‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ?

‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ?


ಮಾರ್ಚ್ ತಿಂಗಳ ಕೆಲವು ಬಲು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಯಶ್ ನಟನೆಯ ‘ಟಾಕ್ಸಿಕ್’ (ಟಾಕ್ಸಿಕ್) ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಎರಡೂ ಮಾರ್ಚ್ 19 ರಂದು ಒಂದೇ ದಿನ ಬಿಡುಗಡೆ ಆಗಲಿದೆ ಬೇರೆ ಸಿನಿಮಾಗಳೆಲ್ಲ ದೊಡ್ಡ ಸಿನಿಮಾಗಳಿಗೆ ದಾರಿ ಮಾಡಿಕೊಡುತ್ತಿವೆ. ಆದರೆ ಅದೇ ದಿನ ಅಂದರೆ ಮಾರ್ಚ್ 19 ರಂದು ತೆಲುಗಿನ ನಟ ಅಡವಿ ಶೇಷ್ ನಟನೆಯ ‘ಡಕಾಯಿತ್’ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆಯನ್ನು ಅಚಾನಕ್ಕಾಗಿ ಮುಂದೂಡಲಾಗಿದೆ.

ಮಾರ್ಚ್ 19 ರಂದು ಸಿನಿಮಾ ಬಿಡುಗಡೆಯಾದಾಗ ನಾಯಕ ಅಡವಿ ಶೇಷ್ ಅವರ ನಿರ್ಣಯದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ಟಾಕ್ಸಿಕ್’ ಅಂಥಾ ದೊಡ್ಡ ಸಿನಿಮಾ ಬಿಡುಗಡೆ ಆಗುವ ದಿನದಂದೇ ನೀವು ಬಿಡುಗಡೆ ಮಾಡುತ್ತಿರುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಡವಿ ಶೇಷ್, ‘ನಮಗೆ ‘ಟಾಕ್ಸಿಕ್’ ಬಗ್ಗೆ ಭಯವಿಲ್ಲ. ನಾನು ಅಂಡರ್‌ಡಾಗ್ ಆಗಿಯೇ ಗೆದ್ದುಕೊಂಡು ಬಂದವನು. ಜನರಿಗೆ ಸರ್ಪ್ರೈಸ್ ನೀಡುತ್ತಲೇ ಬಂದಿದ್ದೇನೆ. ಜೊತೆಗೆ, 2018ರ ನೆನಪು ನನಗೆ ಚೆನ್ನಾಗಿದೆ, ‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಶಾರುಖ್ ಖಾನ್ ನಟನೆಯ ‘ಜೀರೊ’ ಸಿನಿಮಾದ ಎದುರು ಬಿಡುಗಡೆ ಆಗುತ್ತಿದೆ, ಸಿನಿಮಾ ವ್ಯಾಕರಣವನ್ನೇ ಬದಲಾಯಿಸಿತು’. ಆ ಮೂಲಕ ತಾವು ‘ಟಾಕ್ಸಿಕ್’ ಎದುರು ಬಿಡುಗಡೆ ಮಾಡಿ ಸಿನಿಮಾ ಗೆಲ್ಲಿಸುತ್ತೇವೆ ಎಂದಿದ್ದರು.

ಇದನ್ನೂ ಓದಿ:’ಧುರಂಧರ್ 2′ ಚಿತ್ರ’ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ

ಆದರೆ ಈಗ ನಿಜ ಪರಿಸ್ಥಿತಿಯ ಅರಿವಾದಂತಿದ್ದು, ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಅಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್, ಪ್ರಕಾಶ್ ರೈ ನಟಿಸಿರುವ ‘ಡಕೈತ್’ ಸಿನಿಮಾ ಏಪ್ರಿಲ್ 10ಕ್ಕೆ ಬಿಡುಗಡೆಯಾಗಲಿದೆ. ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಮತ್ತು ‘ಧುರಂಧರ 2’ ಸಿನಿಮಾ ಬಿಡುಗಡೆ ಆಗುತ್ತಿವೆ. ಅದರ ಐದು ದಿನಗಳ ಬಳಿಕ ಅಂದರೆ ಮಾರ್ಚ್ 26 ರಂದು ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗಲಿದೆ.

‘ಡಕೈತ್’ ಸಿನಿಮಾ ಭಿನ್ನ ಪ್ರೇಮಕತೆಯುಳ್ಳ ಆಕ್ಷನ್ ಸಿನಿಮಾ ಆಗಿದ್ದು, ಸದ್ಯಕ್ಕೆ ಆಗಿರುವ ಸಿನಿಮಾದ ಟೀಸರ್ ಸಖತ್ ಗಮನ ಸೆಳೆದಿದೆ. ಸಿನಿಮಾವನ್ನು ಶನೀಲ್ ದಿಯೋ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಟ ಅಡವಿ ಶೇಷ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ‘ಟಾಕ್ಸಿಕ್’ ಮತ್ತು ‘ಧುರಂಧರ 2’ ಸಿನಿಮಾದ ವಿರುದ್ಧ ಹೋಗದಂತೆ ಅಭಿಮಾನಿಗಳು ಎಚ್ಚರಿಕೆ ನೀಡಿದ್ದರು. ಕೊನೆಗೂ ಈಗ ಅಡವಿ ಶೇಷ್ ಸೂಕ್ತ ನಿರ್ಣಯವನ್ನೇ ತೆಗೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:52 pm, ಬುಧವಾರ, 4 ಫೆಬ್ರವರಿ 26



Source link

Leave a Reply

Your email address will not be published. Required fields are marked *