ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 5ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 5ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 5ರ ದಿನಭವಿಷ್ಯ

ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವವರು, ಅಥವಾ ಪ್ರಯತ್ನ ಮಾಡುವಾಗ ನಾನಾ ಕಾರಣಗಳಿಗೆ ಅಡೆತಡೆಗಳನ್ನು ಎದುರಿಸುತ್ತಾ ಇರುವವರು ಸ್ವಯಂವರ ಪಾರ್ವತಿ ಮಂತ್ರವನ್ನು ಹನ್ನೊಂದು ಬಾರಿ ಪಠಣ ಮಾಡಿ ಅಥವಾ ಶ್ರವಣ ಮಾಡಿ. ದಂಪತಿಗಳು ಅಥವಾ ಪ್ರೇಮಿಗಳ ಮಧ್ಯೆ ವಿರಸ ಏರ್ಪಟ್ಟಿದ್ದಲ್ಲಿ ಈ ದಿನ ಶಿರಡಿ ಸಾಯಿಬಾಬ ಮಂದಿರಕ್ಕೆ ತೆರಳಿ ದರ್ಶನ ಪಡೆಯಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಈ ದಿನ ನೀವು ನಿರೀಕ್ಷಿಸುವ ರೀತಿಯಲ್ಲಿ ವೃತ್ತಿಜೀವನದಲ್ಲಿ ತಿರುವು ಬರುವ ಸಾಧ್ಯತೆಯಿದೆ. ಮನೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಇದು ಉತ್ತಮ ದಿನವಾಗಿರುತ್ತದೆ. ಸಮಾರಂಭ- ಗೆಟ್ ಟು ಗೆದರ್ ಗೆ ಆಹ್ವಾನ ಬರಬಹುದು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗ್ರತೆ ಅವಶ್ಯ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹೊಸ ಸಾಲ ತೆಗೆದುಕೊಳ್ಳುವ ನಿರ್ಧಾರ ಸಾಧ್ಯವಾದಷ್ಟೂ ಬೇಡ. ಅನಿರೀಕ್ಷಿತವಾಗಿ ವಾಹನದ ರಿಪೇರಿ ಅಥವಾ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ಬರಬಹುದು. ಪ್ರೀತಿಯಲ್ಲಿ ಇರುವವರಿಗೆ ಜತೆಯಾಗಿ ಸಮಯ ಕಳೆಯುವಂಥ ಯೋಗ ಇದ್ದು, ಭವಿಷ್ಯದಲ್ಲಿನ ಯೋಜನೆಗಳ ಬಗ್ಗೆ ತುಂಬ ಘನವಾದ ಚರ್ಚೆಯನ್ನು ನಡೆಸಲಾಯಿತು. ಅದು ಆತ್ಮೀಯವಾದ ಸಂಭಾಷಣೆ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಬಹಳ ದಿನಗಳಿಂದ ಬಾಕಿ ಉಳಿದುಹೋಗಿದ್ದ ಮಾಹಿತಿ ಅಥವಾ ಹಣ ನಿಮ್ಮ ಕಡೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಮಹತ್ವ ಸಿಗುತ್ತದೆ. ಮನೆ ಬದಲಾವಣೆ ಎಂದಿರುವವರು ಅಥವಾ ಮನೆಯ ಜಾಗಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆಲೋಚನೆ ಮಾಡುತ್ತಾ ಇರುವವರಿಗೆ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *