
ಈ ದಿನ ನಿಮ್ಮಿಂದ ಸಾಧ್ಯವಾದಾಗ ಕನಿಷ್ಠ ಹನ್ನೊಂದು ಬಾರಿ ಮೃತ್ಯುಂಜಯ ಮಂತ್ರವನ್ನು ಹೇಳಿಕೊಳ್ಳಿ. ಅದು ಸಾಧ್ಯವಾಗದಿದ್ದಲ್ಲಿ ಯೂಟ್ಯೂಬ್ ಅಥವಾ ಬೇರೆ ಯಾವುದಾದರೂ ಮಾಧ್ಯಮದ ಮೂಲಕ ಹನ್ನೊಂದು ಬಾರಿ ಮೃತ್ಯುಂಜಯ ಮಂತ್ರವನ್ನು ಕೇಳಿಸಿಕೊಳ್ಳಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಈ ದಿನ ನಿಧಾನವಾಗಿ ಶುರುವಾಯಿತು ಎಂದೆನಿಸಿದರೂ ಮಧ್ಯಾಹ್ನದಿಂದ ನಿಮ್ಮ ಚಟುವಟಿಕೆ. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ, ಹೊಸ ಕೆಲಸ- ಕಾರ್ಯಗಳಿಗೆ ಗಮನ ನೀಡಲು ಅವಕಾಶ ದೊರೆಯಲಿದೆ. ಒಂದು ಕೆಲಸ ಮಾಡಿಕೊಟ್ಟಿದ್ದೀರಿ, ಹಿಂದಿನ ಬಾಕಿ ಬಿಲ್‌ಗಳು ಉಳಿದುಹೋಗಿವೆ ಎಂದಾದಲ್ಲಿ ಅದರ ವಸೂಲಾತಿಗೆ ಏನು ಮಾಡಬೇಕು ಎಂಬ ಬಗ್ಗೆ ನಿಮ್ಮ ಗಮನ ನೀಡಲಾಯಿತು.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಇನ್ನು ನೀವು ಬೇರೆಯವರಿಗೆ ಕೊಡಬೇಕಾದ ಹಣ ಉಳಿದು ಹೋಗಿದ್ದರೆ ಸಮಯಕ್ಕೆ ಸಿಗುವುದು ಒಳ್ಳೆಯದು. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಸಂತಸದ ಸುದ್ದಿ ಬರುತ್ತದೆ. ಸಂಗಾತಿಗೆ ಚಿಕ್ಕ- ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ. ನಿಮ್ಮ ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರಲಿದ್ದಾರೆ. ಗ್ಯಾಜೆಟ್‌ಗಳು ಖರೀದಿಸಬೇಕಿದ್ದಲ್ಲಿ ಆತುರ ಬೇಡ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಒಂದಲ್ಲಾ ಒಂದು ಕಾರಣಕ್ಕಾಗಿ ನೀವು ಮಾಡಬೇಕು ಎಂದುಕೊಂಡ ಕೆಲವು ಕೆಲಸಗಳು ವಿಳಂಬವಾಗುವ ಸಾಧ್ಯತೆಯಿದೆ. ಹಾಗಂತ ಆತುರ ಮಾಡುವ ಅಗತ್ಯವಿಲ್ಲ. ಹಣಕಾಸಿನ ವಿಷಯದಲ್ಲಿ ಎಲ್ಲರೂ ಸಲಹೆ ನೀಡುವದನ್ನು ಪಾಲಿಸಬೇಕು. ಒಂದು ವೇಳೆ ಅವು ಪ್ರಯೋಜನಕ್ಕೆ ಬಾರದು ಎಂದೆನಿಸಿದರೆ ಕೇಳಿಸಿಕೊಳ್ಳುವ ಅಗತ್ಯವೂ ಇಲ್ಲ.
ಲೇಖನ- ಸ್ವಾತಿ ಎನ್.ಕೆ.