ಗಂಡನ ಅಕ್ರಮ ಸಂಬಂಧಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಕಣ್ಣೀರಿಟ್ಟ ಬಿಗ್‌ಬಾಸ್‌ ಸ್ಪರ್ಧಿ!

ಗಂಡನ ಅಕ್ರಮ ಸಂಬಂಧಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಕಣ್ಣೀರಿಟ್ಟ ಬಿಗ್‌ಬಾಸ್‌ ಸ್ಪರ್ಧಿ!

ಗಂಡನ ಅಕ್ರಮ ಸಂಬಂಧಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಕಣ್ಣೀರಿಟ್ಟ ಬಿಗ್‌ಬಾಸ್‌ ಸ್ಪರ್ಧಿ!

ನವದೆಹಲಿ (ಫೆ.4): ವಡಾ ಪಾವ್ ಗರ್ಲ್ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಚಂದ್ರಿಕಾ ದೀಕ್ಷಿತ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿರುವ ತನ್ನ ಪತಿ ಯುಗಮ್‌ ಗೆರಾ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಈ ಆರೋಪದ ಬಳಿಕ ಅವರ ಹೆಸರು ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಸುದ್ದಿಯಲ್ಲಿದೆ. ತನ್ನ ಗಂಡ ಬೇರೆ ಹೆಂಗಸಿನ ಜೊತೆ ಸುತ್ತಾಡ್ತಾ ಇರೋದನ್ನು ಸ್ವತಃ ಚಂದ್ರಿಕಾ ದೀಕ್ಷಿತ್‌ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ಆಕೆ ಕಣ್ಣೀರುಡುತ್ತಲೇ ಈ ವಿಚಾರವನ್ನು ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ. ವಿಡಿಯೋದಲ್ಲಿ ಪತಿ ವಿರುದ್ಧ ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ಆತನ ವಿರುದ್ಧ ನನಗೆ ಸಾಕಷ್ಟು ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ನನ್ನ ಜೀವನದಲ್ಲಿ ಆಗುತ್ತಿರುವ ಘಟನೆಯಿಂದ ಬಹಳ ಖಿನ್ನತೆಯಲ್ಲಿದ್ದೇನೆ ಎಂದೂ ಹೇಳಿದ್ದಾರೆ.

ಆದರೆ,ಹೆಚ್ಚಿನವರು ಆಕೆಯ ಈ ವಿಡಿಯೋ ನಿಜವೋ ಅಥವಾ ಪ್ರಚಾರದ ಸಾಹಸವೋ ಎನ್ನುವುದು ಖಚಿತವಿಲ್ಲ. ಏಕೆಂದರೆ, ಒಂದೂವರೆ ನಿಮಿಷದ ವಿಡಿಯೋದಲ್ಲಿ ಆಕೆಯ ನಾಟಕೀಯ ಗೋಳಾಟ ಕಂಡುಬಂದರೂ ಎಲ್ಲಿಯೂ ಕೂಡ ಆಕೆ ಕಣ್ಣಿಂದ ನೀರು ಬರುವುದು ಕಂಡಿಲ್ಲ. ಇದೇ ನೆಟ್ಟಿಗರ ಅನುಮಾನಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಚಂದ್ರಿಕಾ ದೀಕ್ಷಿತ್‌ ಹೇಳಿದ್ದೇನು?

ಈ ವಿಡಿಯೋದಲ್ಲಿ ಚಂದ್ರಿಕಾ ದೀಕ್ಷಿತ್‌, ನನ್ನ ಮದುವೆಯಲ್ಲಿ ನಾನು ಇಂಥ ದಿನವನ್ನು ನೋಡುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ. ಹಂಚಿಕೊಂಡ ವಿಡಿಯೋಗೆ ಶೀರ್ಷಿಕೆಯಲ್ಲಿ ‘ನನ್ನ ಬಳಿಯೂ ಪುರಾವೆ ಇದೆ..’ ಎಂದು ಬರೆದುಕೊಂಡಿದ್ದಾರೆ. ಇದು ಚಂದ್ರಿಕಾ ತಾನು ಮಾಡುತ್ತಿರುವ ಆರೋಪಗಳಿಗೆ ಪುರಾವೆ ಇದೆ ಅನ್ನೋದನ್ನು ಸೂಚಿಸಿದೆ. ಈಗ, ಚಂದ್ರಿಕಾ ತಮ್ಮ ಜೀವನದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅಂತಹ ಮಹತ್ವದ ವಿವರವನ್ನು ಹಂಚಿಕೊಂಡಾಗ, ಜನರು ಅವರ ಧೈರ್ಯವನ್ನು ಹೊಗಳಿದರು. ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಆಕೆಗೆ ಧೈರ್ಯವಾಗು ಇರುವಂತೆ ಸಲಹೆ ನೀಡಿದ್ದಲ್ಲದೆ, ಈಕೆಯ ಆರೋಪಕ್ಕೆ ಪತಿ ಯುಗಮ್‌ ಗೆರಾ ಉತ್ತರ ನೀಡಬೇಕು ಎಂದಿದ್ದಾರೆ.

ವಿಡಿಯೋದಲ್ಲಿ ಇರೋದೇನು?

ಇನ್ನು ವಿಡಿಯೋದಲ್ಲಿ ಚಂದ್ರಿಕಾ ತನ್ನ ಫೋನ್‌ ಸ್ಕ್ರೀನ್‌ಅನ್ನು ತೋರಿಸಿದ್ದಾರೆ. ಇದರಲ್ಲಿ ಆಕೆಯ ಗಂಡ ಇನ್ನೊಬ್ಬ ಮಹಿಳೆಯ ಜೊತೆ ಇರುವುದು ಕಂಡಿದೆ. ಮಹಿಳೆಯ ಮುಖವನ್ನು ಇಮೋಜಿಯಿಂದ ಮುಚ್ಚಲಾಗಿದೆ. ಚಂದ್ರಿಕಾ ಈ ವಿಡಿಯೋದಲ್ಲಿ, ‘ನಾನು ಜಗತ್ತಿಗೆ ಏನು ತೋರಿಸಬೇಕು ಎಂದು ಬಯಸುತ್ತೀರಿ? ನಮ್ಮ ಜಗಳಗಳನ್ನು ತೋರಿಸಲು ನೀವು ಬಯಸುತ್ತೀರಿ. ನಮ್ಮ ಜಗಳಗಳನ್ನು ನೋಡಲು ನೀವು ಬಯಸುತ್ತೀರಿ. ನಾನು ಎರಡು ತಿಂಗಳಿನಿಂದ ಇದನ್ನು ಸಹಿಸಿಕೊಳ್ಳುತ್ತಿದ್ದೇನೆ. ಎರಡು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ. ನಾನು ಏನನ್ನೂ ಹೇಳುತ್ತಿರಲಿಲ್ಲ, ನಾನು ಏನನ್ನೂ ಹೇಳುತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ, ಮನೆಯನ್ನು ನಿರ್ವಹಿಸುತ್ತಿದ್ದೇನೆ, ಮಗುವನ್ನು ನೋಡಿಕೊಳ್ಳುತ್ತಿದ್ದೇನೆ. ಆದರೆ, ನೀವು ಇದನ್ನೆಲ್ಲಾ ಮಾಡುತ್ತಿದ್ದೀರಿ? ನೀವು ಯಾರನ್ನು ಕೇಳಿದ್ದೀರಿ, ಏಕೆ? ದಿನವಿಡೀ ನಿಮ್ಮನ್ನು ಹಿಂಬಾಲಿಸುವ ಹುಡುಗಿ. ನನ್ನ ಗಂಡ, ನನ್ನ ಪ್ರೀತಿ? ನನ್ನ ಬಗ್ಗೆ ಏನು? ನನ್ನ ಜೀವನವನ್ನೇ ಹರಿದು ಹಂಚಿ ಹಾಕುವ ಸಾಕಷ್ಟು ವಿಚಾರಗಳಿವೆ’ ಎಂದು ಚಂದ್ರಿಕಾ ದೀಕ್ಷಿತ್‌ ಹೇಳಿದ್ದಾರೆ.

View this post on Instagram
A post shared by Chandrika Gera (@chandrika.dixit)

Source link

Leave a Reply

Your email address will not be published. Required fields are marked *