ನವದೆಹಲಿ, ಫೆಬ್ರವರಿ 04: ಸಾಮಾನ್ಯವಾಗಿ ರಾತ್ರಿ ಸ್ಮಶಾನದ ಅಕ್ಕಪಕ್ಕದ ಜಾಗದಲ್ಲಿ ಹಾದುಹೋಗುವಾಗಲೇ ಜೀವ ಬಾಯಿಗೆ ಬಂದಂಥ ಅನುಭವವಾಗುತ್ತದೆ. ಇನ್ನು ಸ್ಮಶಾನದಿಂದಲೇ ಕಾಲ್ ಬಂದರೆ ಭಯವಾಗದೇ ಇದ್ದೀತೆ. ಆಹಾರ ವಿತರಣಾ ಏಜೆಂಟ್‌ಗೆ ತಡರಾತ್ರಿ ಸ್ಮಶಾನದಿಂದ ಕರೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಣ್ಣ ವಿಡಿಯೋದಲ್ಲಿ ಡೆಲಿವರಿ ಏಜೆಂಟ್ ಗ್ರಾಹಕನಿಗೆ ಕರೆ ಮಾಡಿ ಆ ಜಾಗವನ್ನು ತಲುಪಿದ್ದರು. ಮಹಿಳೆ ಶಾಂತವಾಗಿ ಅವರಿಗೆ ಫೋನ್ ಮುಂದೆ ನಡೆಯಲು ಹೇಳುತ್ತಾಳೆ. ನಾಯಿಯನ್ನು ತೋರಿಸುತ್ತಾಳೆ ಮತ್ತು ಚಿಂತಿಸಬೇಡಿ ಎಂದೂ ಹೇಳುತ್ತಾಳೆ. ಆದರೆ ಏಜೆಂಟ್ ಮುಂದೆ ಹೆಜ್ಜೆ ಹಾಕಿದ ತಕ್ಷಣ ಮತ್ತು ಮಾರ್ಗವು ಸ್ಮಶಾನದತ್ತ ಸಾಗುತ್ತದೆ.
ಮತ್ತಷ್ಟು ಓದಿ: Video: ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಿದೆ
ಕೂಡಲೇ ಡೆಲಿವರಿ ಏಜೆಂಟ್ ಅಲ್ಲೇ ನಿಲ್ಲುತ್ತಾರೆ. ಪರಿಸ್ಥಿತಿಯನ್ನು ಅರಿತ ಅವನು ಒಳಗೆ ಹೋಗಲು ನಿರಾಕರಿಸುತ್ತಾನೆ, ಅಲ್ಲಿ ಸಂಪೂರ್ಣವಾಗಿ ಕತ್ತಲೆಯಿರುತ್ತದೆ. ನಾನು ಒಳಗೆ ಹೋಗುವುದಿಲ್ಲ, ಎಂದು ಅವರು ಹೇಳುತ್ತಾರೆ. ಮಹಿಳೆ ಗೇಟ್ ಮೂಲಕ ಹೋಗಿ ಪಾರ್ಸೆಲ್ ಕೊಡುವಂತೆ ಒತ್ತಾಯಿಸುತ್ತಾಳೆ.
🚨 ವಿಚಿತ್ರವಾದ ಸಂಗತಿಗಳು ನಡೆಯುತ್ತಿವೆ 🚨
-ವೈರಲ್ ವೀಡಿಯೋ ಸ್ಮಶಾನದ ಡೆಲಿವರಿ ಏಜೆಂಟ್ ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಮಹಿಳೆಯನ್ನು ತೋರಿಸುತ್ತದೆ – ಗಂಭೀರವಾಗಿ ತಮಾಷೆಯಾಗಿಲ್ಲದ ಮಹಿಳೆ ಏಕೆ ಹಾಗೆ ಮಾಡುತ್ತಾಳೆ ?? pic.twitter.com/FZePgFgv44
— ಗಗನ್ ಚೌಧರಿ (@choudhary_99415) ಫೆಬ್ರವರಿ 1, 2026
ಮಹಿಳೆ ತಾನು ಮತ್ತು ತನ್ನ ಸ್ನೇಹಿತರು ಸ್ಮಶಾನದ ಒಳಗೆ ಪಾರ್ಟಿ ಮಾಡುವುದಾಗಿದೆ, ಅಲ್ಲೇ ತಿನ್ನುವಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ಡೆಲಿವರಿ ಏಜೆಂಟ್ ನನಗೆ ಭಯ ಇರುವುದು ಮೂಢನಂಬಿಕೆ, ದೆವ್ವಗಳಿಗೆ ಅಲ್ಲ, ರಾತ್ರ ಹೊತ್ತು ಯಾರಾದರೂ ಏನಾದರೂ ಮಾಡಿದರೆ ಎಂಬ ಭಯವಿದೆ ಎಂದು ಹೇಳುತ್ತಾರೆ.
ಅನೇಕ ನೆಟ್ಟಿಗರು ಡೆಲಿವರಿ ಏಜೆಂಟ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವಿತರಣಾ ಏಜೆಂಟ್‌ಗಳು ಮನುಷ್ಯರು, ರೋಬೋಟ್‌ಗಳಲ್ಲ ಎಂದು ಮರೆತುಬಿಡುತ್ತಾರೆ ಜನರು ಅನೇಕರು ಮರೆಯುತ್ತಾರೆ ಎಂದು ಹೇಳಿದರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ