ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಶಾಸಕ ಶಿವಲಿಂಗೇಗೌಡ

ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಶಾಸಕ ಶಿವಲಿಂಗೇಗೌಡ


ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಶಾಸಕ ಶಿವಲಿಂಗೇಗೌಡ

ಬೆಂಗಳೂರು, (ಫೆಬ್ರವರಿ 04): ವಿಧಾನಸಭೆ ಕಲಾಪದಲ್ಲಿಂದು (ಕರ್ನಾಟಕ ವಿಧಾನಸಭೆ ಅಧಿವೇಶನ) ಅರಸಿಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ)ಹಾಗೂ ಬಿಜೆಪಿ ಶಾಸಕರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಈ ವೇಳೆ ದೇವೇಗೌಡ್ರಿಗೆ ಚೂರಿ ಹಾಕಿದ ಶಿವಲಿಂಗೇಗೌಡ ಅವರಿಗೆ ಧಿಕ್ಕಾರ, ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಬಿಜೆಪಿ ಸದಸ್ಯರು ಕೂಗಾಡಿದ್ದು, ಇದು ವೈಯಕ್ತಿಕ ಆರೋಪ ಪ್ರತ್ಯಾರೋಪಕ್ಕೆ ತಿರುಗಿದೆ. ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಶಿವಲಿಂಗೇಗೌಡ್ರು, ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ವೈಯುಕ್ತಿಕವಾಗಿ ಬೈದಾಡಿದ್ದಾರೆ. ಇದು ತೀವ್ರ ಸ್ವರೂಪ ಹೊಂದಿದ್ದು, ಶಿವಲಿಂಗೇಗೌಡರು ಕ್ಷಮೆ ಕೇಳಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದರೆ, ಇದಕ್ಕೆ ಜಗ್ಗದ ಶಿವಲಿಂಗ, ನನಗೆ ವೈಯಕ್ತಿಕವಾಗಿ ಬೈದಿರುವುದಕ್ಕೆ ಕ್ಷಮೆ ಕೇಳೇಗೌಡ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಇತರ ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು. ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ಜೋರಾಯ್ತು.

ಇನ್ನು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ ಶಿವಲಿಂಗೇಗೌಡ, ನನಗೆ ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಹೇಳಿದ್ದಾರೆ. ನಾನು ಕಳ್ಳತನ ಮಾಡಿದ್ದು ತೋರಿಸಿ. ನಾನು ಕದ್ದಿದ್ದು ನೀವು ತೋರಿಸಿದ್ರೆ ನಿಮ್ಮ ಮನೆಯಲ್ಲಿ ಜೀತ ಮಾಡುತ್ತೇನೆ. ನಾನು ಇದ್ದಕ್ಕೆ ಬದ್ಧನಾಗಿದ್ದೇನೆ. ನನಗೆ ಕಳ್ಳ ಅಂದ್ರೆ ಅವರಿಗೆ ಮುತ್ತು ಕೊಡಬೇಕಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸುತ್ತಲೇ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡರು.

ಇದನ್ನೂ ನೋಡಿ: ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ



Source link

Leave a Reply

Your email address will not be published. Required fields are marked *