ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 5ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 5ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 5ರ ದಿನಭವಿಷ್ಯ

ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರು, ಹೊಸದಾಗಿ ವ್ಯವಹಾರ- ವ್ಯಾಪಾರ ಆರಂಭಿಸಿರುವವರು ಅಥವಾ ಪ್ರಾರಂಭಿಸಿರುವವರು ಸಿಟ್ರಿನ್ ಎಂಬ ರತ್ನದ ಉಂಗುರ ಧಾರಣೆ ಮಾಡುವುದರಿಂದ ಸಮರ್ಥ ಸಾಮರ್ಥ್ಯ, ಸವಾಲುಗಳನ್ನು ಎದುರಿಸುವ ಮಾರ್ಗೋಪಾಯ ಗೋಚರವಾಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಯಾರನ್ನೋ ಸಮಾಧಾನ ಮಾಡಬೇಕು- ಮನವೊಲಿಸುವ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸನ್ನು ವ್ಯರ್ಥವಾಗಿ ವೆಚ್ಚ ಮಾಡುವುದಕ್ಕೆ ಹೋಗಬೇಡಿ. ಕುಟುಂಬದಲ್ಲಿನ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮನಸ್ಸಿಗೆ ತೃಪ್ತಿ- ಸಮಾಧಾನ ದೊರೆಯಲಿದೆ. ಸ್ನೇಹಿತರು ನೀಡುವ ಸಲಹೆಯನ್ನು ಅಳವಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿ. ಕತ್ತು–ಭುಜದ ನೋವು ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಮಾಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನೀವು ದಿನವನ್ನು ಆರಂಭಿಸುವ ರೀತಿಯೇ ಉತ್ಸಾಹಭರಿತವಾಗಿ ಇರುತ್ತದೆ. ನಿಮ್ಮ ಮನಸ್ಸಿಗೆ ಅನಿಸಿದಂಥ ಕೆಲವು ಕೆಲಸಗಳನ್ನು ತಕ್ಷಣವೇ ಪೂರ್ಣ ಮಾಡುವುದಕ್ಕೆ ಆದ್ಯತೆಯನ್ನು ನೀಡಿ. ಆದರೆ ಮುಖ್ಯವಾದ ವಿಚಾರವೊಂದರ ಬಗ್ಗೆ ತಕ್ಷಣವೇ ನಿರ್ಧಾರ ಹೇಳಬೇಕು ಎಂಬ ಒತ್ತಡ ಹೇರಿದ ಮೇಲೆ ಅದಕ್ಕಾಗಿ ಕೇಳಿ. ಉದ್ಯೋಗಕ್ಕೆ ಸಣ್ಣದಾಗಿ ನಿಮ್ಮ ಸಹೋದ್ಯೋಗಿಗಳ ಜೊತೆಗೆ–ಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನವ ವಿವಾಹಿತರಲ್ಲಿ ಸಂಗಾತಿಯೊಂದಿಗೆ ದೂರ ಪ್ರಯಾಣಕ್ಕೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾ ಇದ್ದಲ್ಲಿ, ನೀವು ಮಾಡುವ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಗುವ ಸೂಚನೆ ದೊರೆಯುತ್ತದೆ. ಆರೋಗ್ಯದಲ್ಲಿ ಕೆಲವು ಏಳುಪೇರು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ತಲೆಸುತ್ತು– ಕಣ್ಣಿನ ರೆಪ್ಪೆ ಭಾರವಾಗುವುದು ಈ ರೀತಿ ತೊಂದರೆ ಆಗಬಹುದು.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *