ಭಾರತೀಯ ಸಂಸ್ಥೆ (IIT) ಮದ್ರಾಸ್ ತನ್ನ ಸಮ್ಮರ್ ಫೆಲೋಶಿಪ್/ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಪ್ರಕಟಿಸಿದ್ದು, ದೇಶದಾದ್ಯಂತ ಎಲ್ಲಾ ಮಹತ್ವದ ಅವಕಾಶಗಳನ್ನು ಒದಗಿಸಲಾಗಿದೆ. ವಿಶೇಷವಾಗಿ ಐಐಟಿ ಕಾರ್ಯಕ್ರಮದ ಅನುಭವ ನೀಡುವ ಉದ್ದೇಶದಿಂದ ಈ ವಿನ್ಯಾಸವನ್ನು ಹೊಂದಲಾಗಿದೆ, ಆಯ್ಕೆಯಾದವರಿಗೆ ಆಕರ್ಷಕ ಸ್ಟೈಫಂಡ್ ಕೂಡ ಇದೆ. ಇಂಟರ್ನ್ಶಿಪ್ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಒಟ್ಟು 30,000 ರೂ. ಸ್ಟೈಫಂಡ್ ಪಡೆಯಲಿದ್ದಾರೆ.
ಈ ಇಂಟರ್ನ್ಶಿಪ್ ಎರಡು ತಿಂಗಳ ಅವಧಿಯದ್ದಾಗಿದ್ದು, ಮೇ 18 ರಿಂದ ಜುಲೈ 17 ರವರೆಗೆ. ಆಯ್ಕೆಯಾದ ವಿದ್ಯಾರ್ಥಿಗಳು ಈ ಅವಧಿಯಲ್ಲಿ IIT ಮದ್ರಾಸ್ ಕ್ಯಾಂಪಸ್ನಲ್ಲಿ ಸಂಶೋಧನೆ ಅಥವಾ ಅಕಾಡೆಮಿಕ್ ಯೋಜನೆಗಳಲ್ಲಿ ಭಾಗವಹಿಸಬೇಕು. ತಿಂಗಳಿಗೆ 15,000 ರೂ. ಸ್ಟೈಫಂಡ್ ನೀಡಲಾಗುತ್ತಿದ್ದು, ಎರಡು ತಿಂಗಳಿಗೆ ಒಟ್ಟು 30,000 ರೂ. ಲಭಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 2 ಸಂಜೆ 5 ಗಂಟೆಗೆ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
IIT ಮದ್ರಾಸ್ನಲ್ಲಿ ಇಂಜಿನಿಯರಿಂಗ್, ವಿಜ್ಞಾನ, ಮಾನವಿಕ ಮತ್ತು ನಿರ್ವಹಣಾ ಅಧ್ಯಯನ ಸೇರಿದಂತೆ ಹಲವು ವಿಭಾಗಗಳಲ್ಲಿ ಇಂಟರ್ನ್ಶಿಪ್ ಅವಕಾಶಗಳಿವೆ. ಏರೋಸ್ಪೇಸ್, ಕಂಪ್ಯೂಟರ್ ಸೈನ್ಸ್, ಡೇಟಾ ಮತ್ತು AI, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಬಯೋಟೆಕ್ನಾಲಜಿ, ಕೆಮಿಕಲ್ ಎಂಜಿನಿಯರಿಂಗ್, ಮೆಟಲರ್ಜೀ, ಮೆಡಿಕಲ್ ಸೈನ್ಸ್, ಓಷನ್ ಎಂಜಿನಿಯರಿಂಗ್ ಸೇರಿದಂತೆ ಅನೇಕ ತಾಂತ್ರಿಕ ವಿಭಾಗಗಳ ಜೊತೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಮಾನವಿಕ ಮತ್ತು ನಿರ್ವಹಣಾ ವಿಭಾಗಗಳಲ್ಲಿಯೂ ಅವಕಾಶಗಳಿವೆ. ಇದು ಉತ್ತಮ ಆಸಕ್ತಿಯ ಕ್ಷೇತ್ರದಲ್ಲಿ ನೈಜ ಅನುಭವ ವೇದಿಕೆಯಾಗಿದೆ.
ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್
ಅರ್ಜಿ ಸಲ್ಲಿಸಲು ಎಂಜಿನಿಯರಿಂಗ್, ವಿಜ್ಞಾನ, ಮಾನವಿಕ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಅರ್ಹರು. ಮೂರನೇ ವರ್ಷದ BE/BTech/BSc ಎಂಜಿನಿಯರಿಂಗ್/ಸೈನ್ಸ್ ವಿದ್ಯಾರ್ಥಿಗಳು, ಇಂಟಿಗ್ರೇಟೆಡ್ ಅಥವಾ ಡ್ಯುಯಲ್ ಪದವಿಯ ME/MTech/MSc ಮೂರನೇ ಅಥವಾ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಹಾಗೂ ಮೊದಲ ವರ್ಷದ MSc/MA/MBA ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಆದರೆ IIT ಯಲ್ಲಿ ಓದುತ್ತಿರುವ ಈ ಅವಕಾಶ ಲಭ್ಯವಿಲ್ಲ.
ಒಟ್ಟಿನಲ್ಲಿ, IIT ಮದ್ರಾಸ್ನ ಈ ಬೇಸಿಗೆಯ ಇಂಟರ್ನ್ಶಿಪ್ ಕಾರ್ಯಕ್ರಮವು ಪ್ರತಿಷ್ಠಿತ ಸಂಸ್ಥೆಯಲ್ಲಿ ಅನುಭವ, ಮಾರ್ಗದರ್ಶನ ಮತ್ತು ಸ್ಟೈಫಂಡ್ ಜೊತೆಗೆ ತಮ್ಮ ವೃತ್ತಿಜೀವನಕ್ಕೆ ಬಲವಾದ ನೆಲೆಯನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿದೆ. ಆಸಕ್ತರು ಗಡುವಿನೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹೆಚ್ಚಿನ ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ