ಉಚಿತ ಹೆಲ್ಮೆಟ್ ಪಡೆಯಲು ಪ್ರವಾಹದಂತೆ ಮುಗಿಬಿದ್ದ ಜನ: ಲಾರಿಯನ್ನೇ ಏರಿ ಹೇಗೆ ದೋಚುತ್ತಿದ್ದಾರೆ ನೋಡಿ!

ಉಚಿತ ಹೆಲ್ಮೆಟ್ ಪಡೆಯಲು ಪ್ರವಾಹದಂತೆ ಮುಗಿಬಿದ್ದ ಜನ: ಲಾರಿಯನ್ನೇ ಏರಿ ಹೇಗೆ ದೋಚುತ್ತಿದ್ದಾರೆ ನೋಡಿ!


ಉಚಿತ ಹೆಲ್ಮೆಟ್ ಪಡೆಯಲು ಮುಗಿದ ಜನಚಿತ್ರದ ಕ್ರೆಡಿಟ್ ಮೂಲ: tv9

ಕೋಲಾರ, ಫೆಬ್ರವರಿ 5: ಕೋಲಾರ (ಕೋಲಾರ) ಜಿಲ್ಲೆಯ ಮುಳಬಾಗಿಲು ಪಟ್ಟಣದ ಮೈದಾನ ಜಾತ್ರೆಯಂತಾಗಿತ್ತು. ಡಿಸೆಂಬರ್ 1 ರಿಂದ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್ ಜಾರಿ ಮಾಡಲಾಗಿದೆ. ಹೀಗಾಗಿ ಮುಳಬಾಗಿಲು (ಮುಳಬಾಗಿಲು) ಬ್ಲಾಕ್ ಕಾಂಗ್ರೆಸ್ (ಕಾಂಗ್ರೆಸ್) ಅಧ್ಯಕ್ಷ, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆದಿನಾರಾಯಣ ನೇತೃತ್ವದಲ್ಲಿ ಬುಧವಾರ 25 ಸಾವಿರ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ನಡೆಯಿತು. ಜೀವಸಂಜೀವಿನಿ ಕಾರ್ಯಕ್ರಮಕ್ಕೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದ್ದಾರೆ.

ಬೈಕ್‌ಗಳಲ್ಲಿ ಬಂದಿದ್ದ ಸವಾರರಿಗೆ ಹೆಲ್ಮೆಟ್ ವಿತರಿಸಲು 16 ಕೌಂಟರ್ ಓಪನ್ ಮಾಡಲಾಗಿದೆ. ಆದರೆ, ಉಚಿತ ಹೆಲ್ಮೆಟ್ ಪಡೆಯಲು ಜನ ‘ನಾ ಮುಂದು ತಾ ಮುಂದು’ ಎಂದು ಮುಗಿಬಿದ್ದರು. ಕೆಲವರಂತೂ ಕ್ಯಾಂಟರ್‌ಗಳನ್ನೇ ಏರಿ ಕೈಗೆ ಸಿಕ್ಕ ಹೆಲ್ಮೆಟ್‌ಗಳನ್ನು ಕೊಂಡೊಯ್ದರು. ಉಚಿತ ಹೆಲ್ಮೆಟ್ ಕೊಡುವ ಸುದ್ದಿ ಕೇಳುತ್ತಿದ್ದಂತೆಯೇ ಮುಳಬಾಗಿಲು ತಾಲೂಕಿನ ಜನ ಸುನಾಮಿಯಂತ ನುಗ್ಗಿ ಬಂದರು.

ಉಚಿತ ಹೆಲ್ಮೆಟ್ ಮುಗಿದ ಜನ: ವಿಡಿಯೋ ನೋಡಿ

20 ರಿಂದ 25 ಸಾವಿರ ಉಚಿತ ಹೆಲ್ಮೆಟ್ ಕೊಡುವ ಯೋಜನೆ ಇದಾಗಿತ್ತು. ಆದರೆ 30 ಸಾವಿರಕ್ಕೂ ಹೆಚ್ಚು ಜನ ಲಗ್ಗೆ ಇಟ್ಟ ಮೈದಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಜನ ಸರದಿ ಬಿಟ್ಟು ಸಿಕ್ಕಿಸಿಕ್ಕ ಕಡೆಯಿಂದ ನುಗ್ಗಿ ಲಾರಿಗಳಲ್ಲಿ ತುಂಬಿಟ್ಟಿದ್ದ ಹೆಲ್ಮೆಟ್ ಬಾಕ್ಸ್‌ಗಳನ್ನು ಹೊತ್ತೊಯ್ದರು. ಇನ್ನು ಹೆಲ್ಮೆಟ್ ಪಡೆಯಲು ಸರದಿಯಲ್ಲಿ ನಿಂತಿದ್ದ ಸಾವಿರಾರು ಜನ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆದರು.

ಇದನ್ನೂ ಓದಿ: ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಸರ್ವೀಸ್ ಸೆಂಟರ್, 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಕಾರುಗಳು ಭಸ್ಮ

ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಬೈಕ್ ಸವಾರರ ಜೀವ ಉಳಿಸುವುದೇನೋ ನಿಜ. ಆದರೆ, ಉಚಿತ ಸಿಗುತ್ತದೆ ಎಂದು ಜನ ಜೀವವನ್ನೇ ಪಣಕ್ಕಿಟ್ಟು ಮುಗಿಸಿದ್ದು ವಿಪರ್ಯಾಸ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *