Kalaburagi jail police raid ಕಲಬುರಗಿ ಜೈಲಿನ ಶೌಚಾಲಯದಲ್ಲಿ ಮೊಬೈಲ್, ಇಯರ್ ಬಡ್ಸ್ ಪತ್ತೆ! | Kalaburagi Jail Smartphone Found Hidden In Toilet During Surprise Inspection

ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ, ಕೈದಿಗಳು ಬಳಸುತ್ತಿದ್ದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ಮೂರು ಸ್ಮಾರ್ಟ್‌ಫೋನ್‌ಗಳು ಇಯರ್ ಬಡ್ಸ್‌ ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.

ಕಲಬುರಗಿ (ಫೆ.4): ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಪೊಲೀಸರು ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ ಭಾರೀ ಅಕ್ರಮ ಬಯಲಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ನಡೆಯುತ್ತಿದೆ ಎಂಬ ಸಂಶಯದ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಕೈದಿಗಳ ಹೈಟೆಕ್ ವ್ಯವಹಾರ ಕಂಡುಬಂದಿದೆ.

ಶೌಚಾಲಯದಲ್ಲೇ ಸ್ಮಾರ್ಟ್‌ಫೋನ್ ಇಯರ್ ಬಡ್ಸ್!

ಜೈಲಿನ ವಿಚಾರಣಾಧೀನ ಕೈದಿಗಳಾದ ಗಣೇಶ, ಪ್ರದೀಪ್ ಮತ್ತು ದಿನೇಶ್ ಎಂಬುವವರು ಕಾನೂನು ಬಾಹಿರವಾಗಿ ಮೊಬೈಲ್ ಬಳಸುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಇವರು ತಮ್ಮ ಸ್ಮಾರ್ಟ್‌ಫೋನ್ ಮತ್ತು ಇಯರ್ ಬಡ್ಸ್ ಮಾದರಿಯ ಗ್ಯಾಜೆಟ್‌ಗಳನ್ನು ಜೈಲಿನ ಶೌಚಾಲಯದ ಒಳಗೆ ಮುಚ್ಚಿಟ್ಟಿದ್ದರು. ಪೊಲೀಸರು ಹഴുಹಿನಿಂದ ಶೋಧ ನಡೆಸಿದಾಗ ಈ ವಸ್ತುಗಳು ಸಿಕ್ಕಿಬಿದ್ದಿವೆ.

ಮೂರು ಫೋನ್, ಇಯರ್ ಬಡ್ಸ್ ಜಪ್ತಿ

ತಪಾಸಣೆ ವೇಳೆ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳು ಹಾಗೂ ಎರಡು ಇಯರ್ ಬಡ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಇವು ಒಳಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಈಗ ಈ ಜಾಲದ ಹಿಂದೆ ಯಾರಿದ್ದಾರೆ ಎಂಬ ತನಿಖೆ ಆರಂಭಿಸಿದ್ದಾರೆ.

Source link

Leave a Reply

Your email address will not be published. Required fields are marked *