ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (ಪವನ್ ಕಲ್ಯಾಣ್) ಟಾಲಿವುಡ್ ನ ಸ್ಟಾರ್ ನಟರೂ ಹೌದು. ಪ ಕಲ್ಯಾಣ್ ಸಕ್ರಿಯ ರಾಜಕೀಯಕ್ಕೆ ಬಳಿಕ ಅವರು ಸಿನಿಮಾಗಳಲ್ಲಿ ನಟಿಸಲು ಬಂದಿಲ್ಲ. ಆದರೆ ಪವನ್ ಅವರು ಆಂಧ್ರ ಡಿಸಿಎಂ ಆದ ಬಳಿಕ ಅವರ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಇದೀಗ ಮತ್ತೊಂದು ಸಿನಿಮಾ ಬಿಡುಗಡೆ ಆಗಲಿದೆ, ಇಂದು ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.
ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಅದರ ಬಳಿಕ ‘ಓಜಿ’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. ಇದೀಗ ಪವನ್ ಅವರ ಮತ್ತೊಂದು ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ತೆರೆಗೆ ಬರುತ್ತಿದೆ. ಈ ಸಿನಿಮಾ ಪವನ್ ಅಭಿಮಾನಿಗಳಿಗಾಗಿಯೇ ಮಾಡಲಾದ ಸಿನಿಮಾ ಎಂಬುದು ನಿರ್ದೇಶಕ ಹರೀಶ್ ಶಂಕರ್ ಮಾತು.
ಪವನ್ ಕಲ್ಯಾಣ್ ಜೊತೆಗೆ ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ಸಹ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 23 ರಂದು ಬಿಡುಗಡೆಯಾಗಲಿದೆ. ಕನ್ನಡದ ‘ಟಾಕ್ಸಿಕ್’, ಹಿಂದಿಯ ‘ಧುರಂಧರ 2’ ಸಿನಿಮಾ ಬಿಡುಗಡೆ ಆದ ನಾಲ್ಕು ದಿನಗಳ ನಂತರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಅಪರೂಪದ ಗೌರವಕ್ಕೆ ಭಜನರಾದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’ ಸಿನಿಮಾ ಬಹಳ ಜನಪ್ರಿಯವಾಗಿದ್ದು, ಅದೇ ಸಿನಿಮಾದ ಪಾತ್ರದಿಂದ ಸ್ಪೂರ್ತಿ ಪಡೆದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ. ಪವನ್ ಕಲ್ಯಾಣ್ ಡಿಸಿಎಂ ಆಗುವ ಮುಂಚೆಯೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಯಿತು. ಆದರೆ ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಕ್ರಿಯವಾದ ಕಾರಣ ಸಿನಿಮಾವನ್ನು ನಿಲ್ಲಿಸಲಾಗಿದೆ. ಇದೀಗ ಬ್ಯೂಸಿ ರಾಜಕೀಯ, ಆಡಳಿತದ ನಡುವೆಯೇ ಬಿಡುವು ಮಾಡಿಕೊಂಡ ಸಿನಿಮಾದ ಚಿತ್ರೀಕರಣವನ್ನು ಪವನ್ ಕಲ್ಯಾಣ್ ಮುಗಿಸಿದ್ದು, ವಿದೇಶಕ್ಕೆಲ್ಲ ಹೋಗಿ ಹಾಡುಗಳ ಚಿತ್ರಗಳನ್ನು ತೆಗೆದುಕೊಂಡು ಬಂದಿದ್ದಾರೆ.
ನಮ್ಮ USTAAD 🕺🤟🏻🙇🏻
ಈ ಬೇಸಿಗೆಯಲ್ಲಿ, ಪವರ್ ಸ್ಟಾರ್ ಮತ್ತು ಕಲ್ಟ್ ಕ್ಯಾಪ್ಟನ್ 🔥 ಜೋಡಿಯೊಂದಿಗೆ ಬಾಕ್ಸ್ ಆಫೀಸ್ ಬೆಂಕಿಯಲ್ಲಿರುತ್ತದೆ#ಉಸ್ತಾದ್ ಭಗತ್ ಸಿಂಗ್ 26ನೇ ಮಾರ್ಚ್, 2026 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಬಿಡುಗಡೆ.#UBSOnMarch26th
ಪವರ್ ಸ್ಟಾರ್ @PawanKalyan… pic.twitter.com/XjcuIv64wh
— ಉಸ್ತಾದ್ ಭಗತ್ ಸಿಂಗ್ (@UBSTheFilm) ಫೆಬ್ರವರಿ 4, 2026
‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ವೀರ ಯೋಧನಾಗಿ, ‘ಓಜಿ’ ಸಿನಿಮಾದಲ್ಲಿ ಗಂಭೀರ ಗ್ಯಾಂಗ್‌ಸ್ಟರ್ ಆಗಿ ನಟಿಸಿದ್ದ ಪವನ್ ಕಲ್ಯಾಣ್, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಠಪೋರಿ ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ. ಆದರೆ ಪವನ್ ಪ್ರಸ್ತುತ ಜವಾಬ್ದಾರಿಯುತ ಡಿಸಿಎಂ ಸ್ಥಾನದಲ್ಲಿರುವ ಕಾರಣ ಮೊದಲಿದ್ದ ಚಿತ್ರಕ್ಕೆ ಸಾಕಷ್ಟು ಬದಲಾವಣೆ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ