Headlines

Naa Ninna Bidalaare: ಶರತ್​ ಮೇಲೆ ಲವ್​ ಆಗ್ತಿದ್ದಂತೆಯೇ ಲುಕ್ಕೇ ಬದಲಾಯಿಸಿ ಹಾಟ್​ ಅವತಾರದಲ್ಲಿ ದುರ್ಗಾ!

Naa Ninna Bidalaare: ಶರತ್​ ಮೇಲೆ ಲವ್​ ಆಗ್ತಿದ್ದಂತೆಯೇ ಲುಕ್ಕೇ ಬದಲಾಯಿಸಿ ಹಾಟ್​ ಅವತಾರದಲ್ಲಿ ದುರ್ಗಾ!

Naa Ninna Bidalaare: ಶರತ್​ ಮೇಲೆ ಲವ್​ ಆಗ್ತಿದ್ದಂತೆಯೇ ಲುಕ್ಕೇ ಬದಲಾಯಿಸಿ ಹಾಟ್​ ಅವತಾರದಲ್ಲಿ ದುರ್ಗಾ!

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್‌ಗೆ ದುರ್ಗಾ ಮೇಲೆ ಅರಿವಿಲ್ಲದೆ ಪ್ರೀತಿ ಮೂಡುತ್ತಿದ್ದು, ಇದರಿಂದ ದುರ್ಗಾ ಸಂತಸಗೊಂಡಿದ್ದಾಳೆ. ಈ ನಡುವೆ ದುರ್ಗಾ ಪಾತ್ರಧಾರಿ ರಿಷಿಕಾ, ಸೀರೆ ಬಿಟ್ಟು ಮಾಡರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ನಾ ನಿನ್ನ ಬಿಡಲಾರೆ (Na Ninna Bidalaare) ಸೀರಿಯಲ್​ನಲ್ಲಿ ಸದ್ಯ ಶರತ್​ಗೆ ದುರ್ಗಾ ಮೇಲೆ ಅರಿವಿಲ್ಲದೇ ಪ್ರೀತಿ ಮೂಡಲು ಶುರುವಾಗಿದೆ. ಅಂಬಿಕಾ ಸಾವಿನ ರಹಸ್ಯವನ್ನು ಹೇಗಾದರೂ ಮಾಡಿ ಕಂಡುಹಿಡಿಯಲು ದುರ್ಗಾ ಮುಂದಾಗಿರುವುದೇ ಈಗ ಆಕೆಗೆ ಮುಳ್ಳಾಗಿದೆ.

ಅಂಬಿಕಾಗೆ ತನ್ನ ಅತ್ತೆ ಮಾಳವಿಕಾ ಮೋಸಗಾತಿ ಎನ್ನುವುದು ತಿಳಿಯುತ್ತಲೇ, ತನ್ನ ಮಾಯಾಜಾಲದಲ್ಲಿ ಮಾಳವಿಕಾ ದುರ್ಗಾ, ಹಿತಾ ಮತ್ತು ಅಂಬಿಕಾ ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾಳೆ. ಈಗ ಮುಂದೇನು ಎನ್ನುವ ಚಿಂತೆಯಲ್ಲಿ ಸೀರಿಯಲ್​ ಪ್ರಿಯರು ಇದ್ದಾರೆ.

ಇನ್ನೇನು ಶರತ್​ ತನ್ನ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುತ್ತಿರುವುದಕ್ಕೆ ದುರ್ಗಾ ಅಂತೂ ಫುಲ್​ಖುಷಿಯಾಗಿದ್ದಾಳೆ. ಈ ಬೆನ್ನಲ್ಲೇ ಸೀರೆ ಬಿಟ್ಟು ಮಾಡರ್ನ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾಳೆ ದುರ್ಗಾ. ಅದಕ್ಕೆ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ.

ಅಂದಹಾಗೆ ದುರ್ಗಾ ಪಾತ್ರಧಾರಿ ಹೆಸರು ರಿಷಿಕಾ. ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸೀರೆಯಲ್ಲಿಯೇ ನಟಿ ಮಿಂಚುತ್ತಿದ್ದರೆ, ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಇದ್ದು, ಮಾಡರ್ನ್​ ಡ್ರೆಸ್​ನಲ್ಲಿ ಮಿಂಚುತ್ತಾರೆ. ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.

ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.

ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾದಾನ’ ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

Source link

Leave a Reply

Your email address will not be published. Required fields are marked *