕರಿಸಲಾಗಿದೆ.

ಇದೇ ರೀತಿ ಇದೀಗ ಪಾಕಿಸ್ತಾನ್ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದೆ. ಅತ್ತ ಈ ಹಿಂದೆ ನಾಲ್ಕು ತಂಡಗಳು ಐಸಿಸಿ ಪಂದ್ಯಗಳ ಪಂದ್ಯಗಳನ್ನು ಬಹಿಷ್ಕರಿಸಿರುವ ಇತಿಹಾಸ ಹೊಂದಿರುವುದೇ ಪಾಕಿಸ್ತಾನ್ ಪಾಲಿಗೆ ಪ್ಲಸ್ ಪಾಯಿಂಟ್ ಎನ್ನಬಹುದು.

ಏಕೆಂದರೆ ಈ ಹಿಂದೆ ಪಂದ್ಯ ಬಹಿಷ್ಕರಿಸಿದ ರಾಷ್ಟ್ರಗಳ ವಿರುದ್ಧ ಐಸಿಸಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಇದೇ ಭಂಡ ಧೈರ್ಯದಲ್ಲೇ ಪಾಕಿಸ್ತಾನ್ ಕೂಡ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು. ಆದರೆ ಈ ಬಾರಿ ಐಸಿಸಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಪ್ರಶಸ್ತಿಗೆ ಆರ್ಥಿಕ ಹೊಡೆತ ಬೀಳಲಿದೆ.

ಹೀಗಾಗಿ ಫೆಬ್ರವರಿ 15 ರಂದು ಭಾರತದ ವಿರುದ್ಧ ಪಾಕಿಸ್ತಾನ್ ತಂಡ ಕಣಕ್ಕಿಳಿಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳಲಾಗಿದೆ. ಹೀಗಾಗಿ ಅಂತಿಮವಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನೋಡಬೇಕಾಗಿದೆ.

ಯಾವುದೇ ಬಾಯ್ಕಾಟ್ ಪಂದ್ಯಗಳ ಪಟ್ಟಿ:

ವರ್ಷ ಪಂದ್ಯಾವಳಿ ಪಂದ್ಯ ಕಾರಣ ಫಲಿತಾಂಶ
1996 ಏಕದಿನ ಆಗಿದೆ ಆಸ್ಟ್ರೇಲಿಯಾ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೋ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
1996 ಏಕದಿನ ಆಗಿದೆ ವೆಸ್ಟ್ ಇಂಡೀಸ್ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೋ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
2003 ಏಕದಿನ ಆಗಿದೆ ಇಂಗ್ಲೆಂಡ್ vs ಝಿಂಬಾಬ್ವೆ ರಾಜಕೀಯ ಕಾರಣ (ಮುಗಾಬೆ ಆಡಳಿತದ ವಿರುದ್ಧ) ಝಿಂಬಾಬ್ವೆಗೆ ವಾಕ್ಓವರ್
2003 ಏಕದಿನ ಆಗಿದೆ ನ್ಯೂಝಿಲೆಂಡ್ vs ಕೀನ್ಯಾ ಭದ್ರತೆಯ ಕಾರಣ (ಭಯೋತ್ಪಾದನೆಯ ಭೀತಿ) ಕೀನ್ಯಾಗೆ ವಾಕ್‌ಓವರ್
2026 ಟಿ20 ಪಾಕಿಸ್ತಾನ vs ಭಾರತ ರಾಜಕೀಯ ಮತ್ತು ಬಾಂಗ್ಲಾದೇಶ ಬೆಂಬಲಕ್ಕಾಗಿ ಬಹಿಷ್ಕಾರದ ಘೋಷಣೆ

ಪ್ರಮುಖ ಮಾಹಿತಿ:

  • 1996: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭದ್ರತೆಯ ಕಾರಣ ಕೊಲಂಬೊದಲ್ಲಿ ಪ್ರದರ್ಶನವನ್ನು ನಿರಾಕರಿಸಿದವು. ಅಂಕಗಳನ್ನು ಕಳೆದುಕೊಂಡರೂ ಈ ಎರಡೂ ತಂಡಗಳು ನಾಕೌಟ್ ಹಂತಕ್ಕೆ ತಲುಪಿದ್ದವು.
  • 2003: ಇಂಗ್ಲೆಂಡ್ ತಂಡವು ಝಿಂಬಾಬ್ವೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪಂದ್ಯವನ್ನು ಬಹಿಷ್ಕರಿಸಿತು. ಇಂಗ್ಲೆಂಡ್ನಿಂದ ಬೇಗನೆ ಹೊರಬರಲು ಸಾಧ್ಯವಾಗಲಿಲ್ಲ.
  • 2026 (ಪ್ರಸ್ತುತ): ಫೆಬ್ರವರಿ 1, 2026 ರಂದು ಪಾಕಿಸ್ತಾನ ಸರ್ಕಾರವು ಫೆಬ್ರವರಿ 15 ರಂದು ನಡೆಯುತ್ತಿದೆ ಭಾರತದ ವಿರುದ್ಧದ ಪಂದ್ಯವನ್ನು ಭೀಷ್ಕರಿಸುವುದಾಗಿ ಘೋಷಿಸಿದೆ.
  • ಐಸಿಸಿ ನಿಯಮಗಳ ಪ್ರಕಾರ, ಯಾವುದೇ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಎದುರಾಳಿ ತಂಡಕ್ಕೆ ಜಯ (ವಾಕ್‌ಓವರ್) ಉದ್ದೇಶಿಸಲಾಗಿದೆ. ಜೊತೆಗೆ ಬಹಿಷ್ಕರಿಸಿದ ತಂಡಕ್ಕೆ ಭಾರಿ ಆರ್ಥಿಕ ದಂಡ ವಿಧಿಸಿಲ್ಲ.



Source link

Leave a Reply

Your email address will not be published. Required fields are marked *