ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಶತ್ರುಪಕ್ಷದಿಂದ ಆಹ್ವಾನ, ಅವ್ಯಕ್ತ ಭಯ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಶತ್ರುಪಕ್ಷದಿಂದ ಆಹ್ವಾನ, ಅವ್ಯಕ್ತ ಭಯ


ಮೇಷ ರಾಶಿ:

ನಿಮ್ಮ ವೃತ್ತಿ ಸ್ಥಳವು ಬದಲಾಗಬಹುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡಿತು. ನಿಮ್ಮ ಪರೀಕ್ಷೆಯ ಕಾಲವೂ ಇದೆ. ತಂದೆಯ ಸೇವೆಯನ್ನು ಮಾಡಿರಿ. ಶ್ರಮಕ್ಕೆ ಯೋಗ್ಯವಾದ ಫಲವನ್ನೇ ನಿರೀಕ್ಷಿಸಿ. ಇತರರ ಯೋಚನೆಯನ್ನು ಕಡಿಯಬಹುದು. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ.

ವೃಷಭ ರಾಶಿ:

ಸಾವಧಾನತೆಯನ್ನು ನೀವು ತೆಗೆದುಕೊಳ್ಳಬೇಕಾದೀತು. ನಿಮ್ಮ ನಾಟಕೀಯ ಮನೋಭಾವವು ಇತರರಿಗೆ ಗೊತ್ತಾದೀತು. ಮಕ್ಕಳಿಗೆ ತಂದೆಯಿಂದ ಸಹಾಯ ಸಿಗಬಹುದು. ಕಾರ್ಯಗಳು ಸಮಯಮಿತಿಯನ್ನು ಮೀರಿ ವಿಳಂಬವು ನಿಮಗೆ ಇಷ್ಟವಾಗದು. ಅನಾರೋಗ್ಯದಿಂದ ನೀವು ಗುಣಮುಖರಾದರೂ ಪೂರ್ಣ ಹೊರ ಬರಲು ಆಗದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿ ಕಡಿಮೆ ಆಗುವುದು. ಇಂದಿನ ಪ್ರಯಾಣವನ್ನು ಅನಿವಾರ್ಯವಾದರೆ ಮಾತ್ರ ಮಾಡಿ.

ಮಿಥುನ ರಾಶಿ:

ಸ್ಮರಣಶಕ್ತಿಯ ಕೊರತೆಯು ಅಧಿಕವಾಗಿ ಕಾಡಬಹುದು. ಸೌಂದರ್ಯದ ಬಗ್ಗೆ ಅತಿಯಾದ ಕಳವಳ ಕಾಣಿಸುವುದು. ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ಇರುವುದು. ಬಂಧುಗಳು ನಿಮ್ಮ ಬಗ್ಗೆ ಔದಾರ್ಯ ತೋರಿಸುವರು. ಸಹಾಯವೂ ಸಿಗಬಹುದು. ನಿಮ್ಮ ಸರಳತೆಯನ್ನು ಆಡಿಕೊಳ್ಳುತ್ತಾರೆ. ಯಾರನ್ನೂ ದೂಷಿಸುತ್ತ ಇರಬೇಡಿ, ಇತರರಿಗೆ ಹಣವನ್ನು ಕೊಡುವಾಗ ವ್ಯಕ್ತಿತ್ವದ ಬಗ್ಗೆ ಗಮನವಿರಲಿ. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕು ತಪ್ಪಾದೀತು.

ಕರ್ಕಾಟಕ ರಾಶಿ:

ನಿಮ್ಮ ಮಾತುಗಳಿಂದ ಅನರ್ಥವಾಗುವಂತೆ. ಇಂದು ನಿಮಗೆ ಮಾತನಾಡುವ ಅವಕಾಶ ಸಿಕ್ಕರೆ ಮಿತವಾಗಿ ಆಡಬೇಕಾದೀತು. ಅಗತ್ಯವಿರುವಷ್ಟೇ ಆಹಾರವನ್ನು ಪಡೆದುಕೊಳ್ಳಿ. ಯಾರ ಸಹವಾಸವೂ ಬೇಡವೆನಿಸಬಹುದು. ಮೋಹದಲ್ಲಿ ನೀವು ಬೀಳುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ತಂತ್ರವನ್ನು ಪ್ರಯೋಗಿಸಿ. ನಿಮ್ಮ ಬಗ್ಗೆ ನಿಮ್ಮೆದುರೇ ಆಡಿಕೊಳ್ಳುವರು. ಸಿಟ್ಟು ಬಂದರೂ ನಿಯಂತ್ರಣ ಮಾಡಿಕೊಳ್ಳುವಿರಿ.

ಸಿಂಹ ರಾಶಿ:

ಸುಮ್ಮನೆ ಮೊಂಡು ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಾರೆ. ನಿಮ್ಮದಲ್ಲದ ವಿಷಯವೂ ನಿಮ್ಮನ್ನು ಕಾಡುವುದು. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಸಂಗಾತಿಯು ದೂರ ಪ್ರಯಾಣ ಮಾಡಲು ಆಹ್ವಾನಿಸಬಹುದು. ಯಾರ ಬಗ್ಗೆಯೂ ಸುಮ್ಮನೆ ಮಾತನಾಡುವುದು ಬೇಡ. ವಿವಾಹ ಜೀವನಕ್ಕೆ ಒಗ್ಗಿಕೊಳ್ಳಿ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು.

ಕನ್ಯಾ ರಾಶಿ:

ಇಂದು ಯಾರನ್ನೂ ನೋಯಿಸಲು ಮನಸ್ಸಾಗದು. ಸ್ತ್ರೀಯರಿಗೆ ಹೆಚ್ಚು ಅಭದ್ರತೆಯು ಕಾಣಿಸಿಕೊಳ್ಳಬಹುದು. ಇಂದು ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಕರಹಿತವಾಗಿ ಮಾಡಿರಿ. ಕಪಟಿಯ ಪಟ್ಟವೂ ನಿಮಗೆ ಸಿಗಬಹುದು. ಸರ್ಕಾರಿ ಕಾರ್ಯದಲ್ಲಿ ವಿಳಂಬ. ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಎಂದು ಬಿಟ್ಟರೂ ಕೆಲಸವು ಮಾತ್ರ ಬೇಡ ನಿಮ್ಮನ್ನು ಬಿಡದು.

ತುಲಾ ರಾಶಿ:

ಉದ್ಯೋಗದಲ್ಲಿ ನಿಮಗೆ ಕೈಬಿಡುವರೆಂಬ ಭಯ ಕಾಡುವುದು. ಭೂಮಿಯ ಖರೀದಿಯಲ್ಲಿ ಗೊಂದಲ ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಪೂರ್ಣ ವಿಶ್ವಾಸ ಬರುವವರೆಗೆ ಆರ್ಥಿಕ ವ್ಯವಹಾರದಲ್ಲಿ ಮುಂದುವರಿಯುವುದು ಬೇಡ. ವೃತ್ತಿಯಲ್ಲಿ ಇಂದು ಆಡಿದ ಮಾತು ನಿಮ್ಮನ್ನು ವಿಚಲಿತಗೊಳಿಸಬಹುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ.

ವೃಶ್ಚಿಕ ರಾಶಿ:

ವಿವಾಹಕ್ಕೆ ಉಂಟಾದ ದೋಷಗಳನ್ನು ದೈವಜ್ಞರಿಂದ ಪರಿಹರಿಸಬಹುದು. ನಿಮ್ಮ ಬಗ್ಗೆ ಮಾಹಿತಿಯನ್ನು ಅನ್ಯರಿಂದ ಪಡೆದುಕೊಳ್ಳುವರು. ನಿಮಗೆ ಅಭದ್ರತೆಯು ಅತಿಯಾಗಿ ಕಾಡಬಹುದು. ವ್ಯಾಪಾರದಲ್ಲಿ ಮನೆಯವರ ತೊಡಗುವಿಕೆಯಿಂದ ಒತ್ತಡ ನಿವಾರಣೆಯಾಗುವುದು. ಹಿಂದೆ ಮುಂದೆ ಯೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ.

ಧನು ರಾಶಿ:

ನಿಮ್ಮ ಕೆಲಸಗಳೇ ಮಾತಾಡಿದರೆ ಶ್ರೇಯಸ್ಸು ಹೆಚ್ಚು. ಕುಟುಂಬದ ಅಸ್ಮಿತೆಯನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧರಿಸಬೇಕಾದೀತು. ನೀವು ಸಾಧಿಸಲು ಶ್ರಮಿಸುತ್ತಿರುವ ಫಲಿತಾಂಶವು ಯೋಗ್ಯವಾಗಿ ಲಭಿಸಲಿದೆ. ಅಹಿತಕರ ಸುದ್ದಿಯಿಂದ ವಿಚಲಿತರಾಗಬೇಕಿಲ್ಲ. ನಿಮಗೆ ಇಂದು ಕೈ ಹಾಕಿದ ಕಾರ್ಯದಲ್ಲಿ ಜಯದ ನಿರೀಕ್ಷೆ ಮಾಡಬಹುದು. ಸಂಪತ್ತಿನ ವಿಚಾರಕ್ಕೆ ಕುಟುಂಬ ಸಮರಾಂಗಣವಾದೀತು. ಸಹೋದರನ ಬೆಂಬಲವಿದ್ದರೂ ನಿಮಗೆ ಸ್ವಾಭಿಮಾನದಿಂದ ಹೊರಬರಲು ಆಗದು.

ಮಕರ ರಾಶಿ:

ನಾಯಕರಾದ ನಿಮ್ಮಿಂದ ಜನರು ಹೊಸತನವನ್ನು ನಿರೀಕ್ಷಿಸುತ್ತಾರೆ. ಇದರಿಂದ ನಿಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ಸಮಾಧಾನವನ್ನು ಪಡೆಯಲು ಸಾಧ್ಯ. ದೇವರಲ್ಲಿ ಭಕ್ತಿಯು ಅಧಿಕವಾದೀತು. ಮಕ್ಕಳಿಗೆ ಶಿಸ್ತನ್ನು ಹೇಳುತ್ತಾರೆ. ನಿಮ್ಮ ಮನಸ್ಸನ್ನು ಬಹಳ ವಿಚಲಿತಗೊಳಿಸುವುದು ಸ್ಥಿರತೆಯನ್ನು ತಂದುಕೊಳ್ಳುವುದು ಕಷ್ಟವಾಯಿತು. ನಿಕಟವರ್ತಿಗಳ ಸಂಕಟಕ್ಕೆ ಸ್ಪಂದಿಸುವ ಹೊಣೆಗಾರಿಕೆಯೂ ನಿಮ್ಮದೇ ಆಗಲಿದೆ. ನಿಮ್ಮ ಆಸ್ತಿಯನ್ನು ಪಡೆಯಲು ಕಾನೂನು ರೀತಿಯಲ್ಲಿ ಹೋಗುವರು. ಮನೆಗೆ ದಂಪತಿಗಳನ್ನು ಕರೆದು ಸತ್ಕಾರ ಮಾಡಿ.

ಕುಂಭ ರಾಶಿ:

ನಿರುದ್ಯೋಗಿಗಳು ಉದ್ಯಮದ ಕಡೆಯಿಂದ ಉತ್ತರಕ್ಕಾಗಿ ಕಾಯುವಿರಿ. ಆರೋಗ್ಯದಲ್ಲಿ ಅಸಮಾಧಾನ ಇರಲಿದೆ. ಮಾತಾನಾಡುವ ಭರದಲ್ಲಿ ಏನಾದರೂ ಹೇಳಬಹುದು. ಕೇವಲ ಬಾಯಿ ಮಾತಿನಲ್ಲಿ ವ್ಯವಹಾರವನ್ನು ಮಾಡಿ ಮುಂದುವರಿಸುವುದು ಬೇಡ. ಅವರಸದಲ್ಲಿ ಏನನ್ನೂ ಖರೀದಿಸುವುದು ಬೇಡ. ನಿಮ್ಮ ಸಲಹೆಯನ್ನು ಅಧಿಕಾರಿಗಳು ಸ್ವೀಕರಿಸಬಹುದು. ನೀವು ಇಂದು ಎಲ್ಲರ ಜೊತೆ ಅಲ್ಪವಾಗಿ ಮಾತನಾಡುವಿರಿ.

ಮೀನ ರಾಶಿ:

ನಿಮ್ಮ ನಿಯಮಗಳು ಒಂದೊಂದಾಗಿಯೇ ಜಾರಿಗೆ ತರಲು ಪ್ರಯತ್ನಿಸಿದರೂ ಸಫಲತೆ ಕಂಡುಬರುತ್ತದೆ. ಕೆಲವು ಕೆಟ್ಟ ಸುದ್ದಿಗಳು ಮನಸ್ಸಿನಲ್ಲಿ ಹತಾಶೆಯ ಸ್ಥಿತಿಯನ್ನು ಬಿಡಬಹುದು. ಇಂದಿನ ಖರ್ಚು ನಿಮ್ಮ ಜೇಬಿಗೆ ಭಾರವಾದೀತು. ಶತ್ರುಗಳ ತೊಂದರೆಯಿಂದ ನಿರ್ಮಾಣ ಕಾರ್ಯವು ನಿಧಾನ ಕಾರ್ಯ. ಕೆಲವು ಸಂಗತಿಗಳನ್ನು ಆಲೋಚಿಸಿದಷ್ಟೂ ಕ್ಲಿಷ್ಟವೆನಿಸಬಹುದು. ಅದರ ಬಗ್ಗೆ ಏನನ್ನೂ ಯೋಚಿಸುವುದು ಬೇಡ. ತಾನಾಗಿಯೇ ಉತ್ತರ ದೊರೆಯುವುದು.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಕಾರ್ಯಕ್ರಮ : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತೃತೀಯ, ನಿತ್ಯನಕ್ಷತ್ರ : ಹಸ್ತಾ, ಯೋಗ : ಶೋಭನ, ಕರಣ : ವಣಿಜ, ೨ – ಸೂರ್ಯ ೨ – ೬೦ – ೪. pm, ಇಂದಿನ ಶುಭಾಶುಭ ಕಾಲ : ರಾಹು 14:05 – 15:31, ಯಮಗಂಡ ಕಾಲ 06:53 – 08:19, ಗುಳಿಕ ಕಾಲ 09:46 – 11:12

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *