Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ?

Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ,  ಎಷ್ಟು ಹೆಚ್ಚಳ?


ಬೆಂಗಳೂರು, (ಫೆಬ್ರವರಿ 04): ಸಿಲಿಕಾನ್ ಸಿಟಿ ಬೆಂಗಳೂರು ನಮ್ಮ ಮೆಟ್ರೋ (ಬೆಂಗಳೂರು ನಮ್ಮ ಮೆಟ್ರೋ) ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊನ್ನೆ ಅಷ್ಟೇ ಬೋರ್ಡ್ ಮೀಟಿಂಗ್ ನಲ್ಲಿ ಶೇಕಡಾ 5ರಷ್ಟು ಮೆಟ್ರೋ ದರ ಏರಿಕೆ ಒಪ್ಪಿಗೆ ನಂತರ ಬಿಎಂಆರ್ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ಇಂದು (ಫೆಬ್ರವರಿ 04) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಫೆಬ್ರವರಿ 9 ರಿಂದ ಶೇಕಡಾ 5ರಷ್ಟು ನಮ್ಮ ಮೆಟ್ರೋ ಟಿಕೆಟ್ ದರವಾಗಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಎಂಆರ್ ಸಿಎಲ್ ಅಧಿಕೃತ ಆದೇಶ ಹೊರಡಿಸಲಿದೆ.

ಕಳೆದ ವರ್ಷ ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಏರ್ಪಟ್ಟಿತ್ತು, ರಾಜ್ಯ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದು ಎಂದು ಬಿಜೆಪಿ ನಾಯಕರು ಹೇಳಿದ್ರೆ, ಇತ್ತ ಕಾಂಗ್ರೆಸ್ ನವರು ಕೇಂದ್ರವೇ ಮಾಡಿದೆ ಎಂದು ಪ್ರತ್ಯಾರೋಪ ಮಾಡಿದರು. ಆದರೆ, ಈ ಬಾರಿ ಟಿಕೆಟ್ ದರಕ್ಕೆ ರಾಜ್ಯ ಸರ್ಕಾರವೇ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: Namma Metro: ವಿರೋಧದ ನಡುವೆ BMRCL ಬೋರ್ಡ್ ನಿಂದ ಮೆಟ್ರೋ ದರ ಏರಿಕೆ ಅಸ್ತು; ಎಷ್ಟು?

ಎಲ್ಲಿಗೆ ಎಷ್ಟು ಟಿಕೆಟ್ ದರ?

ಮೆಟ್ರೋದಲ್ಲಿ ಮೆಜೆಸ್ಟಿಕ್ನಿಂದ ವೈಟ್ಫೀಲ್ಡ್ಗೆ ಪ್ರಸ್ತುತ 80 ರೂ. ಇದ್ದು, ಶೇ. 5% ನಂತರ 80 ರೂ.ನಿಂದ 84ರೂ. ಆಗುತ್ತೆ. 10 ರೂ. ಟಿಕೆಟ್ ದರ ಶೇ 5ರಷ್ಟು ಇದ್ದರೆ 11 ರೂ. ಆಗಲಿದೆ. 90 ರೂ. ಇರುವ ಟಿಕೆಟ್ ದರ 95 ರೂ. ಆಗಲಿದೆ. ಮೆಜೆಸ್ಟಿಕ್ನಿಂದ ಬೊಮ್ಮಸಂದ್ರಕ್ಕೆ 80 ರೂ.ನಿಂದ 84 ರೂ.ಗೆ. ಮೆಜೆಸ್ಟಿಕ್ನಿಂದ ಚಲ್ಲಘಟ್ಟಕ್ಕೆ 60 ರೂ. ಟು 63 ರೂ.

ಕಳೆದ ವರ್ಷ ಫೆಬ್ರವರಿ 9 ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಮಾಡಲಾಗಿದೆ. ಬಳಿಕ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಎಂಆರ್ ಸಿಎಲ್, ಶೇಕಡಾ 71.5ಕ್ಕೆ ದರ ಇಳಿಕೆಯಾಗಿದೆ. ಆದರೂ ಸಹ ನಮ್ಮ ಮೆಟ್ರೋ ಈಗ ಭಾರತದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಎಂದು ಬಿರುದುಕೊಂಡಿದ್ದು, ಇದೀಗ ಮತ್ತೆ ಶೇ.5ರಷ್ಟು ಟಿಕೆಟ್ ದರವು ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *