ಫೋಟೊ, ವಿಡಿಯೋ ಡಿಲೀಟ್​ ಮಾಡಿದ್ರೂ ಮೆಮೊರಿ ಫುಲ್​ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ | Tips When Memory Show Full Even After Deleting Photos And Videos Suc

ಫೋಟೊ, ವಿಡಿಯೋ ಡಿಲೀಟ್​ ಮಾಡಿದ್ರೂ ಮೆಮೊರಿ ಫುಲ್​ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ | Tips When Memory Show Full Even After Deleting Photos And Videos Suc



ಫೋಟೊ, ವಿಡಿಯೋ ಡಿಲೀಟ್​ ಮಾಡಿದ್ರೂ ಮೆಮೊರಿ ಫುಲ್​ ತೋರಿಸ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ | Tips When Memory Show Full Even After Deleting Photos And Videos Suc

ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರವೂ ಫೋನ್ ಮೆಮೊರಿ ಫುಲ್ ಎಂದು ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರವಿದೆ. ಗೂಗಲ್ ಕ್ರೋಮ್‌ನ ಸೈಟ್ ಸೆಟ್ಟಿಂಗ್ಸ್‌ನಲ್ಲಿ ಸಂಗ್ರಹವಾಗಿರುವ ಅನಗತ್ಯ ಡೇಟಾವನ್ನು ತೆಗೆದುಹಾಕುವ ಮೂಲಕ ಸ್ವಲ್ಪ ಜಾಗವನ್ನು ಪಡೆಯಬಹುದು. ಇಲ್ಲಿದೆ ಟಿಪ್ಸ್​

ಈಗಿನ ಬಹುತೇಕ ಫೋನ್​ಗಳಲ್ಲಿ ಮೆಮೊರಿ ಪವರ್​ ಜಾಸ್ತಿನೇ ಇರುತ್ತದೆ. ಇದರ ಹೊರತಾಗಿಯೂ ಹೋದ ಹೋದಲ್ಲಿ ಫೋಟೋ, ಸೆಲ್ಫಿ ಕ್ಲಿಕ್​ ಮಾಡಿಕೊಳ್ಳುವುದು, ವಿಡಿಯೋ ತೆಗೆಯುವ ಸ್ವಭಾವ ಇರುವವರಿಗೆ ಮೊಬೈಲ್​ ಫೋನ್​ನಲ್ಲಿ ಎಷ್ಟೇ ಮೆಮೋರಿ ಇದ್ದರೂ ಸಾಕಾಗುವುದಿಲ್ಲ. ಆ ಸಮಯದಲ್ಲಿ ಕೆಲವೊಮ್ಮೆ ಅನಗತ್ಯ ಎನ್ನಿಸಿರುವ ಫೋಟೋ, ವಿಡಿಯೋಗಳನ್ನು ಡಿಲೀಟ್​ ಮಾಡಿದರೂ ಮೆಮೊರಿ ಫುಲ್​ ಎಂದೇ ತೋರಿಸುತ್ತಿರುತ್ತದೆ. ಎಲ್ಲಿ, ಏನು ಮಾಡಿದರೂ ಒಂದು ಫೋಟೋ ಕ್ಲಿಕ್​ ಮಾಡುವ ಸಮಯದಲ್ಲಿಯೇ ಮತ್ತೆ memory full ಎಂದು ಬರುತ್ತದೆ. ಮೆಮೊರಿ ಎಲ್ಲಿ ತುಂಬಿರುತ್ತದೆ ಎಂದು ಹುಡುಕುವುದೇ ಕಷ್ಟ ಎಂದು ಎನ್ನಿಸುತ್ತದೆ.

ಈ ಟ್ರೀಕ್ಸ್​ ಫಾಲೋ ಮಾಡಿ

ಅಂಥ ಸಮಯದಲ್ಲಿ ನೀವು ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಮೆಮೊರಿ ಫುಲ್​ ಎನ್ನುವ ಸೂಚನೆ ಬರುವುದಿಲ್ಲ. ನೀವು ವಿಡಿಯೋ, ಫೋಟೋ ಎಲ್ಲವೂ ಡಿಲೀಟ್ ಮಾಡಿದ ಮೇಲೆ ಕೂಡ ಮೆಮೊರಿ ಎಲ್ಲಿ ಅಡಗಿ ಕುಳಿತಿದೆ ಎಂದು ಕಂಡು ಹಿಡಿಯಬೇಕು ಎಂದರೆ ನೀವು ಮಾಡಬೇಕಿರುವುದು ಇಷ್ಟು.

ಹಂತ ಹಂತದ ಮಾಹಿತಿ ಇಲ್ಲಿದೆ…

– ಮೊದಲಿಗೆ ಕ್ರೋಮ್​ಗೆ ಹೋಗಿ

– ಮೂರು ಡಾಟ್​​ ಮೇಲೆ ಕ್ಲಿಕ್​ ಮಾಡಿ

– ಅಲ್ಲಿ ಕಾಣಿಸುವ ಸೆಟ್ಟಿಂಗ್ಸ್​ ಮೇಲೆ ಕ್ಲಿಕ್​ ಮಾಡಿ

– ಕೆಳಭಾಗದಲ್ಲಿ ಸೈಟ್​ ಸೆಟ್ಟಿಂಗ್ಸ್​ (Site Settings) ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿ.

– ಇಲ್ಲಿ ಅತ್ಯಂತ ಕೊನೆಯಲ್ಲಿ ಡಾಟಾ ಸ್ಟೋರ್ಡ್​​ (data stored) ಎನ್ನುವುದರ ಮೇಲೆ ಕ್ಲಿಕ್​ ಮಾಡಿ

– ಅಲ್ಲಿ ನೀವು ಗೂಗಲ್​ ಕ್ರೋಮ್​ನಲ್ಲಿ ಯಾವೆಲ್ಲಾ ವೆಬ್​ಸೈಟ್​ಗೆ ಹೋಗಿದ್ದೀರೋ ಅವುಗಳನ್ನು ಪರಿಶೀಲಿಸಬಹುದು. ಎಲ್ಲವೂ ಅನಗತ್ಯ ಎನ್ನಿಸಿದರೆ ಒಟ್ಟಾಗಿ ಎಲ್ಲವನ್ನೂ ಡಿಲೀಟ್​ ಮಾಡಿ. ಇಲ್ಲದೇ ಹೋದರೆ ಮುಂದೆ ಕಾಣಿಸುವ ಮೂರು ಡಾಟ್​ ಮೇಲೆ ಕ್ಲಿಕ್​ ಮಾಡಿ ನಿಮಗೆ ಬೇಡದೇ ಇರುವ ವೆಬ್​ಸೈಟ್​ ಲಿಂಕ್​ ಡಿಲೀಟ್​ ಮಾಡಬಹುದು.

– ಇದರಿಂದ ನಿಮಗೆ ಒಂದಿಷ್ಟು ಜಾಗವು ಮೊಬೈಲ್​ನಲ್ಲಿ ಸಿಗುತ್ತದೆ. ಇದರಲ್ಲಿ ಅತಿಯಾದ ಜಾಗವೇನೂ ಸಿಗುವುದಿಲ್ಲ. ಆದರೆ ಇಂಟರ್​ನಲ್​ ಆಗಿ ಸ್ಟಾಕ್​ ಆಗಿರುವ ಕೆಲಮಟ್ಟಿನ ಜಾಗವು ಸಿಗುವ ಹಿನ್ನೆಲೆಯಲ್ಲಿ, ಮೆಮೊರಿ ಫುಲ್​ ಎನ್ನುವುದು ತೋರಿಸುವುದಿಲ್ಲ. ಜೊತೆಗೆ, ಫೋನ್​ ಕೂಡ ಸ್ಪೀಡ್​ ಆಗಿ ವರ್ಕ್​​ ಆಗುತ್ತದೆ.



Source link

Leave a Reply

Your email address will not be published. Required fields are marked *