‘ಟಾಕ್ಸಿಕ್’ ಟೀಸರ್ (ವಿಷಕಾರಿ ಚಲನಚಿತ್ರ) ರಿಲೀಸ್ ಆದಾಗ ಶುರುವಾದ ಒಂದು ಹಲ್ಚಲ್ ಇದೆಯಲ್ಲ ಅದು ತುಂಬಾನೇ ದೊಡ್ಡದು. ಈ ಟೀಸರ್ ನಲ್ಲಿ ಬಂದ ಯಾರೂ ನೋಡದ ದೃಶ್ಯದಿಂದ ಟೀಸರ್ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಆಯಿತು. ಆದರೆ, ‘ಧುರಂಧರ 2’ ಸಿನಿಮಾದ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಎರಡೂ ಟೀಸರ್ ವೀಕ್ಷಣೆಯ ವೀವ್ಸ್ ನೋಡಿದರೆ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ, ಯಾವ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎಂಬುದು ಸ್ಪಷ್ಟವಾಗಿದೆ.
‘ಟಾಕ್ಸಿಕ್’ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅಂದು ಯಶ್ ಜನ್ಮದಿನ. ಈ ಟೀಸರ್ 24 ಗಂಟೆಯಲ್ಲಿ ಯೂಟ್ಯೂಬ್ ಒಂದರಲ್ಲಿ ಸುಮಾರು 50 ಮಿಲಿಯನ್ ವೀವ್ಸ್ ಕಂಡಿತ್ತು. ಅಂದರೆ 5 ಕೋಟಿ. ಇದು ಟಾಕ್ಸಿಕ್ ಚಿತ್ರದ ನಿಜವಾದ ಕ್ರೇಜ್ ಏನೆಂದು ತೋರಿಸಿತ್ತು. ಈ ಟೀಸರ್ ಈವರೆಗೆ 97 ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಹೆಚ್ಚುಗಾರಿಕೆ.
ಇದನ್ನೂ ಓದಿ: ‘ಜನ ನಾಯಕನ್’, ‘ಟಾಕ್ಸಿಕ್’ ನಂತರ ‘ಕೇಡಿ’ ಚಿತ್ರಕ್ಕೆ ಬಂದೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ
ಆದರೆ, ಈ ದಾಖಲೆಯ ಹತ್ತಿರ ಬರಲು ‘ಧುರಂಧರ 2’ ಟೀಸರ್ ಬಳಿ ಸಾಧ್ಯವಾಗಿಲ್ಲ. ಹಿಂದಿ ಟೀಸರ್ 24 ಗಂಟೆಯಲ್ಲಿ 9 ಮಿಲಿಯನ್ ಕಡಿಮೆ ವೀಕ್ಷಣೆ ಕಂಡಿದೆ. ಇನ್ನು, ಉಳಿದ ಭಾಷೆಯ ಟೀಸರ್ ಸೇರಿಸಿದರೆ ಹೆಚ್ಚುವರಿಯಾಗಿ ಎರಡು ಮಿಲಿಯನ್ ಸೇರ್ಪಡೆ ಆಗಬಹುದು. ಅಂದರೆ, ಈವರೆಗೆ ಟೀಸರ್ 11 ಮಿಲಿಯನ್ ವೀಕ್ಷಣೆ ಕಂಡಿರಬಹುದು. ‘ಟಾಕ್ಸಿಕ್’ ಟೀಸರ್ ಕಂಡ 50 ಮಿಲಿಯನ್ ವೀಕ್ಷಣೆ ಎಲ್ಲಿ, ‘ಧುರಂಧರ 2′ ಕಂಡ 11 ಮಿಲಿಯನ್ ವೀಕ್ಷಣೆ ಎಲ್ಲಿ’ ಎಂದು ಕನ್ನಡ ಸಿನಿಪ್ರಿಯರು ಕೇಳುತ್ತಿದ್ದಾರೆ.
ಟಾಕ್ಸಿಕ್ 24 ಗಂಟೆಗಳ ಕ್ಯಾರೆಕ್ಟರ್ ಇಂಟ್ರೋ ಟೀಸ್ 48.72M+ ವೀಕ್ಷಣೆಗಳು 1.1M+ ಇಷ್ಟಗಳು#ಧುರಂಧರ ಪ್ರತೀಕಾರ 24 ಗಂಟೆಗಳಲ್ಲಿ ಸಂಚಿತ ಟೀಸರ್ 8.75M+ ವೀಕ್ಷಣೆಗಳು 372.6K+ ಇಷ್ಟಗಳು
ಸಾರ್ ಸಾರ್ ಹೆಚ್ಚು ಪ್ರಚಾರ ಮಾಡಿದ ಸೀಕ್ವೆಲ್ ಸಾರ್ ಇದು ಎಲ್ಲಾ ದಾಖಲೆಗಳನ್ನು ಮುರಿಯುತ್ತದೆ ಸಾರ್ #ToxicTheMovie #ಯಶ್ಬಾಸ್ pic.twitter.com/yE7gFwQwb1
— ಬ್ರಹ್ಮಚಾರಿ (@mythicMosaic0) ಫೆಬ್ರವರಿ 4, 2026
‘ಧುರಂಧರ’ ಸಿನಿಮಾದಲ್ಲಿ ಬರೋ ಎಂಡ್ ಕ್ರೆಡಿಟ್ ದೃಶ್ಯಗಳನ್ನೇ ‘ಧುರಂಧರ 2’ ಟೀಸರ್ ಎಂದು ರಿಲೀಸ್ ಮಾಡಲಾಗಿದೆ. ಇದು ಚಿತ್ರಕ್ಕೆ ತೀವ್ರ ಹಿನ್ನಡೆ ತಂದಿದೆ. ಇನ್ನು ಹೆಚ್ಚೆಂದರೆ ಟೀಸರ್ 20 ಮಿಲಿಯನ್ ವಿಕ್ಷಣೆ ಕಾಣಿಸುತ್ತದೆ. ಅದಾಗಲೇ, ‘ಟಾಕ್ಸಿಕ್’ ಟೀಸರ್ 100 ಮಿಲಿಯನ್ ಕ್ಲಬ್ ಸೇರಿರುವುದು ಪಕ್ಕಾ. ಎರಡೂ ಟೀಸರ್ ಮಧ್ಯೆ ಸುಮಾರು 80 ಮಿಲಿಯನ್ ವ್ಯತ್ಯಾಸ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.