‘ಜೋಗಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ಈಗ ‘ಘಾರ್ಗ’ (ಘರ್ಗ) ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ಶಶಿಧರ್ ಅವರು ನಿರ್ದೇಶನ ಮಾಡಿದ್ದಾರೆ. ‘ಎಲ್ಲಾ ಕಡೆ ಜೋಗಿ ಸಿನಿಮಾಗೆ ಪ್ರಚಾರ ಮಾಡಿದ್ದೆ. ಎಲ್ಲವುಗಳಲ್ಲಿ ಪೋಸ್ಟರ್ ಹಾಕಿಸಿದ್ದೆ. ಈಗ ಆ ಟ್ರೆಂಡ್ ಇಲ್ಲ. ಎಲ್ಲವೂ ಡಿಜಿಟಲ್ ಆಗಿದೆ. ಈ ಸಿನಿಮಾದ ಕಥೆ ಕೇಳಿದಾಗಲೇ ನನಗೆ ಇಷ್ಟ ಆಯಿತು. ಕಾಂಟೆಂಟ್ ಏನೇ ಆದರೂ ಮೊಬೈಲ್ ಮೂಲಕ ಎಲ್ಲ ಕಡೆ ವೈರಲ್ ಆಗುತ್ತದೆ. ನಿರ್ದೇಶಕರಿಗೆ ಮತ್ತು ಮಗನಿಗೆ ಅದರ ಎಲ್ಲ ಜವಾಬ್ದಾರಿ ಕೊಟ್ಟಿದ್ದೇನೆ. ಯೂಟ್ಯೂಬ್ ಮೂಲಕ ಚೆನ್ನಾಗಿ ಪ್ರಚಾರ ಆಗುತ್ತಿದೆ’ ಎಂದು ಅಶ್ವಿನಿ ರಾಮ್ ಪ್ರಸಾದ್ ಹೇಳಿದ್ದಾರೆ (ಅಶ್ವಿನಿ ರಾಮ್ ಪ್ರಸಾದ್) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.