ಶಿವಮೊಗ್ಗ/ಕಾರವಾರ, (ಫೆಬ್ರವರಿ 04): ನಿಮಗೆ ಸಾಡೇಸಾಥ್ ಆರಂಭವಾಗಿದೆ. ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಜನರಿಗೆ ಜ್ಯೋತಿಷಿ ಹೇಳಿದ್ದ ಕಮಲಾಕರ್ ಭಟ್‌ನ ಭವಿಷ್ಯವೇ ತಲೆಕೆಳಗಾಗಿದೆ. ಕೊಲೆ ಕೇಸ್‌ನಲ್ಲಿ ಎ3 ಕಮಲಾಕರ್ ಭಟ್ ಜೈಲುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೆಎಂಎಫ್‌ಸಿ ಕೋರ್ಟ್, ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಲಾಗಿದೆ. ಇನ್ನು ಕಮಲಾಕರ್ ಭಟ್ ಹಾಗೂ ಸುಚಿತ್ರಾಳ ಅಕ್ರಮ ಸಂಬಂಧದ ಬಗ್ಗೆ ಸಾಕಷ್ಟು ಬಯಲಾಗುತ್ತಿದೆ. ಜ್ಯೋತಿಷಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ ಸುಚಿತ್ರಾ, ಬಳಿಕ ಪರ್ಮನೆಂಟ್ ಆಗಿ ಆತನ ಮನೆಯವಳಾಗಿಬಿಟ್ಟಿದ್ದಳು. ನಂತರ ಮನೆಯಲ್ಲಿ ಏನೆಲ್ಲಾ ನಡೆಯುತ್ತಿತ್ತು ಎನ್ನುವುದನ್ನು ಸುಚಿತ್ರಾಳ ಪುತ್ರಿ ಬಯಲು ಮಾಡಿದ್ದಾಳೆ.
ಕೆಲಸಕ್ಕೆಂದು ಸೇರಿ ಲಿಂಗ್ ಟುಗೆದರ್
ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಇಬ್ಬರು ಬೆಂಗಳೂರಿನಲ್ಲಿ ಪರಿಚಿದ್ದು, ಬಳಿಕ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಜ್ಯೋತಿಷಿ ಸುಚಿತ್ರಾಳಿಗೆ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ ಹೀಗಾಗಿ ಸುಚಿತ್ರ 9 ತಿಂಗಳಿನಿಂದ ಶಿವಮೊಗ್ಗದ ಗುತ್ತೆಪ್ಪ ಕಾಲನಿಯ ಬಡಾವಣೆಯಲ್ಲಿ ಮಗಳೋಡಿಗೆ ಕಮಲಾಕರ್ ಭಟ್ ಜೊತೆ ವಾಸವಾಗಿದ್ದರು.
ಇದನ್ನೂ ಓದಿ: ಸ್ವಾಮೀಜಿ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ
ಸುಚಿತ್ರಾಳ ಐಷಾರಾಮಿ ಜೀವನ
ಬಾಡಿಗೆ ಮನೆ ಪಕ್ಕದಲ್ಲಿ ಒಂದು ಕನಸು ಎನ್ನುವ ಸ್ವಾಮೀಜಿ ಕಚೇರಿ ಇತ್ತು. ಸ್ವಾಮೀಜಿ ಹೀಗೆ ಕಚೇರಿ ಮತ್ತು ಸುಚಿತ್ರಾ ಮನೆ ಎರಡನ್ನು ನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಮೂರ್ನಾಲ್ಕು ದಿನ ಜ್ಯೋತಿಷಿ ಸುಚಿತ್ರಾ ಜೊತೆಯಲ್ಲೇ ಇರುತ್ತಿದ್ದ. ಹೀಗಿರುವಾಗ ಸುಚಿತ್ರಾಳದ್ದು ಐಷಾರಾಮಿ ಜೀವನ ಶುರುವಾಗಿದ್ದು ಜ್ಯೋತಿಷಿಯ ಎರಡು ಕಾರ್ ಗಳನ್ನು ಸುಚಿತ್ರ ಬಳಕೆ ಮಾಡುತ್ತಿದೆ. ಇನ್ನು ಸುಚಿತ್ರಾಳಿಗೆ ಹರ್ಷ ಎಂಬ ಕಾರು ಚಾಲಕನನ್ನು ಇಟ್ಟುಕೊಂಡಿದ್ದಳು.
ಜ್ಯೋತಿಷಿ-ತಾಯಿಯ ಮುಖವಾಡ ಕಳಚಿಟ್ಟ ಪುತ್ರಿ
ಇನ್ನು ಸುಚಿತ್ರಾಳ ಮಗಳು ಸುಮಾಶ್ರೀ ಟಿವಿ9 ಜತೆ ಮಾನಾಡಿದ್ದು, ತಾಯಿ ಹಾಗೂ ಗುರೂಜಿಯ ಮುಖವಾಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಳೆದ ಆರು ತಿಂಗಳಿಂದ ಶಿವಮೊಗ್ಗದಲ್ಲಿ ತಾಯಿ ಜೊತೆ ವಾಸವಾಗಿದ್ದು, ತಾಯಿ ಮತ್ತು ಕಮಲಾಕರ್ ಭಟ್ ಇಬ್ಬರು ಸೇರಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ.ಮನೆ ಬಿಟ್ಟು ಇಬ್ಬರು ಬಲವಂತ ಮಾಡುತ್ತಿದ್ದರು. ಈ ಹಿನ್ನಲೆ ನಾನು ತಂದೆಗೆ ಮಾಹಿತಿ ನೀಡಿದೆ. ತಂದೆಗೆ ಬರಲು ಸೂಚನೆ. ಅದರಂತೆ ನಾನು ಸಿದ್ದಾಪುರಕ್ಕೆ ಹೋಗಿ ದೂರು ಕೊಟ್ಟೆ. ನನ್ನ ತಂದೆ ಮತ್ತು ದೊಡ್ಡಪ್ಪ ಮೇಲೆ ಅಟ್ಯಾಕ್ ಮಾಡಿದ್ದು, ಘಟನೆಯಲ್ಲಿ ದೊಡ್ಡಪ್ಪ ಕಾಣಿಸಿಕೊಂಡಿದ್ದಾರೆ. ಗುರುಜಿ ಮತ್ತು ತಾಯಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾಳೆ.
ಇದನ್ನೂ ಓದಿ: ಕಮಲಾಕರ ಭಟ್ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಆಹಾರ ಸಾವು
ಸುಚಿತ್ರಾ ಸೇರಿ 7 ಆರೋಪಿಗಳಿಗೆ 8 ದಿನ ನ್ಯಾಯಾಂಗ ಬಂಧನ
ಜನರ ಭವಿಷ್ಯ ಹೇಳುತ್ತಾ ಬದುಕು ಕಟ್ಟಿಕೊಂಡ ಉತ್ತರಕನ್ನಡ ಜಿಲ್ಲೆಯ ಕಮಲಾಕರ್ ಭಟ್, ಸುಚಿತ್ರಾ ಅನ್ನೋ ಈ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಈ ಪ್ರಶ್ನೆ ಮಾಡ್ತಿದ್ದಂತೆ ಮೊನ್ನೆ ದೊಡ್ಡ ರದ್ಧಾಂತವೇ ಆಗಿದೆ. ಶಿವಮೊಗ್ಗದಿಂದ ನಾಲ್ಕೈದು ಹುಡುಗರನ್ನ ಕರೆದುಕೊಂಡು ಸಿದ್ದಾಪುರಕ್ಕೆ ಹೋಗಿದ್ದ ಕಮಲಾಕರ, ಸುಚಿತ್ರಾ ಪತಿ ಮಹೇಶ್ ಮೇಲೆ ಅಟ್ಯಾಕ್ ಮಾಡಿದ್ರು. ಈ ವೇಳೆ ತಡೆಯಲು ಬಂದ ಮಹೇಶ್ ಸಹೋದರ ವಸಂತನಿಗೆ ಚಾಕು ಹಾಕಿ ಕೊಲೆ ಮಾಡಿದ್ರು. ಸೋಮವಾರ ರಾತ್ರಿಯೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಜೆಎಂಎಫ್ ಸಿ ಕೋರ್ಟ್ ಮುಂದೆ ಹಾಜರು ಪಡಿಸಿದ್ರು. ನಡೆಸಿದ ಕೋರ್ಟ್ ಕಮಲಾಕರ್ ಭಟ್, ಸುಚಿತ್ರ ಸೇರಿದಂತೆ 7 ಆರೋಪಿಗಳಿಗೆ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.