Headlines

Lakkundi Gold Treasure: ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

Lakkundi Gold Treasure: ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?


ಗದಗ, ಫೆಬ್ರುವರಿ 04: ಇತಿಹಾಸ ಲಕ್ಕುಂಡಿಯಲ್ಲಿ ಅಡಗಿರುವ ನಿಧಿ ಮತ್ತು ಅದರ ಸರ್ಪಗಳು ಕಾಯುತ್ತಿವೆ ಎಂಬ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಲಕ್ಕುಂಡಿ ಗ್ರಾಮದ ಹಿರಿಯರಾದ ವಿರುಪಾಕ್ಷಪ್ಪ ಯಾವಗಲ್ ಅವರು ಟಿವಿ9ಗೆ ನೀಡಿರುವ ಹೇಳಿಕೆಯ ಪ್ರಕಾರ, ಇಲ್ಲಿನ ಜೈನ ಬಸದಿಗಳ ಭಾಗದಲ್ಲಿ ಸಾಕಷ್ಟು ಸರ್ಪಗಳಿದ್ದು, ಅವು ನಿಧಿಗೆ ಕಾವಲು ಕಾಯುತ್ತವೆ. ಪ್ರಸ್ತುತ ನಾಗನಾಥ ದೇವಾಲಯ ಎಂದು ಗುರುತಿಸಲಾಗುವ ಸ್ಥಳ ಜೈನ ಬಸದಿ ಎಂಬುದಕ್ಕೆ ಹಲವು ಕುರುಹುಗಳು ದೊರೆತಿವೆ.

ಈ ಭಾಗದ ಹಿಂದೆ ಏಳು ಜೈನ ಬಸದಿಗಳ ಸಂಕೀರ್ಣ ಇತ್ತು. ಅದರಲ್ಲಿ ಮೂರು ಮಾತ್ರ ಉಳಿದಿದ್ದು, ನಾಲ್ಕು ಸಂಪೂರ್ಣ ಹಾಳಾಗಿವೆ. ಇಲ್ಲಿ ಜೈನ ತೀರ್ಥಂಕರರ ಸ್ಥಾಪನೆಗೆ ಬಳಸುತ್ತಿದ್ದ ಪೀಠದ ಕುರುಹೂ ಇದೆ. ಈ ಪ್ರದೇಶದಲ್ಲಿ ಸರ್ಪಗಳು ಸಾಮಾನ್ಯವಾಗಿದ್ದು, ಅವು ನಿಧಿಯನ್ನು ಕಾಯುತ್ತವೆ ಎಂಬುದು ಲಕ್ಕುಂಡಿಯ ಗ್ರಾಮಸ್ಥರ ನಂಬಿಕೆ. ಚಿನ್ನದ ನಿಧಿ, ಹವಳ, ಮುತ್ತುರತ್ನಗಳು ಇತ್ಯಾದಿ. ಟಂಕಸಾಲೆ ಇದ್ದುದರಿಂದ ಲಕ್ಕುಂಡಿಯ ಗಲ್ಲಿ ಗಲ್ಲಿಯಲ್ಲಿಯೂ ಚಿನ್ನ ಸಿಗಬಹುದು ಎಂಬ ಇತಿಹಾಸದ ಮಾತು ಈ ನಂಬಿಕೆಗೆ ಪುಷ್ಠಿ ನೀಡಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *