ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ…

ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ…


ರಾಜಮೌಳಿ (ರಾಜಮೌಳಿ) ನಿರ್ದೇಶಿಸುತ್ತಿರುವ ‘ವಾರಣಾಸಿ’ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಇರುವಾಗಲೇ ಸಿನಿಮಾದ ಪ್ರಚಾರ ಶುರುವಾಗಿದೆ. ಕೆಲ ವಾರಗಳ ಹಿಂದಷ್ಟೇ ಬಲು ಅದ್ಧೂರಿಯಾಗಿ ಸಿನಿಮಾದ ಸಣ್ಣ ಟೀಸರ್ ಬಿಡುಗಡೆ ಮಾಡಲಾಯ್ತು. ಸಿನಿಮಾದ ಹೆಸರು ಹಾಗೂ ಮಹೇಶ್ ಬಾಬು ಅವರ ಒಂದು ಲುಕ್ ಹೊರತಾಗಿ ಹೊಸತೇನನ್ನೂ ಸಹ ಟೀಸರ್ ನಲ್ಲಿ ರಿವೀಲ್ ಮಾಡಲಾಗಲಿಲ್ಲ. ಇದೀಗ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಹಲವು ವಿಷಯ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ತಾವು ರಾಜಮೌಳಿ ಅವರಿಗೆ ಮನವಿ ಹಾಗೂ ಅವರು ಪುರಸ್ಕರಿಸಿದ್ದು, ಬಳಿಕ ತಮ್ಮ ಮನವಿಯಿಂದ ತಮಗೇ ಸಮಸ್ಯೆ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ಅವರು ‘ವಾರಣಾಸಿ’ ಸಿನಿಮಾಕ್ಕಾಗಿ ಪ್ರಿಯಾಂಕಾ ಅವರನ್ನು ಕೇಳಿದಾಗ ಪ್ರಿಯಾಂಕಾ ಕೂಡಲೇ ಒಪ್ಪಿಕೊಂಡರಂತೆ. ಆದರೆ ರಾಜಮೌಳಿ ಬಳಿ ಒಂದು ವಿಶೇಷ ಮನವಿ ಒಂದನ್ನು ಮಾಡಿದ್ದರಂತೆ.

‘ನಾನು ಭಾರತೀಯ ಸಿನಿಮಾದ ಹಾಡುಗಳಲ್ಲಿ ಡ್ಯಾನ್ಸ್ ಮಾಡಿ ಬಹಳ ವರ್ಷಗಳಾಗಿಬಿಟ್ಟಿವೆ. ನನಗಾಗಿ ಒಂದು ಡ್ಯಾನ್ಸ್ ನಂಬರ್ ಅನ್ನು ಸಿನಿಮಾದಲ್ಲಿ ಇಡಲು ಸಾಧ್ಯವಾ?’ ಎಂದು ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದರಂತೆ. ಅದರಂತೆ ರಾಜಮೌಳಿ ಸಹ ಸರಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಡ್ಯಾನ್ಸ್ ಹಾಡಿನ ಚಿತ್ರೀಕರಣ ಮಾತ್ರ ಬಹಳ ಶ್ರಮದಾಯಕವಾಗಿತ್ತು. ಬಹಳ ವೇಗ ಮತ್ತು ಕೋಆರ್ಡಿನೇಷನ್ ಇರುವ ಹಾಡು ಅದು’ ಪ್ರಿಯಾಂಕಾ.

ಇದನ್ನೂ ಓದಿ:ತಾವೇ ಆರಂಭಿಸಿದ ಟ್ರೆಂಡ್ ಬಗ್ಗೆ ರಾಜಮೌಳಿಗೆ ರೇಜಿಗೆ; ದೊಡ್ಡ ನಿರ್ಧಾರಕ್ಕೆ ಬಂದ ನಿರ್ದೇಶಕ

ರಾಜಮೌಳಿಯ ಈ ಹಿಂದಿನ ಸಿನಿಮಾ ‘ಆರ್ ಆರ್ ಆರ್’ನಲ್ಲಿನ ‘ನಾಟು ನಾಟು’ ಹಾಡು ಸಹ ಅದ್ಭುತ ನೃತ್ಯದಿಂದ ಇಡೀ ವಿಶ್ವದಲ್ಲೇ ಜನಪ್ರಿಯವಾಗಿತ್ತು. ಆ ಸಿನಿಮಾದ ಡ್ಯಾನ್ಸ್ ಕೂಡ ಬಹಳ ಇಂಟೆನ್ಸ್ ಆಗುತ್ತಿದೆ ಎಂದು ಸಹ ರಾಮ್ ಚರಣ್ ಮತ್ತು ಜೂ ಎನ್ ಟಿಆರ್ ನೆನಪು ಮಾಡಿಕೊಳ್ಳುತ್ತಾರೆ. ರಾಜಮೌಳಿ ಹೇಗೆ, ಡ್ಯಾನ್ಸ್ನ ಪ್ರತಿ ಮೂಮೆಂಟ್ ಅನ್ನು ನೋಡಿ ಫೈನಲ್ ಮಾಡಬೇಕೆಂದು ಜೂ ಎಂದು ರಾಮ್ ಚರಣ್ ಮತ್ತು ಎನ್ ಟಿಆರ್ ಹೇಳಿದ್ದಾರೆ.

ಇದೀಗ ‘ವಾರಣಾಸಿ’ ಸಿನಿಮಾದಲ್ಲಿಯೂ ಸಹ ಅಂಥಹದ್ದೇ ಒಂದು ಡ್ಯಾನ್ಸ್ ನಂಬರ್ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ಅದೇ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾ ಏಪ್ರಿಲ್ 7, 2027 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *