ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್

ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್


ಬೆಂಗಳೂರು, ಫೆ.4: ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತದ ಬಗ್ಗೆ ದಿನದಿಂದ ದಿನಕ್ಕೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರಿನ ಟೆಕ್ ಉದ್ಯಮದಲ್ಲಿ 2025ರ ಕೊನೆಯ ಅವಧಿಯಲ್ಲಿ ಉಂಟಾದ ಉದ್ಯೋಗ ಕಡಿತ (Layoffs) ಮತ್ತು ಯುವ ವೃತ್ತಿಪರರ ಮಾನಸಿಕ ಸಂಘರ್ಷದ ಬಗ್ಗೆ ಬೆಂಗಳೂರಿನ ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 25 ಎಲ್ಲೆಡೆ ಸಂಭ್ರಮ, ರಜೆಯ ಮೋಜು. ಆದರೆ ಬೆಂಗಳೂರಿನ ಸಾವಿರಾರು ಯುವ ಟೆಕ್ಕಿಗಳಿಗೆ 2025ರ ಕ್ರಿಸ್‌ಮಸ್ ತಂದದ್ದು ಕೇವಲ ಆತಂಕ ಮತ್ತು ಅನಿಶ್ಚಿತತೆ. ಕೆಲಸ ಕಳೆದುಕೊಂಡ ನೋವು ಮತ್ತು ಭವಿಷ್ಯದ ಭಯ ಅವರ ಹಬ್ಬದ ಖುಷಿಯನ್ನು ನುಂಗಿ ಹಾಕಿತ್ತು.

26 ವರ್ಷದ ಯುವ ಡೇಟಾ ಇಂಜಿನಿಯರ್ ಒಬ್ಬರು ರೆಡ್ಡಿಟ್‌ನಲ್ಲಿ (ರೆಡ್ಡಿಟ್) ಹಂಚಿಕೊಂಡ ಕಥೆ ಇಡೀ ಉದ್ಯಮದ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರನ್ನು ಡಿಸೆಂಬರ್ 15 ರಂದು ಹಠಾತ್ತನೆ ಕೆಲಸದಿಂದ ತೆಗೆದುಹಾಕಲಾಯಿತು. ಲೇಆಫ್ ಆದ ಮೇಲೆ ದಿನಕ್ಕೆ 5-6 ಗಂಟೆ ಹೊಸ ಸ್ಕಿಲ್ ಕಲಿಯುವುದು, 3-4 ಗಂಟೆ ಕೆಲಸ ಹುಡುಕುವುದು ನನ್ನ ದಿನಚರಿಯಾಯಿತು. ಕೊನೆಗೂ ಅಮೆಜಾನ್‌ನಂತಹ ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ, ಇದರಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. 10 ದಿನಗಳು ಕಳೆದರೂ ಒಂದೇ ಒಂದು ಪಾಸಿಟಿವ್ ರೆಸ್ಪಾನ್ಸ್ ಇಲ್ಲ. ಏಕೆಂದರೆ ಮತ್ತೆ ಕೆಲಸ ಕಳೆದುಕೊಂಡರೆ ಎಂಬ ಭಯ.

ಇದನ್ನೂ ಓದಿ: “ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ

ಇಲ್ಲಿದೆ ನೋಡಿ ಪೋಸ್ಟ್:

ತಾಂತ್ರಿಕ ವಜಾಗಳು

ತಾಂತ್ರಿಕ ವಜಾಗಳು

ಡಿಸೆಂಬರ್ 10 ರಿಂದ 257 ಟೆಕ್ ಕಂಪನಿಗಳಿಂದ ಸುಮಾರು 1,22,549 ಉದ್ಯೋಗಿಗಳನ್ನು ಬಿಡುಗಡೆ ಮಾಡಲಾಗಿದೆ.ಜನವರಿ ತಿಂಗಳಿನಲ್ಲಿ 27 ಕಂಪನಿಗಳಿಂದ 24,818 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಜನ ಹಲವು ರೀತಿಯಲ್ಲಿ ಸಲಹೆ. ಒಬ್ಬ ನೆಟ್ಟಿಗರು 776 ಕಂಪನಿಗಳಿಗೆ ಅರ್ಜಿ ಹಾಕಿ, 100 ದಿನಗಳ ಸತತ ಪ್ರಯತ್ನದ ನಂತರ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ನೀವು ಜಿಮ್, ಕ್ರೀಡೆ ಅಥವಾ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು. ನವೆಂಬರ್ ಮತ್ತು ತಿಂಗಳ ಡಿಸೆಂಬರ್‌ಗಳಲ್ಲಿ ಹಬ್ಬಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಿಧಾನವಾಗಿದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಅವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *