Headlines

Warning… ಮನೆಯಲ್ಲಿ ಒಬ್ಬರೇ ಇದ್ದಾಗ ತಪ್ಪಿಯೂ ಈ ಸಿನಿಮಾ ನೋಡ್ಬೇಡಿ

Warning… ಮನೆಯಲ್ಲಿ ಒಬ್ಬರೇ ಇದ್ದಾಗ ತಪ್ಪಿಯೂ ಈ ಸಿನಿಮಾ ನೋಡ್ಬೇಡಿ

Warning… ಮನೆಯಲ್ಲಿ ಒಬ್ಬರೇ ಇದ್ದಾಗ ತಪ್ಪಿಯೂ ಈ ಸಿನಿಮಾ ನೋಡ್ಬೇಡಿ

Horror Movies: ನೀವು ಭಯಾನಕ ಹಾರರ್ ಮೂವಿಗಳನ್ನು ನೋಡಲು ಇಷ್ಟಪಡುವವರಾಗಿದ್ರೆ, ಈ ಸಿನಿಮಾಗಳು ನಿಮಗಾಗಿ, ಇಲ್ಲಿ ಭೂತ , ಪ್ರೇತಗಳು ಎದುರಲ್ಲಿ ಬಂದು ತೊಂದರೆ ಕೊಡದೇ ಇದ್ದರೂ, ನೋಡುತ್ತಿದ್ದಂತೆ ವಿಚಿತ್ರ ಭಯ ನಿಮ್ಮನ್ನು ಆವರಿಸದೇ ಇರದು. ಒಬ್ಬರೇ ಇದ್ದಾಗ ಈ ಚಿತ್ರ ನೋಡ್ಬೇಡಿ.

ಇಬ್ಬರು ಅಂಡರ್ ಕವರ್ ಪೊಲೀಸರು ಜೈಲಿಂದ ತಪ್ಪಿಸಿಕೊಂಡ ಕೈದಿಗಳನ್ನು ಹುಡುಕಿಕೊಂಡು ಒಂದು ಗ್ರಾಮಕ್ಕೆ ಬಂದಾಗ ಅಲ್ಲಿ ಏನೆಲ್ಲಾ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡು ನರಳಾಡುತ್ತಾರೆ ಎನ್ನುವ ಎದೆ ನಡುಗಿಸುವ ಕಥೆ. ಹಾರರ್, ಥ್ರಿಲ್ ಎಲ್ಲವನ್ನೂ ಹೊಂದಿರುವ ಸಿನಿಮಾ ಇದು.

ಟ್ಯಾಕ್ಸಿ ಡ್ರೈವರ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮೆಹಕ್, ಬಳಿಕ ಅಗೋರಾಫೋಭಿಯಾಕ್ಕೆ ಒಳಗಾಗುತ್ತಾಳೆ. ಅದರಿಂದ ಹೊರಗೆ ಬರಲು ಬೇರೆ ಅಪಾರ್ಟ್’ಮೆಂಟ್ ಗೆ ಶಿಫ್ಟ್ ಆಗುವ ಮೆಹಕ್ ಗೆ ಅಲ್ಲಿ ಈ ಹಿಂದೆ ವಾಸಿಸುತ್ತಿದ್ದವರು ನಿಗೂಢವಾಗಿ ಮರೆಯಾಗಿದ್ದಾರೆ ಅನ್ನೋದು ಗೊತ್ತಾಗುತ್ತದೆ.

ರವಿ ಎನ್ನುವ ಯುವಕ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದು ಅವನು ನಿಧಾನವಾಗಿ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ. ತನ್ನ ಶಸ್ತ್ರಚಿಕಿತ್ಸೆಗೆ ತನ್ನ ಬಳಿ ಹಣವಿಲ್ಲ ಎಂದು ಅವನಿಗೆ ಅರಿವಾದಾಗ, ಕೊಲೆ ವಿಚಾರಣೆಯಲ್ಲಿ ಶಂಕಿತರಾಗಿರುವ ಇಬ್ಬರು ವ್ಯಕ್ತಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾನೆ. ಆ ಕಥೆ ಹೇಗೆಲ್ಲಾ ತಿರುವು ಪಡೆಯುತ್ತದೆ ಅನ್ನೋದು ಈ ಸಿನಿಮಾ.

ಕುಟುಂಬದ ಹಿರಿಯ ಮರಣದ ನಂತರ, ತಾಯಿ ಮತ್ತು ಮಗ ಮನೆಯಲ್ಲಿ ನಿಗೂಢ ಘಟನೆಗಳನ್ನು ಅನುಭವಿಸುತ್ತಾರೆ, ಅದು ಅವರ ವಿವೇಕವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಇದೆಲ್ಲವೂ ಅವರ ಹಿಂದಿನ ಟ್ರಾಮಾದ ಕಥೆಯನ್ನು ತಿಳಿಸುತ್ತದೆ. ಆದರೆ ಈ ಸಿನಿಮಾ ಮಾತ್ರ ಭೂತವನ್ನು ತೋರಿಸದೆಯೂ ನಿಮ್ಮ ಎದೆ ನಡುಗುವಂತೆ ಮಾಡುತ್ತದೆ.

ಒಬ್ಬ ವೈಚಾರಿಕ ವ್ಯಕ್ತಿ ಮತ್ತು ವಿಜ್ಞಾನದ ವಿದ್ಯಾರ್ಥಿಯಾದ ಅಭಿಮನ್ಯುವಿಗೆ ಹಾಸ್ಟೆಲ್ ನಲ್ಲಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಯ ಕೋಣೆ ಸಿಗುತ್ತದೆ. ಅಲ್ಲಿ ಆತನ ನಂಬಿಕೆಗಳಿಗೆ ಸವಾಲು ಹಾಕುವಂತಹ ಘಟನೆಗಳು ನಡೆಯುತ್ತವೆ. ಅವನಿಗೆ ಸಾವು ಮತ್ತು ಬದುಕಿನ ನಡುವಿನ ಸಣ್ಣ ಅನುಭವ ಕೂಡ ಆಗುತ್ತದೆ.

ಒಬ್ಬ ಬರಹಗಾರ ತನ್ನ ಸ್ನೇಹಿತನ ಮನೆಯಲ್ಲಿ ತನ್ನ ಜೀವನದ ಬಗ್ಗೆ ಎಲ್ಲಾ ಸೀಕ್ರೆಟ್ ಗಳನ್ನು ತಿಳಿದಿರುವ ವ್ಯಕ್ತಿಯನ್ನು ಭೇಟಿಯಾಗುತ್ತಾನೆ. ಆದರೆ, ಲೇಖಕನಿಗೆ ಅವನಿಂದ ದೂರವಿರಲು ಎಚ್ಚರಿಕೆ ನೀಡಲಾಗುತ್ತದೆ. ಭ್ರಮೆಯನ್ನು ಸೃಷ್ಟಿ ಮಾಡುವ ಈ ಕಥೆ ಎದೆ ನಡುಗಿಸುತ್ತೆ.

ಒಂದು ತುಂಬು ಕುಟುಂಬ 13 ಬಿ ಫ್ಲಾಟ್ ಗೆ ಶಿಫ್ಟ್ ಆದ ಬಳಿಕ, ಮನೆಯ ಟಿವಿಯಲ್ಲಿ ಅವರ ಜೀವನದಲ್ಲಿ ನಡೆಯುವಂತಹ ವಿಷಯಗಳೇ ಪ್ರಸಾರವಾಗುತ್ತವೆ. ಕೊನೆಗೆ ಅದು ಹಾರರ್ ಆಗಿ ಹೇಗೆ ತೆರೆದುಕೊಳ್ಳುತ್ತದೆ. ಆ ಮನೆಯ ಹಿಂದಿನ ಕಥೆ ಏನು ಅನ್ನೋದೆಲ್ಲಾ ನಿಧಾನವಾಗಿ ತೆರೆದುಕೊಳ್ಳುತ್ತದೆ.

Source link

Leave a Reply

Your email address will not be published. Required fields are marked *