ಟಾಲಿವುಡ್ ಸೇರಿದಂತೆ, ಈ ಎರಡು ಭಾಗದಲ್ಲಿ ಸಿನಿಮಾ ತರುವ ಕ್ರೇಜ್ ಅದೆಷ್ಟಿದೆ ಅಂದರೆ ಈಗಲೂ ಅನೇಕರು ಪ್ಯಾನ್ ಇಂಡಿಯಾ (Pan India) ಅಂತ ಎರಡು ಭಾಗದಲ್ಲಿಯೇ ಮಾಡ್ತಿದ್ದಾರೆ. ಅಷ್ಟೇ ಏಕೆ, ಯಶ್ ನಟನೆಯ ಕನ್ನಡದ ಕೆಜಿಎಫ್, ರಿಷನ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ’ ಕೂಡ ಎರಡು ಪಾರ್ಟ್‌ಗಳಲ್ಲಿ ಬಂದಿತ್ತು.

ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಹಾಗು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಅಭಿನಯದ ವಾರಣಾಸಿ ಎಷ್ಟು ಭಾಗದಲ್ಲಿ ಬರುತ್ತದೆ? ಒಂದ ಭಾಗದಲ್ಲೋ ಅಥವಾ ಎರಡು ಭಾಗದಲ್ಲೋ ಅನ್ನುವ ಪ್ರಶ್ನೆ ಇತ್ತು. ಈ ಹಿಂದಿನ ರಾಜಮೌಳಿ ನಿರ್ದೇಶನದ ಚಿತ್ರ ‘ಬಾಹುಬಲಿ’ ಎರಡು ಭಾಗದಲ್ಲಿಯೇ ಬಂದಿತ್ತು. ಈ ಚಿತ್ರ ಬಂದ್ಮಲೆ ದಕ್ಷಿಣದಲ್ಲಿ ಎರಡು ಭಾಗದ ಟ್ರೆಂಡ್ ಹುಟ್ಟಿಕೊಂಡಿತ್ತು.

ಟಾಲಿವುಡ್ ಸೇರಿದಂತೆ, ಈ ಎರಡು ಭಾಗದಲ್ಲಿ ಸಿನಿಮಾ ತರುವ ಕ್ರೇಜ್ ಅದೆಷ್ಟಿದೆ ಅಂದರೆ ಈಗಲೂ ಅನೇಕರು ಪ್ಯಾನ್ ಇಂಡಿಯಾ (Pan India) ಅಂತ ಎರಡು ಭಾಗದಲ್ಲಿಯೇ ಸಿನಿಮಾ ಮಾಡ್ತಿದ್ದಾರೆ. ಅಷ್ಟೇ ಏಕೆ, ಯಶ್ ನಟನೆಯ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್, ರಿಷನ್ ಶೆಟ್ಟಿ ನಟನೆ-ನಿರ್ದೇಶನದ ‘ಕಾಂತಾರ’ ಕೂಡ ಎರಡು ಪಾರ್ಟ್‌ಗಳಲ್ಲಿ ಬಂದಿತ್ತು. ಆದರೆ, ಈ ಒಂದು ಐಡಿಯಾವನ್ನ ದೊಡ್ಡಮಟ್ಟಕ್ಕೆ ಪರಿಚಯಿಸಿದ್ದ ರಾಜಮೌಳಿ ಅವರೇ ಈಗ ಈ ಟ್ರೆಂಟ್ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಹೌದು, ಸಿಕ್ಕ ಮಾಹಿತಿ ಪ್ರಕಾರ, ಎಸ್‌ಎಸ್ ರಾಜಮೌಳಿ ಅವರ ನಿರ್ದೇಶನದ ಮುಂಬರುವ ‘ವಾರಣಾಸಿ’ ಚಿತ್ರವು 7 ಏಪ್ರಿಲ್, 2027ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಬಗ್ಗೆ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಇದೆ. ರಾಜಮೌಳಿ ಅವರ ಸಿನಿಮಾ ಅಂತಲೇ ಈ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ, ಮಹೇಶ್ ಬಾಬು ಸಿನಿಮಾ ಬೇರೆ. ಪ್ರಿಯಾಕಾ ಚೋಪ್ರಾ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎಲ್ಲ ಅಂಶಗಳಿ ಸೇರಿ, ವಾರಣಾಸಿ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿದೆ.

ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ನಟನೆ, ರಾಜಮೌಳಿ ನಿರ್ದೇಶನದ ವಾರಣಾಸಿ ಸಿನಿಮಾ ಬರೋಬ್ಬರಿ 1000 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ. ಆದರೆ ಈ ಚಿತ್ರವು ಎಷ್ಟು ಭಾಗದಲ್ಲಿ ಬರಲಿದೆ ಎಂಬುದಕ್ಕೆ ಇಲ್ಲಿಯವರೆಗೂ ಉತ್ತರ ಇರಲಿಲ್ಲ. ಆದರೆ ಈಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ರಾಜಮೌಳಿ ಅವರು ಎರಡು ಭಾಗದಲ್ಲಿಯೇ ಅತಿ ದೊಡ್ಡ ಚಿತ್ರದ ಕಥೆ ಹೇಳಿದ್ದರು. ಎರಡು ಭಾಗದಲ್ಲಿ ಸಿನಿಮಾ ಮಾಡೋದು ಅಷ್ಟು ಸುಲಭವೇನೂ ಅಲ್ಲ. ಆದರೆ, ಬಾಹುಬಲಿ ಚಿತ್ರದಲ್ಲಿ ಆ ಪ್ರಯೋಗ ಮಾಡಿದ್ದರು. ಅದರಲ್ಲಿ ಗೆದ್ದು ಮನೆಮಾತಾಗಿದ್ದರು. ಆದರೆ, ಮುಂಬರುವ ವಾರಣಾಸಿ ಚಿತ್ರದಲ್ಲಿ ಅವರು ಈ ಐಡಿಯಾ ಕೈ ಬಿಟ್ಟಿದ್ದಾರೆ. ಏನೇ ಅದರೂ ಸರಿ, ಒಂದೇ ಭಾಗದಲ್ಲಿಯೇ ಇಡೀ ಕಥೆ ಹೇಳಿ ಮುಗಿಸುವ ಪ್ಲಾನ್ ಮಾಡಿದ್ದಾರೆ. ಹಾಗಾಗಿಯೆ ವಾರಣಾಸಿ ಚಿತ್ರ ಎರಡಲ್ಲ, ಒಂದೇ ಭಾಗದಲ್ಲಿ ರಿಲೀಸ್ ಆಗುತ್ತದೆ. ಆದರೆ, ಈ ಚಿತ್ರದ ರನ್ ಟೈಂ 3 ಗಂಟೆ ಇರಲಿದೆ ಎನ್ನಲಾಗಿದೆ.

ಹಾಗಿದ್ದರೆ ಯಾಕೆ ಒಂದೇ ಭಾಗ?

ರಾಜಮೌಳಿಯವರ ಪ್ರಕಾರ, ಈಗಾಗಲೇ ಪ್ರೇಕ್ಷಕರಿಗೆ ಎರಡು ಭಾಗದಲ್ಲಿ ಸಿನಿಮಾ ನೋಡುವ ಆಸಕ್ತಿ ಕಡಿಮೆ ಆಗಿದೆ. ಇತ್ತೀಚೆಗೆ ಎಲ್ಲರೂ ಎರಡು ಭಾಗದಲ್ಲಿ ಸಿನಿಮಾ ಮಾಡಿದ್ದಾರೆ. ಹಾಗಾಗಿಯೇ ಜನರಿಗೂ ಈ ಪಾರ್ಟ್-2 ಐಡಿಯಾ ಬೇಸರ ತಂದಿದೆ. ಸ್ವತಃ ರಾಜಮೌಳಿ ಅವರಿಗೂ ಈ ಪಾರ್ಟ್-2 ಐಡಿಯಾ ಬೇಸರ ತರಿಸಿದೆಯಂತೆ. ಅದಕ್ಕೇನೆ ವಾರಣಾಸಿ ಚಿತ್ರವನ್ನ ಒಂದೇ ಭಾಗದಲ್ಲಿ ಹೇಳಲಿದ್ದಾರಂತೆ ರಾಜಮೌಳಿ.

ಅಂದಹಾಗೆ, ಈ ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ಜೋಡಿಯಾಗಿ, ಚಿತ್ರದ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ, ಖಡಕ್ ವಿಲನ್ ಅಗಿ ಪೃಥ್ವಿರಾಜ್ ಸುಕುಮಾರ್ ಇದ್ದಾರೆ.

Source link
'ರಾಜಮೌಳಿ ವಾರಣಾಸಿ' ಸಿನಿಮಾದ ಬಿಗ್ ಸೀಕ್ರೆಟ್ ಕೊನೆಗೂ ರಿವೀಲ್.. ಎಷ್ಟು ದಿನ ಅಂತ ಮುಚ್ಚಿಡೋದಕ್ಕೆ ಆಗುತ್ತೆ?